ಹಳೆಊರು(ಹೊಸಕೋಟೆ): ಡಿಪ್ಲೋಮಾ ಇನ್ ಸಿವಿಲ್ ಎಂಜಿನಿಯರಿಂಗ್ ಪದವೀಧರನೊಬ್ಬ ಯಾಂತ್ರಿಕೃತ ಮಿಶ್ರ ಕೃಷಿ ಪದ್ಧತಿ ಮೂಲಕ ಯಶಸ್ವಿ ರೈತನಾದ ಕತೆ ಇದು.

ಹಳೆಊರಿನ ಯು. ಸತೀಶ್ 50 ಎಕೆರೆಯಲ್ಲಿ ಮಿಶ್ರ ಬೆಳೆ ಬೆಳೆದು ಕೋಟ್ಯಂತರ ರೂಪಾಯಿ ಲಾಭಗಳಿಸುತ್ತಿದ್ದಾರೆ. ಜತೆಗೆ ಹತ್ತಾರು ಜನರಿಗೆ ಉದ್ಯೋಗ ನೀಡಿದ್ದಾರೆ.

ಎಂಜಿನಿಯರಿಂಗ್ ಪದವಿ ಗಳಿಸಿ ಮೊತ್ತೊಬ್ಬರ ಕೈಕೆಳಗೆ ತಾನೇಕೆ ಕೆಲಸ ಮಾಡಬೇಕು ಎಂದು ಆಲೋಚಿಸಿದ ಸತೀಶ್ ಪೂರ್ವಜರ ಜಮೀನಿನಲ್ಲಿ ಕೃಷಿ ಮಾಡಲು ನಿರ್ಧರಿಸಿದರು. ಏನೆಲ್ಲಾ ಮತ್ತು ಹೇಗೆಲ್ಲಾ ಕೃಷಿ ಮಾಡಬಹುದೆಂದು ಯೂಟ್ಯೂಬ್ನಲ್ಲಿ ವೀಕ್ಷಿಸಿದ ಬಳಿಕ ಬೆಂಗಳೂರಿನ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ನೆರವು ಹಾಗೂ ಹೊಸಕೋಟೆಯ ತೋಟಗಾರಿಕೆ ಇಲಾಖೆ ಸಹಕಾರೊಂದಿಗೆ ಕೃಷಿ ಎಂಜಿನಿರಿಂಗ್ ಆರಂಭಿಸಿದರು. ಇವರ ತಂದೆ ಉತ್ತನಳ್ಳಪ್ಪ ಮತ್ತು ತಮ್ಮ ಯು.ಹರೀಶ್ ಬೆಂಬಲಕ್ಕೆ ನಿಂತರು. ಇದರ ಫಲವಾಗಿ ಮಿಶ್ರಬೆಳೆ ಲಾಭ ತಂದುಕೊಟ್ಟಿತು.

50 ಎಕರೆ ಜಮೀನಿನಲ್ಲಿ ವಿವಿಧ ಬೆಳೆಯುತ್ತಿದ್ದಾರೆ. ಎಂಟು ಎಕರೆಯಲ್ಲಿ ದಾಳಿಂಬೆ, ನಾಲ್ಕು ಎಕರೆಯಲ್ಲಿ ದ್ರಾಕ್ಷಿ, 13 ಎಕರೆಯಲ್ಲಿ ಮಾವು, ನಾಲ್ಕು ಎಕರೆಯಲ್ಲಿ ಸೀಬೆ, 13 ಎಕರೆಯಲ್ಲಿ ಮುಸ್ಕಿನ್ ವೈಟ್ ಸೇವಂತಿ ಹೂ ಹಾಗೂ ಉಳಿದ ಜಾಗದಲ್ಲಿ ರಾಗಿ ಬೆಳೆದಿದ್ದಾರೆ. ಕೇವಲ 4 ಇಂಚು ನೀರಿನಲ್ಲಿಯೇ 35 ಎಕರೆ ಬೆಳೆಗೆ ಡ್ರಿಪ್ ಮೂಲಕ ನೀರು ಉಣಸುತ್ತಿದ್ದಾರೆ.

