ಸಾಸಲು (ದೊಡ್ಡಬಳ್ಳಾಪುರ): ತಾಲ್ಲೂಕಿನ ಹಾಡೋನಹಳ್ಳಿಯ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದಿಂದ ಕೊಟ್ಟಿಗೆಮಾಚೇನಹಳ್ಳಿ ಮತ್ತು ಹೊಸಹಳ್ಳಿ ಗ್ರಾಮದಲ್ಲಿ ಈರುಳ್ಳಿಯಲ್ಲಿ ಉತ್ತಮ ಬೀಜ ಇಳುವರಿಗೆ ಜೇನುನೊಣಗಳ ಪರಾಗ ಸ್ಪರ್ಶಕ್ರಿಯೆ ಪ್ರಾತ್ಯಕ್ಷಿಕೆ ಕ್ಷೇತ್ರೋತ್ಸವ ಐದು ರೈತರ ತಾಕಿನಲ್ಲಿ ಕೈಗೊಳ್ಳಲಾಗಿತ್ತು.

ಕೃಷಿ ವಿಜ್ಞಾನ ಕೇಂದ್ರದ ಜೇನು ಕೃಷಿ ತಜ್ಞ ಡಾ.ಈಶ್ವರಪ್ಪ ಮಾಹಿತಿ ನೀಡಿ, ಈರುಳ್ಳಿ ಬೆಳೆಯಲ್ಲಿ ಪರಾಗ ಸ್ಪರ್ಶ ಅವಶ್ಯಕತೆ ಇದೆ. ಜೇನುನೊಣ ಹೂವುಗಳಿಂದ ಹೂಗಳಿಗೆ ಪರಾಗ ಸಾಗಿಸಿ ಪರಿಣಾಮಕಾರಿಯಾಗಿ ಪರಾಗಸ್ಪರ್ಶ ನಡೆಸಿ ಪ್ರತಿ ಹೂವು ಗುಚ್ಛದಿಂದ ಹೆಚ್ಚಿನ ಬೀಜ ಉತ್ಪಾದನೆ ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ 4 ರಿಂದ 6 ತುಡುವೆ ಜೇನು ಪೆಟ್ಟಿಗೆಗಳನ್ನು ಒಂದು ಎಕರೆ ಈರುಳ್ಳಿ ಬೆಳೆ ಪ್ರದೇಶದಲ್ಲಿ ಶೇ 10ರ ಹೂವಿನ ಹಂತದಲ್ಲಿ ಅಳವಡಿಸಿ, ಯಾವುದೇ ಕೀಟನಾಶಕ ಬಳಸದೆ ಬೇವಿನ ಎಣ್ಣೆ ಸಿಂಪಡಣೆ ಮಾಡುವುದರಿಂದ ಒಂದು ಹೆಕ್ಟೇರಿಗೆ 450-500 ಕೆ.ಜಿ.ಬೀಜಗಳನ್ನು ರೈತರು ಪಡೆಯಲಿದ್ದಾರೆ ಎಂದರು.

ಪ್ರಾತ್ಯಕ್ಷಿಕೆಯಲ್ಲಿ ರೈತ ರಾಜೇಶ್ ಮಾತನಾಡಿದರು.

ವಿಜ್ಞಾನಿ ಡಾ.ಜಿ.ಕೆ.ನಿಂಗರಾಜು, ಡಾ.ವೈ.ಎಂ.ಗೋಪಾಲ್, ಡಾ.ಬಾಲಾಜಿನಾಯಕ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-15-779670969

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.