ಹುಳಿಯಾರು: ಭರಣಿ ಮಳೆ ಆರಂಭಕ್ಕೆ ನಾಲ್ಕು ದಿನ ಬಾಕಿ ಇದೆ. ಮಳೆ ಸಿಂಚನವೇ ಇಲ್ಲದಿರುವುದರಿಂದ ಈ ಬಾರಿ ಪೂರ್ವ ಮುಂಗಾರಿನ ಹೆಸರು ಬಿತ್ತನೆ ಹಿನ್ನಡೆ ಸಾಧ್ಯತೆ ಹೆಚ್ಚಾಗಿದೆ.

ಯುಗಾದಿ ನಂತರ ಹೊಸ ಮಳೆ ಆರಂಭವಾಗಿ ಅಶ್ವಿನಿ ಮಳೆ ಬರೀ ಬಿಸಿಲಿನಲ್ಲಿಯೇ ಕಳೆದು ಹೋಗುತ್ತಿದೆ. ಭರಣಿ ಮಳೆ ಬಿತ್ತನೆಗೆ ಪೂರ್ವ ಮುಂಗಾರಿನ ಬೆಳೆಗಳಾದ ಹೆಸರು, ಅಲಸಂದೆ, ಉದ್ದು, ಹರಳು ಸೇರಿದಂತೆ ಇತರ ಬೀಜಗಳ ಬಿತ್ತನೆಗೆ ಸಕಾಲವಾಗಿದೆ. ಅಶ್ವಿನಿ ಮಳೆ ಬಂದರೆ ರೈತರು ಹಿಂಗಾರು ಬೆಳೆಯನ್ನು ಕೊಯ್ಲು ಮಾಡಿದ್ದ ಹೊಲಗಳನ್ನು ಸ್ವಚ್ಛಗೊಳಿಸಿ ಮುಂಗಾರು ಬೀಜ ಬಿತ್ತನೆಗೆ ಅಣಿಗೊಳಿಸಿಕೊಳ್ಳುತ್ತಿದ್ದರು. ಆದರೆ ನೆಲಕ್ಕೆ ಒಂದು ಹನಿಯೂ ಹನಿಯದೆ ಬಿರು ಬಿಸಿಲು ರೈತರನ್ನು ಹೈರಾಣಾಗಿಸಿದೆ.

ಭರಣಿ ಮಳೆ ಆರಂಭದಲ್ಲಿ ಬಂದರೆ ಬೇಗ ಹೊಲ ಸ್ವಚ್ಛಗೊಳಿಸಿ ಬಿತ್ತನೆ ಮಾಡಲು ಸಾಧ್ಯ. ಕಳೆದ ವರ್ಷವೂ ಸಹ ಪೂರ್ವ ಮುಂಗಾರು ಕೈ ಹಿಡಿಯಲಿಲ್ಲ. ಮಳೆಗಾಲದ ಆರಂಭದಲ್ಲಿ ಮಳೆ ಬಂದು ಬೀಜ ಬಿತ್ತನೆ ಮಾಡಿದರೆ ನಂತರ ಅದೇಹೊಲಗಳನ್ನು ಸ್ವಚ್ಛಗೊಳಿಸಿ ರಾಗಿ,ನವಣೆ, ಜೋಳ ಬಿತ್ತನೆ ಮಾಡುತ್ತಾರೆ.

ಈಗಾಗಲೇ ಕುಡಿಯುವ ನೀರು ಸೇರಿದಂತೆ ಅಡಿಕೆ, ತೆಂಗು ಬೆಳೆ ಒಣಗಿಹೋಗಿದ್ದು ರೈತರು ಕೊಳವೆಬಾವಿ ಕೊರೆಸಿ ನೀರು ಬಾರದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-18-1792401226

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.