ಕುಮಟಾ: 2024ನೇ ಸಾಲಿನಲ್ಲಿ ಮರುವಿನ್ಯಾಸಗೊಳಿಸಿದ ಹವಾಮಾನ ಆಧರಿತ ಬೆಳೆ ವಿಮಾ ಯೋಜನೆಯಡಿ ಕುಮಟಾ ತಾಲ್ಲೂಕಿನ 1,541 ಅಡಿಕೆ ಬೆಳೆಗಾರರ ಒಟ್ಟೂ 344.7 ಹೆಕ್ಟೇರ್ ಪ್ರದೇಶ ಪ್ರಸ್ತಾವನೆಗೆ ₹2.32. ಲಕ್ಷ ಬೆಳೆವಿಮಾ ಮೊತ್ತ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಲಿಂಗರಾಜು ಇಟ್ನಾಳ ತಿಳಿಸಿದ್ದಾರೆ.

ಶನಿವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿಯಲ್ಲಿ ಡ್ರಾಗನ್, ಕಂದು ಬಾಳೆ, ಅಂಗಾಂಶ ಬಾಳೆ, ಅನಾನಸ್, ಮಾವು, ಹಲಸು ಹಾಗೂ ಪಪ್ಪಾಯಿ ಮುಂತಾದ ಹಣ್ಣು ಪ್ರದೇಶ ವಿಸ್ತರಣೆ, ಗಡ್ಡೆ ಜಾತಿ ಹೂವು, ಸಾಂಬಾರು ಬೆಳೆ, ತೋಟದಲ್ಲಿ ಕಳೆ ಬೆಳೆಯದಂತೆ ಚಾಪೆ ಹಾಸುವುದು, ತೇವಾಂಶ ಆರದಂತೆ ಪ್ಲಾಸ್ಟಿಕ್ ಹೊದಿಕೆ ಯೋಜನೆ, ಜೇನು ಕೃಷಿ, ಎರೆಹುಳ ಗೊಬ್ಬರ ತಯಾರಿಕೆ, ಅಣಬೆ ಕೃಷಿ, ನೀರು ಸಂಗ್ರಹಣಾ ಘಟಕ, ಶೀಥಲ ವಾಹನ ಖರೀದಿ, ಸೋಲಾರ್ ಪಂಪ್ ಸೆಟ್ ಅಳವಡಿಕೆ, ಕಡಿಮೆ ವೆಚ್ಚದ ಈರುಳ್ಳಿ ಹಾಗೂ ತೆಂಗು ಸಂಸ್ಕರಣಾ ಘಟಕ, ತಾಳೆ ಕೃಷಿಗೆ ಸಹಾಯಧನ, ತೋಟಗಾರಿಕಾ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನಾ ಘಟಕ, ಹಣ್ಣು ಮಾಗಿಸುವ ಘಟಕಕ್ಕೆ ಸಹಾಯಧನ ನೀಡಲಾಗುತ್ತದೆ ಎಂದರು.

ರೈತರು ಅರ್ಜಿ ಸಲ್ಲಿಸಿದರೆ ಆರ್ಥಿಕ ನೆರವು ಮಂಜೂರಿಗೆ ಪ್ರಯತ್ನಿಸಲಾಗುವುದು' ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-20-634614367

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.