ಕಲಬುರಗಿ: ನವ ಕರ್ನಾಟಕ ರೈತ ಸಂಘದ ವತಿಯಿಂದ ಜುಲೈ 25ರಿಂದ ಮೂರು ದಿನಗಳ ಕಾಲ ಜರುಗಲಿರುವ ‘ಗ್ರಾಮ ಸ್ವರಾಜ್, ಆಹಾರ ಪದ್ಧತಿ ಹಾಗೂ ಬೆಂಬಲ ಬೆಲೆ’ ಕುರಿತ ರಾಷ್ಟ್ರಮಟ್ಟದ ರೈತರ ಬೃಹತ್ ವಿಚಾರ ಸಂಕಿರಣ ಹಿನ್ನೆಲೆ ಸೋಮವಾರ ನಗರದ ಕೆಕೆಸಿಸಿಐ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಜರುಗಿತು.

ಸಭೆಯಲ್ಲಿ ಕಲಬುರಗಿ, ರಾಯ ಚೂರು, ಯಾದಗಿರಿ ಸೇರಿ ವಿವಿಧೆ ಡೆಯಿಂದ ಆಗಮಿಸಿದ್ದ ವ್ಯಾಪಾರಿಗಳು, ಪ್ರಗತಿ ಪರ ರೈತ ಮುಖಂಡರು, ಸಾರ್ವ ಜನಿಕರು ಕಾರ್ಯ ಕ್ರಮದ ರೂಪುರೇಷೆ, ಆಯೋಜನೆ ಕುರಿತು ಸಲಹೆ, ಸೂಚನೆ, ಅಭಿಪ್ರಾಯಗಳನ್ನು ಹಂಚಿಕೊಂಡರು.

ಸಂಘದ ರಾಜ್ಯಾಧ್ಯಕ್ಷ ದಯಾನಂದ ಸಿ.ಪಾಟೀಲ ಮಾತನಾಡಿ, ‘ವಿಚಾರ ಸಂಕಿರಣಕ್ಕೆ ಕೇಂದ್ರ ಮತ್ತು ರಾಜ್ಯದ ತಲಾ ಐದು ಸಚಿವರು, ಕೃಷಿ ತಜ್ಞರು, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ನಟ ನಾನಾ ಪಾಟೇಕರ್ ಅವರು ಆಗಮಿಸಲಿದ್ದಾರೆ’ ಎಂದು ಅವರು ಹೇಳಿದರು.

ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ಮಾತನಾಡಿ, ‘ವಿಚಾರ ಸಂಕಿರಣ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಕಾರ್ಯಕ್ರಮದ ಮೂಲ ಉದ್ದೇಶ ಗ್ರಾಮ ಸ್ವರಾಜ್, ಆಹಾರ ಪದ್ಧತಿ ಹಾಗೂ ಬೆಂಬಲ ಬೆಲೆ ಕುರಿತ ವಿಷಯಾಧಾರಿತ ಕಿರುಹೊತ್ತಿಗೆಯನ್ನು ಮೂರು ಭಾಷೆಗಳಲ್ಲಿ ಪ್ರಕಟಿಸಿ, ಅವುಗಳ ಸುತ್ತ ಚರ್ಚೆ ನಡೆಸಬೇಕು’ ಎಂದು ಸಲಹೆ ನೀಡಿದರು.

ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ‘ಕಲ್ಯಾಣ ಕರ್ನಾಟಕದಲ್ಲಿ ರೈತರಿಗಾಗಿ ರಾಷ್ಟ್ರ ಮಟ್ಟದ ಕಾರ್ಯಕ್ರಮ ಆಯೋಜಿಸುತ್ತಿರುವುದು ಹೆಮ್ಮೆಯ ಸಂಗತಿ. ಕಾರ್ಯಕ್ರಮ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು. ಕಲಬುರಗಿಯಿಂದ ರಾಷ್ಟ್ರಕ್ಕೆ ಒಳ್ಳೆಯ ಸಂದೇಶ ಸಾರಬೇಕು’ ಎಂದರು.

‘ಕಾರ್ಯಕ್ರಮ ಪೂರ್ವದಲ್ಲಿ ಅನೇಕ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚುವ ಕೆಲಸ ಮಾಡಬೇಕಿದೆ. ಜಿಲ್ಲೆ ಸೇರಿದಂತೆ ರಾಜ್ಯದಿಂದ ಬರುವ ರೈತರಿಗೆ ಯಾವುದೇ ತೊಂದರೆಗಳಾಗದಂತೆ ಕಾರ್ಯಕ್ರಮ ನಿರ್ವಹಣೆ ಮಾಡಬೇಕು’ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಪಾಳಾ ಗುರುಮೂರ್ತಿ ಶಿವಾಚಾರ್ಯ, ಬಾಬುರಾವ್ ಚವ್ಹಾಣ, ಸುಭಾಷ ಬಿರಾದಾರ, ಕಲ್ಯಾಣ ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಶರಣಬಸಪ್ಪ ಪಪ್ಪಾ, ಶಿವಕಾಂತ, ದಿವ್ಯಾ ಹಾಗರಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-34-1243516380

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.