ಮೈಸೂರು: ‘ಪ್ರಧಾನಿ ನರೇಂದ್ರ ಮೋದಿ ಅವರು ಹೇಳುವಂತೆ, ರೈತರ ಆದಾಯ ದ್ವಿಗುಣ ಆಗಬೇಕೆಂದರೆ ಜಲಾನಯನ ಪ್ರದೇಶಗಳ ನಿರ್ವಹಣೆ ಹಾಗೂ ಆ ಭಾಗದಲ್ಲಿ ಸ್ಥಳೀಯ ಪ್ರಭೇದದ ಸಸ್ಯಗಳಿರುವಂತೆ ನೋಡಿಕೊಳ್ಳುವುದು ಅಗತ್ಯವಾಗುತ್ತದೆ’ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರದ ಶಕ್ತಿ ಮತ್ತು ಜೌಗು ಪ್ರದೇಶ ಸಂಶೋಧನಾ ಸಮೂಹದ ಸಂಯೋಜಕ, ಹಿರಿಯ ವಿಜ್ಞಾನಿ ಟಿ.ವಿ. ರಾಮಚಂದ್ರ ಪ್ರತಿಪಾದಿಸಿದರು.

ಇಲ್ಲಿನ ಜೆಎಲ್ಬಿ ರಸ್ತೆಯ ಎಂಜಿನಿಯರ್ಗಳ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ವಿಶ್ವ ಭೂಮಿ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಜಾಸ್ತಿಯಾದರೆ ಆ ಪ್ರದೇಶದಲ್ಲಿ ರೈತರಿಗೆ ಬೇಕಾದ ಇಳುವರಿ ಸಿಗುತ್ತದೆ. ಅವರಿಗೆ ವರ್ಷಕ್ಕೆ ₹ 10ಸಾವಿರ ಕೊಡಬೇಕಾದ ಪ್ರಮೇಯ ಬರುವುದಿಲ್ಲ. ಅವರ ಆದಾಯ 3ರಿಂದ 4 ಪಟ್ಟು ಜಾಸ್ತಿಯಾಗುತ್ತದೆ. ಇದಕ್ಕಾಗಿ ಸರ್ಕಾರ ಹೆಚ್ಚಿನ ಹೂಡಿಕೆ ಮಾಡಬೇಕು. ಇದನ್ನು ಸರ್ಕಾರದ ಗಮನಕ್ಕೆ ಹಲವು ವೇದಿಕೆಗಳಲ್ಲಿ ತಂದಿದ್ದೇನೆ. ಕೇಂದ್ರದ ಸಮಿತಿಯ ಸಭೆಯಲ್ಲೂ ಆಗ್ರಹಿಸುತ್ತಲೇ ಬಂದಿದ್ದೇನೆ. ಆದರೆ, ಕಾರ್ಯಗತ ಆಗುತ್ತಿಲ್ಲ. ಅಧಿಕಾರಿಗಳಲ್ಲಿರುವ ವಸಾಹತುಶಾಹಿ ಮನಸ್ಥಿತಿಯೇ ಇದಕ್ಕೆ ಕಾರಣ. ಸಮಾಜದ ಒಳಿತಿಗಿಂತಲೂ ಅವರು ಸ್ವಯಂ ಅನುಕೂಲದ ಬಗ್ಗೆಯೇ ಯೋಚಿಸುತ್ತಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ನನ್ನ ಅಧ್ಯಯನದ ಪ್ರಕಾರ, ಯಾವ ಜಲಾನಯನ ಪ್ರದೇಶಗಳಲ್ಲಿ ಸ್ಥಳೀಯ ಪ್ರಭೇದದ ಕಾಡುಗಳಿವೆಯೋ ಅಲ್ಲಿನ ತೊರೆ, ನದಿಗಳಲ್ಲಿ ವರ್ಷದ 12 ತಿಂಗಳೂ ನೀರಿರುತ್ತದೆ. ನೆಡುತೋಪು ಹೆಚ್ಚಿರುವಲ್ಲಿ 6ರಿಂದ 8 ತಿಂಗಳು, ಕಾಡು ಹಾಳಾಗಿರುವಲ್ಲಿ ಮಳೆಗಾಲದದಲ್ಲಿ ಮಾತ್ರ ನೀರಿರುವುದು ಕಂಡುಬಂದಿದೆ’ ಎಂದು ತಿಳಿಸಿದರು.

ಎಂಜಿನಿಯರ್ಗಳ ಸಂಸ್ಥೆ ಅಧ್ಯಕ್ಷ ಎಚ್.ಎಸ್. ಸುರೇಶ್ಬಾಬು, ಸಮಿತಿ ಸದಸ್ಯ ಕೃಷ್ಣಪ್ರಸಾದ್, ಕಾರ್ಯ ಕ್ರಮ ಸಂಚಾಲಕ ಎಸ್.ಶಿವಪ್ರಸಾದ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-39-2033591655

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.