ಕೂಡಲಸಂಗಮ: ‘ಜೋಡೆತ್ತಿನ ಕೃಷಿಯನ್ನು ಭಾರತದ ಸಂವಿಧಾನ, ಬಸವ ತತ್ವದ ಮೂಲ ಬೇರು ಎಂದು ಗುರುತಿಸಿ ಜೋಡೆತ್ತಿನ ರೈತರಿಗೆ ಪ್ರತಿ ತಿಂಗಳು ₹11 ಸಾವಿರ ಪ್ರೋತ್ಸಾಹ ಧನವನ್ನು ಸರ್ಕಾರ ನೀಡಬೇಕು’ ಎಂದು ನಂದಿ ಕೂಗು ಅಭಿಯಾನ ಪಾದಯಾತ್ರೆ ಸಂಚಾಲಕ ಬಸವರಾಜ ಬಿರಾದಾರ ಹೇಳಿದರು.

ಕೂಡಲಸಂಗಮದ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ನಂದಿ ಕೂಗು ಅಭಿಯಾನ ಪಾದಯಾತ್ರೆ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.

‘ಏ.30 ರಂದು ಬೀದರ ಜಿಲ್ಲೆ ಬಸವ ಕಲ್ಯಾಣದಿಂದ ಪಾದಯಾತ್ರೆ ಆರಂಭಿಸಿ ಕೂಡಲಸಂಗಮದಲ್ಲಿ ಪಾದಯಾತ್ರೆ ಮುಕ್ತಾಯ ಮಾಡಿದೆ. ನಂದಿಯನ್ನು ರಾಷ್ಟ್ರೀಯ ಶಕ್ತಿ ಎಂದು ಘೋಷಿಸಿ ರಾಜ್ಯವಾರು ಪ್ರತಿಶತ 10 ಅನುದಾನ ಮೀಸಲಿಡುವ ಕಾನೂನು ಜಾರಿಗೆ ತಂದು ನಂದಿಯನ್ನು ಉಳಿಸುವ ಕಾರ್ಯ ಸರ್ಕಾರ ಮಾಡಬೇಕು’ ಎಂದರು.

‘ಪಾದಯಾತ್ರೆಯುದ್ದಕ್ಕೂ ಜೋಡೆತ್ತಿನ ಕೃಷಿ ಕುರಿತು ರೈತರಿಗೆ ಜಾಗೃತಿ ಮೂಡಿಸಿದೆ. ರೈತರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಜೋಡೆತ್ತಿನ ಕೃಷಿ, ಸರ್ಕಾರ ಜೋಡೆತ್ತಿನ ಕೃಷಿಗೆ ಪ್ರೋತ್ಸಾಹ ನೀಡಬೇಕು. ಎತ್ತುಗಳನ್ನು ಉಳಿಸುತ್ತೆವೆ ಎನ್ನುವ ಜನಪ್ರತಿನಿಧಿಗಳಿಗೆ ರೈತರು ಮತದಾನ ಮಾಡುವ ಸಂಕಲ್ಪ ಮಾಡಬೇಕು’ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ನಂದಿ ಕೂಗು ಅಭಿಯಾನದ ರೂವಾರಿ ಸೋಮಲಿಂಗ ಪಾಟೀಲ ಮಾತನಾಡಿ, ‘ಜೋಡೆತ್ತಿನ ಕೃಷಿಯಿಂದ ರೈತರು ವಿಮುಕ್ತವಾದ ಪರಿಣಾಮ ಶೇ 60ರಷ್ಟು ಭೂಮಿಯ ಫಲವತ್ತತ್ತೆಯನ್ನು ಕಳೆದುಕೊಂಡಿದ್ದೇವೆ. ಯಂತ್ರಗಳನ್ನು ಬಿಟ್ಟು ಜೋಡೆತ್ತಿನ ಕೃಷಿಯ ಕಡೆ ರೈತರನ್ನು ಕರೆದುಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ತಿಳಿಸಿದರು.

ರಾಜ್ಯ ಕೃಷಿ ತಂತ್ರಜ್ಞರ ಸಂಸ್ಥೆಯ ನಿರ್ದೇಶಕ ವೆಂಕನಗೌಡ ಪಾಟೀಲ ಮಾತನಾಡಿ, ‘ರೈತರ ಏಳಿಗೆಗೆ ಶ್ರಮಿಸಬೇಕಾದ ಕೃಷಿ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರದಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದಾರೆ. ಇಂತಹ ಅಧಿಕಾರಿಗಳಿಗೆ ರೈತರನ್ನು ದತ್ತು ನೀಡಿ ರೈತರ ಅಭಿವೃದ್ಧಿಗೆ ಶ್ರಮಿಸುವಂತೆ ಮಾಡಬೇಕು. ಅಂದಾಗ ರೈತರ ಅಭಿವೃದ್ಧಿ ಸಾಧ್ಯ. ವಿಭಕ್ತ ಕುಟುಂಬದಿಂದ ಕೃಷಿ ಮಾಯವಾಗುತ್ತಿದೆ’ ಎಂದು ಹೇಳಿದರು.

ಇಳಕಲ್ಲ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ‘ದೇಶದ ಅಭಿವೃದ್ಧಿ ರೈತರಿಂದ, ಕೃಷಿ ಸಂಸ್ಕೃತಿ ಉಳಿಸಿ, ಬೆಳೆಸುವ ಕಾರ್ಯವನ್ನು ಎಲ್ಲರೂ ಮಾಡಬೇಕು’ ಎಂದರು.

ಸಮಾರಂಭದಲ್ಲಿ ಸಂಗಮೇಶ್ವರ ಉಚಿತ ಪ್ರಸಾದ ನಿಲಯದ ಅಧ್ಯಕ್ಷ ಜಿ.ಜಿ.ಪಾಟೀಲ, ಬಾಗಲಕೋಟೆ ಬಸವೇಶ್ವರ ವಿದ್ಯಾವರ್ಧಕ ಸಂಘದ ನಿರ್ದೇಶಕ ಮಹೇಶ ಅಥಣಿ, ಪುನರ್ ವೈಭವಂ ಫೌಂಡೇಶನ ಸ್ಥಾಪಕ ಆಕಾಶ್ ಮೊಳಕೇರಿ ಮುಂತಾದವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-19-1378365169

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.