ಮಲೇಬೆನ್ನೂರು: ಪ್ರಸಕ್ತ ಬೇಸಿಗೆ ಹಂಗಾಮಿಗೆ ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದ್ದು, 2 ದಿನಗಳಿಂದ ನೀರಿನ ಹರಿವಿನ ಪ್ರಮಾಣ ಕಡಿಮೆ ಆಗಿದೆ. ಇದರಿಂದ ರೈತರು ಆತಂಕಗೊಂಡಿದ್ದಾರೆ.

ಮಲೇಬೆನ್ನೂರು ಶಾಖಾ ನಾಲೆಯಲ್ಲಿ ನೀರಿನ ಹರಿವಿನ ಪ್ರಮಾಣ 3 ಅಡಿಗೆ ಬಂದಿದೆ. 4ನೇ ಶನಿವಾರ, ಭಾನುವಾರ, ಸೋಮವಾರ ಮಹಾವೀರ ಜಯಂತಿ ಕಾರಣ ಸರ್ಕಾರಿ ರಜೆ ಇತ್ತು. ಎಂಜಿನಿಯರ್ಗಳು ದೂರವಾಣಿ ಕರೆ ಸ್ವೀಕರಿಸಿಲ್ಲ.

‘ಜಲಸಂಪನ್ಮೂಲ ಇಲಾಖೆಯಲ್ಲಿ ಎಇಇ, ಎಸಿ, ಜೆಇ ಸೇರಿ ಸಿಬ್ಬಂದಿ ಕೊರತೆ ಇದೆ. ಹೊರಗುತ್ತಿಗೆ ನೌಕರರ ಮೂಲಕ ನೀರು ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಕಾರಣಿಗಳು ದಾವಣಗೆರೆ ದಕ್ಷಿಣ ವಿಧಾನಸಭೆ ಚುನಾವಣೆಯಲ್ಲಿ ತಲ್ಲೀನರಾಗಿದ್ದು, ನೀರಿನ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ರೈತ ಸಂಘದ ಹೊಳೆಸಿರಿಗೆರೆ ಫಾಲಾಕ್ಷಪ್ಪ ಆರೋಪಿಸಿದರು.

‘ಬೆಳೆಗಳಿಗೆ 2ನೇ ಗೊಬ್ಬರ ಕೊಟ್ಟಿದ್ದು ಕಳೆ ತೆಗೆಯಬೇಕಿದೆ. ಈಚೆಗೆ ಈ ಭಾಗದಲ್ಲಿ ಹೆಚ್ಚಿನ ಮಳೆಯೂ ಬಂದಿಲ್ಲ. ಇಂತಹ ಸಂದರ್ಭದಲ್ಲಿ ನೀರಿನ ಕೊರತೆಯಾದರೆ ಇಳುವರಿ ಮೇಲೆ ಪರಿಣಾಮ ಖಚಿತ’ ಎನ್ನುವರು ರೈತ ಹೊಸಳ್ಳಿ ಕರಿಬಸಪ್ಪ, ಕೆ.ಜಿ. ಮಂಜುನಾಥ್, ಕುಂಬಳೂರು ಆಂಜನೇಯ.

‘ನಾಲೆ ನೀರಿನ ಹರಿವಿನಲ್ಲಿ ವ್ಯತ್ಯಯವಾದರೆ ಆಂತರಿಗೆ ಸರದಿ ತಪ್ಪುತ್ತದೆ. ನಾಲೆಗೆ ನೀರು ಬಿಟ್ಟ ನಂತರ ಹರಿದು ಬರುವುದು ವಾರಗಟ್ಟಲೆ ಮುಂದೂಡಲ್ಪಡುತ್ತದೆ. ಬೇಸಿಗೆ ವೇಳೆ ಕೊನೆಭಾಗಕ್ಕೆ ನೀರು ಸಿಗುವುದು ಕಷ್ಟ’ ಎಂದು ನಂದಿತಾವರೆ ಗದ್ದಿಗೆಪ್ಪ ಬೇಸರ ವ್ಯಕ್ತಪಡಿಸಿದರು.

‘ಪ್ರತಿಬಾರಿ ಬೇಸಿಗೆ ಹಂಗಾಮಿನಲ್ಲಿ ನಾಲೆ ನೀರಿನ ಹರಿವಿನಲ್ಲಿ ವ್ಯತ್ಯಯವಾಗುವುದು ಈಚೆಗೆ ಸಾಮಾನ್ಯವಾಗಿದೆ. ನಾಲೆಗೆ ವಾಹನ ಬೀಳುವುದು, ನಾಲೆಗೆ ಹಾರುವವರು, ನಾಲೆ ಕುಸಿತ ಹಾಗೂ ಮರ ಅಡ್ಡಿಯಾಗುವುದು ಸಾಮಾನ್ಯವಾಗಿದೆ. ಅಚ್ಚುಕಟ್ಟಿನಲ್ಲಿ ನಾಲೆ ಹಾಗೂ ನೀರಿನ ಹರಿವನ್ನು ನೋಡಿಕೊಳ್ಳಲು ಸೂಕ್ತ ಸಿಬ್ಬಂದಿ ನೇಮಿಸಬೇಕು’ ಎಂದು ರೈತರು ಆಗ್ರಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-43-319594385

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.