ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರಿಕೆಗೆ ಏಕರೂಪ ಕಾನೂನು ಅಗತ್ಯ

ಸಭೆ ಕರೆಯದ ಕೇಂದ್ರ: ಸಚಿವ ಪ್ರಮೋದ್‌ ಮಧ್ವರಾಜ್‌
Last Updated 3 ಮಾರ್ಚ್ 2018, 9:43 IST
ಅಕ್ಷರ ಗಾತ್ರ

ಉಡುಪಿ: ‘ಇಂದು ಅಗತ್ಯಕ್ಕಿಂತ ಹೆಚ್ಚು ಮೀನು ಹಿಡಿಯುತ್ತಿರುವುದು ಮತ್ಯ್ಯ ಸಂತತಿ ನಾಶಕ್ಕೆ ಕಾರಣವಾಗಿದೆ’ ಎಂದು ಮೀನುಗಾರಿಕ ಸಚಿವ ಪ್ರಮೋದ್‌ ಮಧ್ವರಾಜ್‌ ಆತಂಕ ವ್ಯಕ್ತಪಡಿಸಿದರು.

ಮೀನುಗಾರಿಕೆ ಇಲಾಖೆ, ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧ ಸಂಸ್ಥೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ‘ ನೀಲಿ ಕ್ರಾಂತಿ ಯೋಜನೆಯಡಿ ಸಮುದ್ರ ಮೀನುಗಾರಿಕೆ’ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮೀನುಗಾರಿಕೆಯಲ್ಲಿ ಯಾವಾಗ ಆಧುನೀಕರಣ, ಯಾಂತ್ರೀಕರಣ ಹೆಚ್ಚಾಗಿ ವಾಣಿಜ್ಯದ ಉದ್ದೇಶವೇ ಮೇಲುಗೈ ಪಡೆಯಿತೋ ಅಂದಿನಿಂದ ಇಂದಿನವರೆಗೆ ಮೀನಿನ ಸಂತತಿ ನಾಶವಾಗುತ್ತಲೇ ಇದೆ. ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಮುದ್ರದಲ್ಲಿ ಮೀನುಗಾರಿಕೆಯನ್ನು ಮಿತಿಯಿಲ್ಲದೇ ನಡೆಸುತ್ತಿದ್ದಾರೆ. ಇದು ಮತ್ಸ್ಯ ಸಂಪನ್ಮೂಲ ಅವನತಿಗೆ ಮೂಲ ಕಾರಣ. ದೇಶದಲ್ಲಿ ಏಕರೂಪ ಕಾನೂನು ತರವು ನಿಟ್ಟಿನಲ್ಲಿ ಚರ್ಚಿಸಲು ವಿವಿಧ ರಾಜ್ಯ ಮೀನುಗಾರಿಕಾ ಸಚಿವರ ಸಭೆ ಕರೆಯುವಂತೆ ಕೇಂದ್ರ ಕೃಷಿ ಸಚಿವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.

ಪೂರ್ವಿಕರಿಗೆ ಮೀನುಗಾರಿಕೆ ಕುರಿತು ಜಾಗೃತಿ ಮೂಡಿಸಲು ರಾಜರ, ವಿಜ್ಞಾನಿಗಳ ಹಾಗೂ ಸಂಸ್ಥೆಗಳ ಅನಿರ್ವಾಯತೆ ಇರಲಿಲ್ಲ. ಮೀನು ಮೊಟ್ಟೆ ಇಡುವ ಸಂದರ್ಭದಲ್ಲಿ ಮೀನುಗಾರಿಕೆಯನ್ನು ಸಂಪೂರ್ಣ ನಿಷೇಧವಾಗಿತ್ತು. ಅವರ ಬಿಟ್ಟು ಹೋದ ಮತ್ಸ್ಯ ಸಂಪತ್ತಿನ ಪ್ರಯೋಜನವನ್ನು ಮುಂದಿನ ಪೀಳಿಗೆಗೆ ಸಿಗುವಂತೆ ಮಾಡುವ ಮಹತ್ವದ ಜವಾಬ್ದಾರಿ ಮೀನುಗಾರರ ವೃತ್ತಿಯಲ್ಲಿ ತೊಡಗಿಸಿಕೊಂಡವರ ಮೇಲಿದೆ ಎಂದರು.

