ಕೋಲಾರ: ಪ್ರಸಕ್ತ ವರ್ಷ ಬೆಳೆಗಳಿಗೆ ಒದಗಿಸುವ ರಸಗೊಬ್ಬರಗಳ ಸದ್ಬಳಿಕೆಗಾಗಿ 2026-27ನೇ ಸಾಲಿನ ಮುಂಗಾರು ಹಂಗಾಮಿನಿಂದ ಯೂರಿಯ ರಸಗೊಬ್ಬರವನ್ನು ಮಿತವಾಗಿ ಬಳಸಲು ಕೃಷಿ ಇಲಾಖೆ ಹೊಸ ಮಾರ್ಗಸೂಚಿ ಜಾರಿಗೊಳಿಸಿದ್ದು, ಪ್ರತಿ ಎಕರೆಗೆ ತಿಂಗಳಿಗೆ ಬೆಳೆ ಆಧಾರಿತ ಶಿಫಾರಸ್ಸಿನಂತೆ ಅಥವಾ ಒಂದು ಚೀಲ ಯೂರಿಯ ರಸಗೊಬ್ಬರ ವಿತರಿಸಲಾಗುವುದು.

ಸರ್ಕಾರದ ಹೊಸ ನಿಯಮದಂತೆ ರಸಗೊಬ್ಬರಗಳ ಅನಧಿಕೃತ ಮಾರಾಟವನ್ನು ತಡೆಯಲು ಹಾಗೂ ಎಲ್ಲಾ ರೈತರಿಗೂ ರಸಗೊಬ್ಬರ ಸಿಗುವಂತೆ ಮಾಡುವ ಉದ್ದೇಶದಿಂದ ಎಲ್ಲಾ ರೈತರು ಎಫ್.ಐ.ಡಿ ಹೊಂದಿರುವುದು ಕಡ್ಡಾಯವಾಗಿರುತ್ತದೆ. ಎಫ್.ಐ.ಡಿಯಲ್ಲಿ ರೈತರು ಹೊಂದಿರುವ ಕೃಷಿ ಭೂಮಿಯ ವಿಸ್ತೀರ್ಣದ ಆಧಾರದ ಮೇಲೆ ರಸಗೊಬ್ಬರಗಳನ್ನು ಕೆ-ಕಿಸಾನ್ ತಂತ್ರಾಂಶದ ಮೂಲಕ ವಿತರಿಸುವುದರಿಂದ ರೈತರು ಆಧಾರ್ ಮತ್ತು ತಮ್ಮ ಎಲ್ಲಾ ಪಹಣಿಯನ್ನು ಎಫ್.ಐ.ಡಿಗೆ ಜೋಡಣೆಯನ್ನು ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಯ ಮೂಲಕ ಮಾಡಿಕೊಳ್ಳಬಹುದಾಗಿರುತ್ತದೆ.

ಯೂರಿಯ ಮಿತ ಬಳಕೆಯಾಗಲಿ: ಪ್ರತಿ ಬೆಳೆಗೆ ಶಿಫಾರಸ್ಸಿಗಿಂತ ಹೆಚ್ಚಿನ ಯೂರಿಯ ರಸಗೊಬ್ಬರ ಬಳಕೆ ಮಾಡುವುದರಿಂದ ಮಣ್ಣಿನ ಫಲವತ್ತತೆ ಕುಂಠಿತಗೊಳ್ಳುವುದು, ಅಂತರ್ಜಲದಲ್ಲಿ ನೈಟ್ರೇಟ್ ಮಾಲಿನ್ಯ ಉಂಟು ಮಾಡುತ್ತದೆ. ಕೀಟಗಳ ವಿರುದ್ಧ ಸಸ್ಯಗಳನ್ನು ದುರ್ಬಲಗೊಳಿಸುತ್ತದೆ. ಆಹಾರದ ಗುಣಮಟ್ಟ ದೀರ್ಘಕಾಲಿನ ಪರಿಸರ ವ್ಯವಸ್ಥೆಯ ಕಾರ್ಯ ಸಾಧ್ಯತೆ ಹದಗೆಡಿಸುತ್ತದೆ. ಬೆಳೆ ಬೆಳೆಯುವ ಮುನ್ನ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ, ಅದರ ಆಧಾರದ ಮೇಲೆ ರಸಗೊಬ್ಬರ ಬಳಕೆ ಮಾಡಬೇಕು.

ಬೆಳೆಗಳಿಗೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶಗಳನ್ನು ಪೂರೈಸಲು ಯೂರಿಯ ಮಾತ್ರವಲ್ಲದೆ; ಸಂಯುಕ್ತ ರಸಗೊಬ್ಬರಗಳಾದ 10:26:26, 20:20:0:13, 12:32:16 ಮುಂತಾದವುಗಳನ್ನು ಬಳಸಿಕೊಳ್ಳಬಹುದಾಗಿದೆ. ಇದರೊಂದಿಗೆ ಆಧುನಿಕ ತಂತ್ರಜ್ಞಾನ ಹೊಂದಿರುವ ನ್ಯಾನೋ ಯೂರಿಯ ಹಾಗೂ ನ್ಯಾನೋ ಡಿ.ಎ.ಪಿಗಳ ಬಳಕೆಯಿಂದ ಶೇ 25 ರಿಂದ 40 ರಷ್ಟು ಯೂರಿಯ ಮತ್ತು ಡಿ.ಎ.ಪಿ ರಸಗೊಬ್ಬರ ಬಳಕೆಯನ್ನು ಕಡಿಮೆ ಮಾಡಬಹುದಾಗಿರುತ್ತದೆ.

ರೈತರು ಅನಧಿಕೃತ ಮಾರಾಟಗಾರರಿಂದ ಕೃಷಿ ಪರಿಕರಗಳನ್ನು ಖರೀದಿಸಬಾರದು. ತಮ್ಮ ಬೆಳೆಗೆ ಅವಶ್ಯವಿರುವ ಅಥವಾ ಶಿಫಾರಸ್ಸಿನಂತೆ ರಸಗೊಬ್ಬರವನ್ನು ಬೆಳೆಗಳಿಗೆ ಒದಗಿಸಬೇಕು. ಜಿಲ್ಲೆಯಲ್ಲಿ ಸಾಕಷ್ಟು ರಸಗೊಬ್ಬರಗಳ ಸಂಗ್ರಹಣೆ ಮಾಡಿರುವುದರಿಂದ ಕೃತಕ ಅಭಾವದ ವದಂತಿಗಳಿಗೆ ಒಳಗಾಗಿ ಅಗತ್ಯಕ್ಕಿಂತ ಹೆಚ್ಚು ರಸಗೊಬ್ಬರ ಸಂಗ್ರಹಿಸಬಾರದು.

ರಸಗೊಬ್ಬರ ಮಾರಾಟಗಾರರು ಆಧಾರ್ ಪರಿಶೀಲನೆ ಇಲ್ಲದೆ ರಸಗೊಬ್ಬರ ನೀಡಬಾರದು ಮತ್ತು ಯೂರಿಯ ರಸಗೊಬ್ಬರವನ್ನು ಕೆ-ಕಿಸಾನ್ ತಂತ್ರಾಂಶದ ಮೂಲಕ ಕಡ್ಡಾಯವಾಗಿ ವಿತರಿಸಬೇಕು. ರೈತರಿಗೆ ತೆರಿಗೆ ಸಮೇತ ಅಸಲಿ ಬಿಲ್ಲು ಕಡ್ಡಾಯವಾಗಿ ನೀಡಬೇಕು. ಅಂಗಡಿಗಳಲ್ಲಿ ದಾಸ್ತಾನು, ದರಪಟ್ಟಿ ಮತ್ತು ಪರವಾನಗಿ ವಿವರಗಳನ್ನು ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸಬೇಕು. ಅನಧೀಕೃತವಾಗಿ ರಸಗೊಬ್ಬರ ದಾಸ್ತಾನು ಮಾಡದೆ ಪ್ರತಿ ತಿಂಗಳು ರಸಗೊಬ್ಬರದ ಮಾರಾಟದ ವಿವರ ಕಡ್ಡಾಯವಾಗಿ ಇಲಾಖೆಗೆ ಸಲ್ಲಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-18-149947762

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.