‘ಎಂಜಿನಿಯರ್ ಡಿಪ್ಲೊಮಾ ಪೂರ್ಣಗೊಳಿಸಿ ಕಂಪನಿಯೊಂದಕ್ಕೆ ಕೆಲಸಕ್ಕೆ ಸೇರಿದೆ. ಅಲ್ಲಿನ ವಾತಾವರಣ ಇಷ್ಟ ಆಗಲಿಲ್ಲ. ತಂದೆಯ ತೋಟ ಇರಬೇಕಾದರೆ ಇಲ್ಲಿ ಆಳಾಗಿ ಮತ್ತೊಬ್ಬರ ಮಾತು ಕೇಳಿಕೊಂಡು ಏಕೆ ಕೆಲಸ ಮಾಡಬೇಕು. ನಮ್ಮ ತೋಟದಲ್ಲಿ ಮಾಲೀಕನಾಗಿ ದುಡಿಯುವುದೇ ಲೇಸು ಎಂದುಕೊಂಡು ವ್ಯವಸಾಯಕ್ಕೆ ಇಳಿದೆ’ ಎಂದು ಸತೀಶ್ ತಮ್ಮ ಯಶೋಗಾಥೆಯನ್ನು ‘ಪ್ರಜಾವಾಣಿ’ ಯೊಂದಿಗೆ ಹಂಚಿಕೊಂಡರು.

‘ಯಾವುದಾದರೂ ಒಂದು ಬೆಳೆ ಕೈಕೊಟ್ಟರೂ ಮತ್ತೊಂದು ಬೆಳೆ ಕೈಹಿಡಿಯುತ್ತದೆ. ಹೀಗಾಗಿ ಯಾಂತ್ರಿಕೃತ ಬೇಸಾಯ ಆರಂಭಿಸಿದೆ. ಮೊದಲ ವರ್ಷದ ಪ್ರಯೋಗವೇ ಕೈ ಹಿಡಿಯಿತು. ಇದರ ಫಲವಾಗಿ ಕಳೆದ 12 ವರ್ಷದಿಂದ ಯಶಸ್ವಿಯಾಗಿ ಬೇಸಾಯ ಮಾಡುತ್ತಿದ್ದೇನೆ. ಉತ್ತಮ ಆದಾಯ ಗಳಿಸುತ್ತಿದ್ದೇನೆ. ಹತ್ತಾರು ಕುಟುಂಬಕ್ಕೆ ನೀಡಿದ್ದೇನೆ’ ಎಂದು ಸಂತೃಪ್ತಿ ವ್ಯಕ್ತಪಡಿಸಿದರು.

ಪಶುಸಂಗೋಪನೆ: ‘ಮನೆಗೆ ಹಾಲು ಮೊಸರಿಗಾಗಿ ಮೂರು ಮುರ್ರಾ ಎಮ್ಮೆ, ತುರ್ತು ಸಂದರ್ಭಕ್ಕೆ ಮಾರಿದರೆ ಹಣ ಸಿಗುತ್ತೆ ಎಂದು 60 ಚಳ್ಳಕೆರೆ ಕುರಿ, 20 ಕೋಳಿ ಸಾಕುತ್ತಿರುವುದರಿಂದ ಆದಾಯ ಬರುವ ಜತೆಗೆ ಬಹುುಪಯೋಗ ಆಗುತ್ತಿದೆ. ತೋಟಕ್ಕೆ ಗೊಬ್ಬರ, ತೋಟದಲ್ಲಿ ಕಳೆ ಬಂದರೆ ಕಳೆ ನಾಶಕ ಬಳಸದೆ ಕುರಿಗಳನ್ನು ಬಿಟ್ಟು ಮೇಯಿಸುತ್ತೇನೆ. ಇದರಿಂದ ಭೂಮಿಯ ಸಾರವನ್ನು ಕಾಪಾಡಿದಂತಾಗುತ್ತದೆ. ಇದರ ಜೊತೆ ಮನೆಗೆ ಬೇಕಾಗುವಷ್ಟು ಸಾವಯವ ತರಕಾರಿ ಬೆಳೆದುಕೊಳ್ಳುತ್ತೇವೆ. ಇದರಿಂದ ಮನೆ ಖರ್ಚು ಸಹ ಉಳಿತಾಯವಾಗುತ್ತಿದೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-15-732059776

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.