ಕೆ.ಆರ್.ಪೇಟೆ: ‘ಕೃಷಿ ಕ್ಷೇತ್ರದ ಬಲವರ್ಧನೆಗೆ ಜೇನುನೊಣಗಳ ಕೊಡುಗೆ ಅಪಾರ. ಇವು ರೈತನ ಮಿತ್ರನಾಗಿವೆ’ ಎಂದು ಪೊನ್ನಂಪೇಟೆಯ ಅರಣ್ಯ ವಿಶ್ವವಿದ್ಯಾಲಯದ ಅರಣ್ಯ ಕೃಷಿ ವಿಭಾಗದ ಮುಖ್ಯಸ್ಥ ಕೆಂಚರೆಡ್ಡಿ ಹೇಳಿದರು.

ಪಟ್ಟಣದಲ್ಲಿ ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಠಾನವು ಶನಿವಾರ ಆಯೋಜಿಸಿದ್ದ ಒಂದು ದಿನದ ಜೇನು ಕೃಷಿ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಜೇನುನೊಣಗಳು ಪರಿಸರ ಸ್ನೇಹಿಯಾಗಿವೆ. ಅವುಗಳು ನಡೆಸುವ ಪರಾಗಸ್ಪರ್ಶ ಕ್ರಿಯೆಯಿಂದಾಗಿ ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಾಗುವದಲ್ಲದೆ ರೈತರ ಪರಿಶ್ರಮಕ್ಕೆ ಸಹಕಾರಿಯಾಗಿವೆ ಎಂದರು.

‘ಇಡೀ ಜಗತ್ತಿನಲ್ಲಿ ಜೇನು ಸಂತತಿ ನಾಶವಾದರೆ ಮನುಷ್ಯನು ಆಹಾರವಿಲ್ಲದೆ ಸಾಯಬೇಕಾಗುತ್ತದೆಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದು, ಪ್ರತಿಯೊಬ್ಬ ರೈತರು ಕೂಡ ತಮ್ಮ ಜಮೀನು ಇಲ್ಲವೆ ತೋಟದಲ್ಲಿ ಜೇನುಪೆಟ್ಟಿಗೆಗಳನ್ನು ಇಟ್ಟು ಪರಿಶುದ್ಧವಾದ ಜೇನು ಉತ್ಪಾದನೆ ಮಾಡಿದರೆ ಕುಟುಂಬದ ಆರ್ಥಿಕ ನಿರ್ವಹಣೆಗೆ ಸಹಕಾರಿಯಾಗುತ್ತದೆ’ ಎಂದು ತಿಳಿಸಿದರು.

ಸಮಾರಂಭದ ಸಾನಿಧ್ಯ ವಹಿಸಿದ್ದ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ನಾಡಿನ ರೈತರು ಮತ್ತು ಶ್ರಮಿಕ ವರ್ಗದ ಬಗ್ಗೆ ಅಪಾರವಾದ ಕಳಕಳಿಯನ್ನು ಮಾಜಿ ಸ್ಪೀಕರ್ ಕೃಷ್ಣ ಹೊಂದಿದ್ದರು. ಅವರ ಆಶಯದಂತೆ ಪ್ರತಿಷ್ಠಾನವು ಅಮೂಲ್ಯವಾದ ಕಾರ್ಯಕ್ರಮ ನಡೆಸುತ್ತಿದೆ ಎಂದರು.

ನಮ್ಮೆಲ್ಲರ ಆಶಯ ನಾಡಿನ ಅನ್ನದಾತರಾದ ರೈತರು ಸುಖಕರವಾಗಿರಬೇಕು ಎಂಬುದಾಗಿದೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಕೃಷಿಯಿಂದ ಲಾಭಕ್ಕಿಂತ ನಷ್ಟ ಎನ್ನುವವರ ಸಂಖ್ಯೆ ಹೆಚ್ಚಾಗಿದೆ. ಹೀಗಿರುವಾಗ ರೈತರು ಹೊಸ ಹೊಸ ಆವಿಷ್ಕಾರ ಮತ್ತು ಸಂಶೋಧನೆಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು. ಲಾಭದಾಯಕವಾದ ಬೆಳೆಗಳಿಗೆ ಆದ್ಯತೆ ನೀಡಬೇಕು. ಅಂತಹ ಕೃಷಿಯಲ್ಲಿ ಜೇನುಕೃಷಿಯೂ ಒಂದಾಗಿದೆ ಎಂದು ತಿಳಿಸಿದರು.

ಎಲ್ಲಾ ಕಾಲದಲ್ಲೂ ಜೇನುತುಪ್ಪಕ್ಕೆ ಉತ್ತಮ ಬೆಲೆ ಇದೆ. ಆದ್ದರಿಂದ ರೈತರು ಆರ್ಥಿಕವಾಗಿ ಸದೃಢರಾಗಲು ಸಾಂಪ್ರಾದಾಯಿಕ ಬೆಳೆಯ ಜೊತೆಗೆ ಜೇನುಕೃಷಿಗೆ ಆದ್ಯತೆ ನೀಡಬೇಕು. ಎರೆಹುಳುವಿನಂತೆ ಜೇನುನೊಣಗಳು ರೈತರ ಮಿತ್ರರನಾಗಿದ್ದು, ಜೇನುಹುಳುಗಳನ್ನು ಭಯದಿಂದ ಕಾಣುವ ಬದಲು ಅವುಗಳನ್ನು ಮಿತ್ರರನ್ನಾಗಿಸಿಕೊಂಡು ಆರ್ಥಿಕವಾಗಿ ಸದೃಡರಾಗಲು ಮುಂದಾಗಬೇಕೆಂದು ಸಲಹೆ ನೀಡಿದರು.

ತೋಟಗಾರಿಕೆ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕಿ ಕೆ.ಎನ್.ರೂಪಶ್ರೀ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಂ.ಡಿ.ಲೋಕೇಶ್ ಜೇನುಕೃಷಿಯ ಮಹತ್ವದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಗೋಡೆ ಹೊಸಳ್ಳಿ ಜವರಾಯಿ ಗೌಡ ವಹಿಸಿದ್ದರು. ಕಾರ್ಯದರ್ಶಿ ಕತ್ತರಘಟ್ಟವಾಸು ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವಾಧ್ಯಕ್ಷೆ ಪ್ರೊ.ಇಂದಿರಮ್ಮ ಕೃಷ್ಣ, ಪ್ರಮುಖರಾದ ಬಿ.ಜವರಾಯಿಗೌಡ, ಶಿವರಾಮೇ ಗೌಡ, ಹೆಮ್ಮನಹಳ್ಳಿ ರಮೇಶ್, ಕಟ್ಟೆಕ್ಯಾತನಹಳ್ಳಿ ಚಂದ್ರೇಗೌಡ ಭಾಗವಹಿಸಿದ್ದರು.

ವಿಚಾರ ಸಂಕಿರಣದಲ್ಲಿ ರೈತರೊಂದಿಗೆ ಸಂವಾದ, ಜೆನುಪೆಟ್ಟಿಗೆ ನಿರ್ವಹಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಂವಹನ ಪ್ರಾತ್ಯಕ್ಷಿಕತೆ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-40-1846511096

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.