ಸೂರ್ಯ ಚಂದ್ರ ಇರುವವವರೆಗೂ ಮೀನುಗಾರಿಕೆ ನಡೆಯಲಿದೆ. ಇದಕ್ಕೆ ಆರಂಭ ಹಾಗೂ ಅಂತ್ಯ ಎನ್ನುವ ಪರಿಧಿಯಿಲ್ಲದೇ ನಿರಂತವಾಗಿ ನಡೆಯುತ್ತಿರಲ್ಲಿ. ದೊಡ್ಡ ಹಾಗೂ ಚಿಕ್ಕ ಮಟ್ಟದಲ್ಲಿ ಮೀನುಗಾರಿ ತೊಡಗಿಸಿಕೊಂಡವರು ಎಲ್ಲಾ ಒಂದಾಗಿ ಮೀನುಗಳ ಸಂತತಿಯನ್ನು ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು.

ಮೀನುಗಾರಿಕ ಇಲಾಖೆವತಿಯಿಂದ ಮೀನುಗಾರರಿಗೆ ಸಲಕರಣೆಗಳನ್ನು ವಿತರಿಸಲಾಯಿತು. ಮೀನುಗಾರಿಕೆಯ ಕುರಿತು ತಜ್ಞರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ, ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧ ಸಂಸ್ಥೆಯ ಮುಖ್ಯಸ್ಥೆ ಡಾ. ಪ್ರತಿಭಾ ರೋಹಿತ್‌ ಉಪಸ್ಥಿತರಿದ್ದರು.
***
ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ

ಉಡುಪಿ ತಾಲ್ಲೂಕಿನ ಮೀನುಗಾರ ಮಹಿಳೆಯರಿಗಾಗಿ ನೀಡಿದ ಸಾಲದ ಮೇಲಿನ ಬಡ್ಡಿಯನ್ನು ರಾಜ್ಯ ಸರ್ಕಾರ ತುಂಬಿದೆ. ಜನವರಿ ವರೆಗಿನ ಡಿಸೇಲ್‌ ಸಬ್ಸಿಡಿ ಬಿಲ್‌ ಪಾವತಿ ಮಾಡಿದೆ. ಹಿಂದೆ ಮಹಿಳಾ ಮೀನುಗಾರರಿಗೆ ಶೇ 2ರ ಬಡ್ಡಿದರದಲ್ಲಿ ₹50 ಸಾವಿರ ಸಾಲವನ್ನು ನೀಡಲಾಗುತ್ತಿತ್ತು ಎಂದು ಎಂದು ಮೀನುಗಾರಿಕ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಹೇಳಿದರು.

ಬಜೆಟ್‌ನಲ್ಲಿ ಘೋಷಣೆಯಂತೆ ಏಪ್ರಿಲ್‌ ನಂತರ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತದೆ. ಪ್ರತಿ ಮೀನು ಮಾರುಕಟ್ಟೆಯಲ್ಲಿ ₹10ಲಕ್ಷ ವೆಚ್ಚದಲ್ಲಿ ಮೀನಿನ ಶೈತ್ಯಗಾರವನ್ನು ನಿರ್ಮಿಸಲಾಗುತ್ತದೆ. ಇದರಿಂದಾಗಿ ನಷ್ಟಮಾಡಿಕೊಂಡು ಮೀನು ಮಾರಾಟ ಮಾಡುವುದು ತಪ್ಪುತ್ತದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಮಲ್ಪೆ ಮೀನುಗಾರಿಕ ಬಂದರಿನಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ, ಯೂರೋಪ್ ರಾಷ್ಟ್ರದಿಂದ ಅಧಿಕಾರಿಗಳು ಬಂದರಿನ ಸ್ವಚ್ಛತೆಯ ತಪಾಸಣೆಗೆ ಬರುವ ಸಾಧ್ಯತೆಗಳಿವೆ. ನೈರ್ಮಲ್ಯದಿಂದ ಕೂಡಿದ ಬಂದರಿನಿಂದ ಮೀನುಗಳ ರಫ್ತು ನಿಷೇಧಿಸುತ್ತಾರೆ. ಪರಿಸರ ಸ್ವಚ್ಛತೆಯ ಕುರಿತು ಗಮನ ಹರಿಸುವುದು ಎಲ್ಲಾ ಮೀನುಗಾರರ ಕರ್ತವ್ಯ. ಮೀನು ಸಂತತತಿ ಕೂಡಾ ಹೆಚ್ಚಾಗಬೇಕು ಎಂದರು.
***
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT