ಚಿಂತಾಮಣಿ: ನಗರದ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಆರ್.ಪ್ರವೀಣ್, ಕೀಟ ಹಾಗೂ ರೋಗ ವಿಜ್ಞಾನಿ ಅಮೋಘವರ್ಷ ನೇತೃತ್ವದ ತಂಡವು ತಾಲ್ಲೂಕಿನ ಹಲವು ಮಾವಿನ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬೆಳೆಗಾರರಿಗೆ ಸಲಹೆ ನೀಡಿದರು.

ಕೀಟ ಹಾಗೂ ರೋಗ ವಿಜ್ಞಾನಿ ಅಮೋಘವರ್ಷ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆ ಕರ್ನಾಟಕದ ಪ್ರಮುಖ ಮಾವು ಉತ್ಪಾದನಾ ಪ್ರದೇಶಗಳಲ್ಲಿ ಒಂದಾಗಿದ್ದು, ಕೋಲಾರ–ಚಿಕ್ಕಬಳ್ಳಾಪುರ ಪ್ರದೇಶವು ರಾಜ್ಯದ ಒಟ್ಟು ಮಾವು ಉತ್ಪಾದನೆಯಲ್ಲಿ ಮಹತ್ವದ ಪಾಲು ಹೊಂದಿದೆ. ರಾಜ್ಯದಲ್ಲಿ ಸುಮಾರು 1.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಬೆಳೆದಿದ್ದು, ಚಿಕ್ಕಬಳ್ಳಾಪುರ ಸೇರಿದಂತೆ ದಕ್ಷಿಣ ಜಿಲ್ಲೆಗಳು ಸುಮಾರು ಶೇ.60 ರಷ್ಟು ಉತ್ಪಾದನೆಯನ್ನು ನೀಡುತ್ತವೆ ಎಂದರು.

ಜಿಲ್ಲೆಯ ಪ್ರಮುಖ ತಳಿಗಳಾದ ಬಾದಾಮಿ (ಆಲ್ಫಾನ್ಸೋ), ಸಿಂಧೂರ, ತೋತಪುರಿ ಹಾಗೂ ಮಲ್ಲಿಕಾ ಬೆಳೆಸಲಾಗುತ್ತಿದೆ. ಜಿಲ್ಲೆಯಲ್ಲಿನ ಹವಾಮಾನ ಪರಿಸ್ಥಿತಿಯನ್ನು ಗಮನಿಸಿದರೆ ತಾಪಮಾನ ಏರಿಕೆಯಾಗುತ್ತಿದೆ. ಜತೆಗೆ ಇತ್ತೀಚೆಗೆ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಮಳೆಯ ಸಾಧ್ಯತೆ ಇದೆ. ಕೆಲವು ಪ್ರದೇಶಗಳಲ್ಲಿ ಗಾಳಿ ಹಾಗೂ ಆಲಿಕಲ್ಲು ಮಳೆ ಸಂಭವವೂ ಇರುವ ಹಿನ್ನೆಲೆ ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕೆಂದು ಮಾವು ಬೆಳೆಗಾರರಲ್ಲಿ ಮನವಿ ಮಾಡಿದ್ದಾರೆ.

ರೋಗ ನಿರ್ವಹಣೆ ಮಳೆಯ ಮುನ್ನ ಶಿಲೀಂಧ್ರ ರೋಗಗಳನ್ನು ತಡೆಗಟ್ಟಲು ಕಾರ್ಬೆಂಡೈಜಿಮ್ 1 ಗ್ರಾಂ/ಲೀಟರ್ ಅಥವಾ ಕಾಫರ್ ಆಕ್ಸಿಕ್ಲೋರೈಡ್ 2.5 ಗ್ರಾಂ/ಲೀ ದ್ರಾವಣವನ್ನು ಸಿಂಪಡಿಸಬಹುದು. ಬೂದಿ ರೋಗ ನಿಯಂತ್ರಣಕ್ಕಾಗಿ ವೆಟೇಬಲ್ ಸಲ್ಫರ್ 2 ಗ್ರಾಂ/ಲೀ ಅಥವಾ ಹೆಕ್ಸಾಕೋನಜೋಲ್ 1ಮಿ.ಲೀ/ಲೀಟರ್ ಸಿಂಪರಣೆ ಮಾಡಲು ತಿಳಿಸಿದ್ದಾರೆ.

ಒಂದೇ ಔಷಧಿಯನ್ನು ಪುನಃ ಪುನಃ ಬಳಸುವುದನ್ನು ತಪ್ಪಿಸಬೇಕು. ಮಳೆ ಇಲ್ಲದ ಸಮಯದಲ್ಲಿ ಮಾತ್ರ ಸಿಂಪರಣೆ ಮಾಡಬೇಕು.ತೋಟವನ್ನು ವಾರಕ್ಕೊಮ್ಮೆ ಪರಿಶೀಲನೆ ಮಾಡಿ ಅಗತ್ಯವಿದ್ದರೆ ಮಾತ್ರ ಸಿಂಪಡಣೆ ಕೈಗೊಳ್ಳಬೇಕು. ಅತಿಯಾದ ನೈಟ್ರೋಜನ್ ಗೊಬ್ಬರ ಬಳಕೆ ತಪ್ಪಿಸಬೇಕು. ತೋಟಗಳಿಗೆ ನೀರಾವರಿ ಸೌಲಭ್ಯವಿದ್ದಲ್ಲಿ ಕಾಯಿ ಗೋಲಿ ಗಾತ್ರ ತಲುಪಿದ ನಂತರ ನೀರು ಹರಿಸಬೇಕು ಎಂದು ಸೂಚಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-16-2097624265

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.