ಮಹಾಲಿಂಗಪುರ: ‘ರೈತರ ಬೆಂಗಾವಲಾಗಿ ನಿಂತವರು ದಿ. ರಮೇಶ ಗಡದನ್ನವರ. ದೈಹಿಕವಾಗಿ ಅಗಲಿದ್ದರೂ ಅವರ ಹೋರಾಟದ ಕಿಚ್ಚು ಸದಾ ಅಮರ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.

ಪಟ್ಟಣದ ಹೊರವಲಯದ ಬುದ್ನಿ ಪಿ.ಡಿ. ಗ್ರಾಮದಲ್ಲಿನ ಗಡದನ್ನವರ ವೃತ್ತದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಿ.ರಮೇಶ ಗಡದನ್ನವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಗಡದನ್ನವರ ಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

‘ಗಡದನ್ನವರ ಅವರು ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ, ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಹಣ ವಸೂಲಿ ಮತ್ತು ರೈತರ ಸ್ವಾಭಿಮಾನಕ್ಕಾಗಿ ಅವರು ಹಸಿರು ಶಾಲು ಹಾಕಿ ತೀವ್ರ ಹೋರಾಟ ನಡೆಸಿದ್ದರು. ಅವರ ಹೋರಾಟದ ಕಿಚ್ಚು ಇಂದಿಗೂ ರೈತರಲ್ಲಿ ಸ್ಫೂರ್ತಿಯಾಗಿದೆ’ ಎಂದು ಹೇಳಿದರು.

ಕಾಂಗ್ರೆಸ್ ನಾಯಕ ಸಿದ್ದು ಕೊಣ್ಣೂರ ಮಾತನಾಡಿ, ‘ರೈತ ಸಮೂಹದಲ್ಲಿ ಹೋರಾಟದ ಕಿಚ್ಚು ಹಚ್ಚಿದ ಹುಟ್ಟು ಹೋರಾಟಗಾರ ದಿ. ರಮೇಶ ಗಡದನ್ನವರ. ಅವರ ಉಸಿರು ಇರದಿದ್ದರೂ ಪ್ರತಿ ರೈತರ ಉಸಿರಲ್ಲೂ ಅವರು ಇದ್ದಾರೆ’ ಎಂದರು.

ರೈತ ನಾಯಕ ಗಂಗಾಧರ ಮೇಟಿ ಮಾತನಾಡಿದರು. ಬಂದು ಪಕಾಲಿ, ದುಂಡಪ್ಪ ಮಾಂಗ, ಲಕ್ಷ್ಮಣ ಬ್ಯಾಳಿ, ಮಹಾಲಿಂಗಪ್ಪ ಇಟ್ನಾಳ, ಶಿವಲಿಂಗ ಟಿರಕಿ, ಶ್ರೀಶೈಲ ಕಳ್ಯಾಗೋಳ, ವೀರೇಶ ಆಸಂಗಿ, ಅಪ್ಪಾಸಾಬ ನಾಲಬಂದ, ಪರಸಪ್ಪ ಕೊಣ್ಣೂರ, ರಫೀಕ ಮಾಲದಾರ್, ಮಲ್ಲಪ್ಪ ಮಾಂಗ, ಕರೆಪ್ಪ ಮೇಟಿ, ರಾಜು ಪಾತ್ರೋಟ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-19-412969788

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.