ಬ್ಯಾಡಗಿ: ಅನ್ನದಾತರ ಜೀವನಾಡಿಯಾಗಿರುವ ಕೃಷಿ ಹೊಂಡಗಳನ್ನು ಪ್ರತಿಯೊಬ್ಬ ರೈತರು ನಿರ್ಮಿಸಿಕೊಳ್ಳಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಮಲ್ಲಿಕಾರ್ಜುನ ಹೇಳಿದರು

ತಾಲ್ಲೂಕಿನ ಚಿಕ್ಕಳ್ಳಿ ಗ್ರಾಮದ ಇಮುಸಾಬ ಸೂಡಂಬಿ ಅವರ ಹೊಲದಲ್ಲಿ ಈಚೆಗೆ ಕೃಷಿ ಇಲಾಖೆ ಆಯೋಜಿಸಿದ್ದ ಕೃಷಿ ಹೊಂಡ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೀರು ಕೃಷಿ ಜೊತೆಗೆ ಪ್ರತಿಯೊಂದು ಜೀವಿಗೂ ಅಗತ್ಯವಿದೆ. ಬೆಳೆಗಳಿಗೆ ಶುದ್ಧವಾದ ನೀರು ಪೂರೈಸುವಲ್ಲಿ ಕೃಷಿ ಹೊಂಡದ ಪಾತ್ರ ದೊಡ್ಡದು. ಮಳೆಗಾಲದಲ್ಲಿ ಕೃಷಿ ಹೊಂಡದಲ್ಲಿ ಸಂಗ್ರಹಿಸಿದ ಬೇಸಿಗೆ ಕಾಲದ 2-3 ತಿಂಗಳ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು. ಕಾರಣ ಸರ್ಕಾರದ ಅನುದಾನ ಕಡಿಮೆಯಾಗಿದ್ದರೂ ಚಿಂತಿಸದೆ ಕೃಷಿ ಹೊಂಡ ನಿರ್ಮಿಸಿಕೊಂಡು ಉತ್ತಮ ಆದಾಯ ಪಡೆಯಬಹುದು ಎಂದರು.

ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ಮಾತನಾಡಿ, ನೂರಾರು ಸಮಸ್ಯೆಗಳ ಪರಿಹಾರಕ್ಕೆ ನೀರು ಪರಿಹಾರವಾಗಬಲ್ಲದು. ಅದಕ್ಕಾಗಿ ಹೊಲಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ಅದರ ಸದುಪಯೋಗ ಪಡೆದುಕೊಂಡು ಉತ್ತಮ ಬೆಳೆ ಬೆಲೆಯಲು ಮುಂದಾಗಬೇಕೆಂದು ಸಲಹೆ ನೀಡಿದರು.

ಈ ವೇಳೆ ನಾಗರಾಜ ಬನ್ನಿಹಟ್ಟಿ ಮೃತ್ಯುಂಜಯ ಕುಳೇನೂರ, ಕೃಷಿಕರಾದ ಮಲ್ಲಿಕಾರ್ಜುನ ಕಚವಿ, ರುದ್ರಗೌಡ ಕಾಡನಗೌಡ್ರ, ಷಣ್ಮುಖಪ್ಪ ಮುಳತಳ್ಳಿ, ಮಂಜುನಾಥ ಲಕ್ಕಮ್ಮನವರ, ಗಂಗಯ್ಯ ಕುಲಕರ್ಣಿ ಇದ್ದರು.

ಚಿಕ್ಕಬಾಸುರ, ಬೀರನಕೊಪ್ಪ, ಮತ್ತೂರ, ಸಿದ್ದಾಪುರ, ದಾಸನಕೊಪ್ಪ, ಸೈಡಂಬಿ, ಹಿರೇಹಳ್ಳಿ, ನೆಲ್ಲಿಕೊಪ್ಪ ಮುಂತಾದ ಗ್ರಾಮಗಳಿಂದ ಆಗಮಿಸಿದ್ದ ರೈತರು ಕೃಷಿ ಹೊಂಡ ವೀಕ್ಷಿಸಿ ಸಂತಸಗೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-22-396712065

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.