ಹುಣಸೂರು: ‘ಪುಷ್ಪ ಬೇಸಾಯ ರೈತರಿಗೆ ಆರ್ಥಿಕವಾಗಿ ಪೂರಕವಾಗಿದ್ದು, ಸಣ್ಣ ಹಿಡಿವಳಿದಾರರು ಒಂದು, ಎರಡು ಗುಂಟೆ ಪ್ರದೇಶದಲ್ಲಿ ಬೇಸಾಯ ಮಾಡಿ ಕುಟುಂಬ ನಿರ್ವಹಣೆಗೆ ಆರ್ಥಿಕ ಬೆಂಬಲ ಗಳಿಸಬಹುದಾಗಿದೆ’ ಎಂದು ಪ್ರಗತಿಪರ ರೈತ ಬನ್ನಿಕುಪ್ಪೆ ಗ್ರಾಮದ ಚೆಲುವರಾಜು ಹೇಳಿದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ದಲ್ಲಾಳು ಕೊಪ್ಪಲು ಮತ್ತು ಬನ್ನಿಕುಪ್ಪೆ ಗ್ರಾಮದಲ್ಲಿ ಪ್ರಗತಿಪರ ರೈತರಿಗೆ ಈಚೆಗೆ ಹಮ್ಮಿಕೊಂಡಿದ್ದ ಪುಷ್ಪ ಬೇಸಾಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಪುಷ್ಪ ಬೇಸಾಯ ಸಣ್ಣದಾಗಿ ಕಂಡರೂ ವರ್ಷದ ಎಲ್ಲಾ ದಿನವೂ ಆರ್ಥಿಕ ವರಮಾನ ಪಡೆಯಬಹುದು. ಹೈನುಗಾರಿಕೆಯಲ್ಲಿ ನಿಖರವಾಗಿ ಹಣ ಸಿಗುವ ಮಾದರಿಯಲ್ಲಿ ಹೂವಿಗೂ ನಿತ್ಯ ಬೇಡಿಕೆ ಇದ್ದು, ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗಲಿದೆ. ಬೇಡಿಕೆಯಲ್ಲಿರುವ ಮೈಸೂರು ಮಲ್ಲಿಗೆ, ಕನಕಾಂಬರ, ಗುಲಾಬಿ, ಕಾಕಡ, ಪನ್ನೇರಳೆ, ಸುಗಂಧರಾಜ ಹೂವುಗಳನ್ನು ಬೆಳೆದು ಆರ್ಥಿಕವಾಗಿ ಸಧೃಡರಾಗಬಹುದು. ಹೆಚ್ಚಿನ ಕೃಷಿ ಕಾರ್ಮಿಕರ ಅವಶ್ಯಕತೆಯೂ ಇಲ್ಲ’ ಎಂದರು.

ಕೃಷಿ ಇಲಾಖೆ ಮೇಲ್ವಿಚಾರಣಾಧಿಕಾರಿ ಮಹೇಶ್ ಮಾತನಾಡಿ, ‘ನೀರಾವರಿ ವ್ಯವಸ್ಥೆ ಇರುವ ರೈತರು ಮನೆ ಖರ್ಚಿಗೆ ಎರಡು ಗುಂಟೆ ವಿಸ್ತೀರ್ಣದಲ್ಲಿ ಹೂವಿನ ಬೇಸಾಯ ಮಾಡುವುದು ಒಳಿತು’ ಎಂದರು.

‘ಹೂವಿನ ಬೇಸಾಯಕ್ಕೆ ಹೆಚ್ಚಿನ ನೀರು ಅವಶ್ಯಕವಿಲ್ಲ, ಕಡಿಮೆ ನೀರಿನಲ್ಲಿ ಬೆಳೆಯಬಹುದು. ತೋಟಗಾರಿಕೆ ಇಲಾಖೆಯಿಂದ ವಿವಿಧ ತಳಿಗಳನ್ನು ನೀಡಿ ಉತ್ತೇಜಿಸಲಾಗುತ್ತಿದ್ದು, ರೈತರು ನಿಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಸಲಹೆ ಪಡೆಯಬಹುದು’ ಎಂದರು.

ಕಾರ್ಯಗಾರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪುನೀತ್ ಮಾತನಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-38-691027411

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.