ಕೈತೋಟಕ್ಕೆ ಕಾಫಿ ಚರಟದ ಗೊಬ್ಬರ

7

ಕೈತೋಟಕ್ಕೆ ಕಾಫಿ ಚರಟದ ಗೊಬ್ಬರ

Published:
Updated:
ಕಾಫಿ

ನಮ್ಮ ಕೈತೋಟದಲ್ಲಿ ಬೆಳೆದ ತರಕಾರಿ ತಿನ್ನುವುದು ಒಂದು ಥರ ಸುಖ. ಕೈತೋಟ ನಿರ್ವಹಣೆ ಒಂದಿಷ್ಟು ಸಮಯವನ್ನೂ, ಕೊಂಚ ಹಣವನ್ನೂ ಬೇಡುವ ಕಲೆ. ಬುಡದ ತೇವಾಂಶ ಕಾಪಾಡುವುದು, ಕೀಟಬಾಧೆ ನಿರ್ವಹಣೆ, ಮಣ್ಣಿನ ಪೋಷಕಾಂಶ ಗಮನಿಸಿಕೊಳ್ಳಲು ಸೂಕ್ಷ್ಮ ಮನಸ್ಸೂ ಇರಬೇಕು ಎನ್ನಿ. ಈಗಂತೂ ಇಂಟರ್ನೆಟ್‌ನಲ್ಲಿ ಕೈತೋಟ ಮಾಡುವ ಬಗ್ಗೆ ರಾಶಿರಾಶಿ ಮಾಹಿತಿ ಸಿಗುತ್ತಿದೆ.

ಮುಂಜಾನೆ ಚಳಿಯಲ್ಲಿ ಸುಡುಬಿಸಿ ಕಾಫಿ ಕುಡಿಯುವುದು ಒಂದು ಸುಖ. ಕಾಫಿಯ ಡಿಕಾಕ್ಷನ್ ತಯಾರಿಸಲು ಬಳಕೆಯಾದ ಪುಡಿಯ ಚರಟವನ್ನು ನೀವೇನು ಮಾಡುತ್ತೀರಿ? ಸುಮ್ಮನೆ ಬಿಸಾಡುವ ಮುನ್ನ ಹೀಗೆ ಯೋಚಿಸಿ. ಕಾಫಿ ಚರಟದಲ್ಲಿ ಗಿಡದ ಬೆಳವಣಿಗೆಗೆ ಸಹಕರಿಸುವ ಸಾರಜನಕ ಸಾಕಷ್ಟಿದೆ. ಗಿಡದ ಬುಡಕ್ಕೆ ಬಿದ್ದ ಕಾಫಿ ಚರಟವು ತೇವಾಂಶ ಕಾಪಾಡುವ ಜೊತೆಗೆ ಬೆಳವಣಿಗೆಗೆ ಪೂರಕವಾದ ಬ್ಯಾಕ್ಟೀರಿಯಾಗಳ ಚಟುವಟಿಕೆಗಳಿಗೆ ಸಹಕರಿಸುತ್ತದೆ.

ಕಾಫಿ ಚರಟವು ಅತಿ ಆಮ್ಲೀಯ ಗುಣ ಹೊಂದಿದೆ. ಅವನ್ನು ಹೆಚ್ಚು ಆಮ್ಲೀಯ ಸ್ವಭಾವ ಬಯಸುವ ಬ್ಲ್ಯೂಬೆರ್ರಿಯಂಥ ಗಿಡಗಳಿಗೆ ಹಾಕುವುದು ಒಳಿತು. ನಿಮ್ಮ ಕೈತೋಟದ ಮಣ್ಣಿನಲ್ಲಿ ಈಗಾಗಲೇ ಸಾರಜನಕದ ಪ್ರಮಾಣ ಸಾಕಷ್ಟು ಇದ್ದರೆ ಕಾಫಿ ಚರಟ ಬಳಸುವ ಸಾಹಸ ಮಾಡಲು ಹೋಗಬೇಡಿ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !