ಕುಷ್ಟಗಿ: ಬೇಸಿಗೆ ಬಂತೆಂದರೆ ಸಾಕು ತೋಟ ಮತ್ತು ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಘಮಲು ಪಸರಿಸುತ್ತದೆ. ಅದೇ ರೀತಿ ವಿವಿಧ ತಳಿ ಮಾವಿನ ಹಣ್ಣಿನ ರುಚಿ, ಗುಣಮಟ್ಟಕ್ಕೆ ಸಂಬಂಧಿಸಿದ ವಿಚಾರ ಚರ್ಚೆಗೆ ಗ್ರಾಸ ಒದಗಿಸುತ್ತದೆ. ಈ ಭಾಗದಲ್ಲಿ ಸದ್ಯ ಕೇಸರ್ ತಳಿ ಮಾವಿನದ್ದೇ ಸುದ್ದಿ.

ಮೊದಲೆಲ್ಲ ಈ ಭಾಗದಲ್ಲಿ ಬೇನಿಷ್, ಮಲ್ಲಿಕಾ, ಆಪೂಸ್ ಇತರೆ ತಳಿಗಳದ್ದೇ ಪಾರುಪತ್ಯ ಇರುತ್ತಿತ್ತು. ನಂತರ ಜನಪ್ರಿಯವಾದದ್ದು ಕೇಸರ್ ತಳಿ. ಇತ್ತೀಚಿನ ದಿನಗಳಲ್ಲಿ ದಶಹರಿ ತಳಿ ತೋಟಗಳಿಗೆ ಲಗ್ಗೆ ಇಡುತ್ತಿದೆ. ಅಲ್ಲದೆ ರುಚಿಯಲ್ಲೂ ಕೇಸರ್ಗೆ ಸೆಡ್ಡು ಹೊಡೆಯಲಿದೆ ಎನ್ನಲಾಗುತ್ತಿದೆ. ವಿದೇಶಿ ತಳಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಪ್ರಚಾರ ಮಾಡಿದ್ದು ತುಸು ಹೆಚ್ಚಾದರೂ ಬಹುತೇಕ ರೈತರು ಅದಕ್ಕೆ ಮಾರುಹೋಗದೇ ದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ತಳಿಗಳತ್ತ ಆಸಕ್ತಿ ವಹಿಸಿದ್ದಾರೆ.

ತಾಲ್ಲೂಕಿನಲ್ಲಿ ಸುಮಾರು 2,000 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು ಅದರ ಪೈಕಿ ಶೇ 25ರಷ್ಟು ಪ್ರದೇಶವನ್ನು ದಶಹರಿ ತಳಿ ಮಾವು ಇದೆ. ರೈತರು ಈ ತಳಿಯತ್ತ ಹೆಚ್ಚು ಆಕರ್ಷಿತರಾಗುತ್ತಿದ್ದು ಮಾರುಕಟ್ಟೆಯಲ್ಲಿಯೂ ಬೇಡಿಕೆ ಇದೆ ಎನ್ನುತ್ತವೆ ತೋಟಗಾರಿಕೆ ಇಲಾಖೆ ಮೂಲಗಳು.

ಈ ಭಾಗದಲ್ಲಿ ಮಾವು ಬೆಳೆಯುವ ಪ್ರಮುಖ ರೈತರ ಪೈಕಿ ಪಟ್ಟಣದ ರಮೇಶ ಕೊನಸಾಗರ ಕೂಡ ಒಬ್ಬರು. ತೋಟಗಾರಿಕೆ ಇಲಾಖೆ ಮಾರ್ಗದರ್ಶನದಲ್ಲಿ ಕೊಲಕತ್ತಾ ನರ್ಸರಿಯಿಂದ 500 ಸಸಿಗಳನ್ನು ತಮ್ಮ ನಾಲ್ಕು ಎಕರೆ ಮಸಾರಿ ಭೂಮಿಯಲ್ಲಿ ಮೂರು ವರ್ಷದ ಹಿಂದೆ ದಶಹರಿ ಮಾವು ನಾಟಿ ಮಾಡಿದ್ದಾರೆ.

ಪರಿಶ್ರಮ ಮತ್ತು ಕಾಳಜಿಯೊಂದಿಗೆ ಆರೈಕೆ ಮಾಡಿದ್ದರಿಂದ ಗಿಡಗಳು ಉತ್ತಮ ರೀತಿಯಲ್ಲಿ ಬೆಳೆದು ನಿಂತಿವೆ. ಮೊದಲ ಬಾರಿಗೆ ಕಾಯಿ ಬಿಟ್ಟಿದ್ದು ಗಿಡಗಳಲ್ಲಿ ಇಳಿ ಬಿದ್ದಿರುವ ಗೊಂಚಲುಗಳು ಗಮನಸೆಳೆಯುತ್ತಿರುವುದು ಸ್ಥಳಕ್ಕೆ ಭೇಟಿ ನೀಡಿದಾಗ ಕಂಡುಬಂದಿತು.

ಈಗಾಗಲೇ ಕಾಯಿಗಳು ಮಾಗಿ ಕಟಾವು ಹಂತಕ್ಕೆ ಬಂದಿವೆ, ಹೆಚ್ಚಾಗಿ ಈ ತಳಿಯೂ ಸಹ ವಿದೇಶಗಳಿಗೆ ರಫ್ತಾಗುತ್ತದೆ. ಸ್ಥಳೀಯ ಪದ್ಧತಿಯಂತೆ ಕಾಯಿಗಳನ್ನು ಹರಿಯುವ ಬದಲು ತುಂಬು ಸಹಿತ ಕಟಾವು (ಬಾಂಬೆ ಕಟಿಂಗ್ ಪದ್ಧತಿ) ಮಾಡಲಾಗುತ್ತದೆ. ವ್ಯಾಪಾರಿಗಳು ನೇರವಾಗಿ ತೋಟಕ್ಕೆ ಬಂದು ಕಾಯಿ ಕಟಾವು ಮಾಡಿ ತೂಕ ಮಾಡಿ ಸ್ಥಳದಲ್ಲೇ ಹಣ ಪಾವತಿ ಮಾಡಲಿದ್ದಾರೆ ಎನ್ನುತ್ತಾರೆ ರಮೇಶ್. ಸದ್ಯ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾವು ಆವಕವಾಗುತ್ತಿರುವುದರಿಂದ ದರ ಕಡಿಮೆ ಇದೆ. ಮುಂದೆ ಬೇಡಿಕೆಯೂ ಕುದುರುವ ಸಾಧ್ಯತೆ ಇದ್ದು ಉತ್ತಮ ಇಳುವರಿ ಬಂದರೆ ಆದಾಯ ನಿಶ್ಚಿತ ಎಂಬ ವಿಶ್ವಾಸ ಅವರದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-35-654239333

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.