ಗುಂಡ್ಲುಪೇಟೆ: ತಾಲ್ಲೂಕಿನ ಹಂಗಳ ಹೊಸಹಳ್ಳಿ ಗ್ರಾಮದ 100ಕ್ಕೂ ಅಧಿಕ ರೈತರಿಗೆ ತಮಿಳುನಾಡಿನ ಊಟಿ ಮೂಲದ ಭಾರತೀಯ ಮಣ್ಣು ಹಾಗೂ ನೀರು ಸಂರಕ್ಷಣಾ ಸಂಸ್ಥೆ ಹಾಗೂ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಸಂಶೋಧನ ಕೇಂದ್ರದ ವತಿಯಿಂದ ಗುಣಮಟ್ಟದ ಸೂರ್ಯಕಾಂತಿ ಬಿತ್ತನೆ ಬೀಜ ವಿತರಣೆ ಮಾಡಲಾಯಿತು.

ವಿಜ್ಞಾನಿ ಡಾ.ವನಿತಾ, ಮಳೆಯಾದಾರಿತ ಬೇಸಾಯ ಪದ್ಧತಿಯಲ್ಲಿ ವೈವಿಧ್ಯತೆ ಮತ್ತು ಆಧುನಿಕ ತಂತ್ರಜ್ಞಾನಗಳ ಅಗತ್ಯತೆಯನ್ನ ಕುರಿತು ವಿವರಣೆ ನೀಡಿದರು. ವರಿಷ್ಠ ವಿಜ್ಞಾನಿ ಡಾ.ಹೊಂಬೆಗೌಡ, ಮಣ್ಣು ಹಾಗೂ ನೀರಿನ ಸಂರಕ್ಷಣೆ ಮಹತ್ವದ ಬಗ್ಗೆ ಅರಿವು ಮೂಡಿಸಿ, ಹವಾಮಾನ ವೈಪ್ಯರೀತ್ಯದಿಂದಾಗುವ ಕೃಷಿ ಸಮಸ್ಯೆಗಳ ಪರಿಹಾರಕ್ಕಾಗಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.

ಸೂರ್ಯಕಾಂತಿ ಬೆಳೆ ಬೆಳೆಯನ್ನ ಸಮೃದ್ಧವಾಗಿ ಬೆಳೆಯಲು ಅಗತ್ಯ ಕ್ರಮಗಳ ಪಾಲನೆ ಕುರಿತಂತೆ ಕೃಷಿಶಾಸ್ತ್ರ ವಿಜ್ಞಾನಿ ಡಾ.ರಂಜಿತ್ ಮಾರ್ಗದರ್ಶನ ನೀಡಿದರು.

ಮುಖಂಡರಾದ ದೊಡ್ಡರಾಜು ಬೆಂಡರವಾಡಿ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ಗ್ರಾಮಸ್ಥರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-37-247235468

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.