ಮಾಗಡಿ: ತಾಲ್ಲೂಕಿನ ಚಂದುರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹೈದರಾಬಾದ್ ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ ಪ್ರಾಯೋಜಕತ್ವದಲ್ಲಿ ‘ಸಿರಿಧಾನ್ಯಗಳ ಜಾಗೃತಿ ಮತ್ತು ಪರಿಕರ ವಿತರಣೆ’ ಒಂದು ದಿನದ ವಿಶೇಷ ಕಾರ್ಯಕ್ರಮ ನಡೆಯಿತು.

ಕೇಂದ್ರದ ಮುಖ್ಯಸ್ಥೆ ಡಾ.ಶ್ವೇತ ಬಿ.ಎಸ್.ಮಾತನಾಡಿ, ಬದಲಾಗುತ್ತಿರುವ ಹವಾಮಾನಕ್ಕೆ ಸಿರಿಧಾನ್ಯ ಆಧಾರಿತ ಕೃಷಿ ವ್ಯವಸ್ಥೆ ಸೂಕ್ತವಾಗಿದೆ. ಪೌಷ್ಟಿಕ ಭದ್ರತೆ ಜತೆಗೆ ರೈತರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದರು.

ಸಸ್ಯ ರೋಗಶಾಸ್ತ್ರಜ್ಞೆ ಡಾ.ಅಂಬಿಕಾ ರಾಗಿ ಮತ್ತು ಅವರೆ ಬೆಳೆ ಕೀಟ ಹಾಗೂ ರೋಗ ನಿರ್ವಹಣೆಗೆ ಜೈವಿಕ ಕ್ರಮಗಳನ್ನು ವಿವರಿಸಿದರು. ಕೃಷಿ ವಿಸ್ತರಣೆ ವಿಭಾಗದ ಡಾ.ಇಟಗಿ ಪ್ರಭಾಕರ್ ಸಿರಿಧಾನ್ಯಗಳಲ್ಲಿ ಉದ್ಯಮಶೀಲತೆ ಮತ್ತು ಮೌಲ್ಯವರ್ಧನೆ ಕುರಿತು ಮಾಹಿತಿ ನೀಡಿದರು. ಗೃಹ ವಿಜ್ಞಾನಿ ಡಾ.ಅನಿತಾ ಎಸ್. ಸಿರಿಧಾನ್ಯಗಳ ಪೌಷ್ಟಿಕಾಂಶದ ಮೌಲ್ಯ ಮತ್ತು ಆರೋಗ್ಯ ಸುಧಾರಣೆಯಲ್ಲಿ ಅವುಗಳ ಪಾತ್ರ ತಿಳಿಸಿದರು.

ಕುದೂರು ಮತ್ತು ಮಾಡಬಾಳ ಹೋಬಳಿ ರೈತರಿಗೆ ರಾಗಿ (ಕೆ.ಎಂ.ಆರ್.-316), ಅವರೆ (ಹೆಚ್.ಎ.-5), ಜೈವಿಕ ಗೊಬ್ಬರಗಳು, ತರಬೇತಿ ಕಿಟ್ ಹಾಗೂ ತಾಂತ್ರಿಕ ಕೈಪಿಡಿ ವಿತರಿಸಲಾಯಿತು.

(ಹೆಚ್.ಎ.-5), ಜೈವಿಕ ಗೊಬ್ಬರಗಳು ಟ್ರೈಕೋಡರ್ಮಾ, ಸೂಡೋಮೋನಾಸ್, ಸೂಕ್ಷ್ಮಜೀವಿಗಳ ಒಕ್ಕೂಟ (ಎಂ.ಸಿ.), ರೈಜೋಬಿಯಂ, ಅಜೋಸ್ಪೈರಿಲಂ ಮತ್ತು ಪಿ.ಎಸ್.ಬಿ. ತರಬೇತಿ ಕಿಟ್ ಮತ್ತು “ರಾಗಿ ಬೆಳೆಯಲ್ಲಿ ನೂತನ ಉತ್ಪಾದನಾ ತಂತ್ರಜ್ಞಾನಗಳು, ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಎಂಬ ತಾಂತ್ರಿಕ ಕೈಪಿಡಿಯನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರೈತ ಮುಖಂಡರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-14-1185065892

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.