ಕೊಲ್ಹಾರ: ಎಕರೆಗೆ 100 ಟನ್ ಇಳುವರಿ ಪಡೆಯಲು ಸಾಧ್ಯ ಎಂದು ಮಹಾಲಿಂಗಪುರದ ರೋಹಿಣಿ ಬಯೋಟೆಕ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಡಾ.ಮಲ್ಲಪ್ಪ ಕಟ್ಟಿ ಹೇಳಿದರು.

ಪಟ್ಟಣದಲ್ಲಿ ಶ್ರೀ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ, ದೇವಸ್ಥಾನದ ಮುಂಭಾಗದಲ್ಲಿ ಬೃಹತ್ ಕೃಷಿ ಮೇಳ ವಿಚಾರ ಸಂಕಿರಣದಲ್ಲಿ ಮಂಗಳವಾರ ಅವರು ಮಾತನಾಡಿದರು. ಕಬ್ಬಿನಲ್ಲಿ ಪ್ರತಿ ಎಕರೆಗೆ 100 ಟನ್ ಇಳುವರಿ ಪಡೆಯುವುದು ಹೇಗೆ ಎಂಬುದನ್ನು ಹಾಗೂ ತಮ್ಮ ಕೃಷಿ ತಾಂತ್ರಿಕತೆ ಬಗ್ಗೆ ಕಾರ್ಯಾಗಾರದಲ್ಲಿ ತಿಳಿಸಿಕೊಟ್ಟರು.

ಇಂದಿನ ರೈತರು ಆಧುನಿಕ ಕೃಷಿ ತಂತ್ರಜ್ಞಾನ, ಸುಧಾರಿತ ಬೀಜ, ಗೊಬ್ಬರ ನಿರ್ವಹಣೆ ಹಾಗೂ ಉತ್ಪಾದನೆ ಹೆಚ್ಚಿಸುವ ವಿಧಾನಗಳ ಬಗ್ಗೆ ಹವಾಮಾನಕ್ಕೆ ತಕ್ಕಂತೆ ಬೆಳೆ ನಿರ್ವಹಣೆ ಹೇಗೆ ಹಲವು ಕ್ರಮಗಳನ್ನು ಅನುಸರಿಸಬೇಕು. ಆಗ ಎಕರೆಗೆ 100 ಟನ್ ಕಬ್ಬು ಬೆಳೆಯಬಹುದು ಎಂದು ಹೇಳಿದರು.

ರೈತರು ಜುಲೈ ತಿಂಗಳ 15ರ ನಂತರ ಸೆಪ್ಟೆಂಬರ್ 30 ರ ಒಳಗೆ ಕಬ್ಬು ನಾಟಿ ಮಾಡಬೇಕು. ಆಗ ಕಬ್ಬಿನ ಮರಿಗಳ ಸಂಖ್ಯೆ 35,000 ದಿಂದ 38,000 ಇದ್ದರೆ ಒಂದು ಕಬ್ಬಿನ ತೂಕ 3 ಕೆ ಜಿ ಬಂದರೆ ಎಕರೆಗೆ 100 ಟನ್ ಕಬ್ಬು ಬೆಳೆಯಲು ಸಾಧ್ಯ. ಕಬ್ಬು ನಾಟಿ ಮಾಡುವ ಸಮಯ ನಿರ್ವಹಣೆ ಸರಿಯಾಗಿ ಮಾಡಿದರೆ ಖಂಡಿತಾ 100 ಟನ್ ಬೆಳೆಯಬಹುದು ಎಂದು ಹೇಳಿದರು.

ಪ್ರಗತಿಪರ ರೈತ ಸಿದ್ದು ಬಾಲಗೊಂಡ, ಕೃಷಿ ವಿಸ್ತರಣಾ ಅಧಿಕಾರಿ ಆರ್ ಬಿ ಬೆಳ್ಳಿ, ಎಚ್ ಕೆ ಬೆಳ್ಳುಬ್ಬಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕಲ್ಲು ಬ ಸೊನ್ನದ, ಚಿನ್ನಪ್ಪ ಗಿಡ್ಡಪ್ಪಗೋಳ, ಬಸವರಾಜ ಸಿದ್ದಾಪುರ, ಹಾಗೂ ಕೃಷಿ ಸಾಧಕರು ವಿವಿಧ ಹಳ್ಳಿಗಳಿಂದ ನೂರಾರು ರೈತರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-26-2003980733

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.