ನಂಜನಗೂಡು: ‘ನೈಸರ್ಗಿಕ ಕೃಷಿ ಮತ್ತು ಮಣ್ಣಿನ ಆರೋಗ್ಯ ರಕ್ಷಣೆ ಇಂದಿನ ಅಗತ್ಯ’ ಎಂದು ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಪಿ.ಎಲ್.ಪಾಟೀಲ್ ಹೇಳಿದರು.

ಸುತ್ತೂರಿನಲ್ಲಿ ಜಗದ್ಗುರು ವೀರಸಿಂಹಾಸನ ಮಹಾಸಂಸ್ಥಾನ ಮಠ, ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ರೈತರ ಶಿಬಿರ ಸಮಾರೋಪದಲ್ಲಿ ಭಾನುವಾರ ಅವರು ಮಾತನಾಡಿದರು.

‘ಭೂಮಿಯ ಜೀವನಾಡಿ ರೈತ ಸಮೃದ್ಧಿಯಾಗಿದ್ದರೆ ಮಾತ್ರ ದೇಶ ಸುಭಿಕ್ಷವಾಗಿರುತ್ತದೆ. ರೈತರು ಕೇವಲ ಬೆವರಿನಿಂದ ಕೆಲಸ ಮಾಡುವುದಷ್ಟೇ ಅಲ್ಲ, ಜ್ಞಾನದಿಂದ ಕೆಲಸ ಮಾಡಬೇಕು. ಭೂಮಿಯ ಆರೋಗ್ಯಕ್ಕೆ, ಕೃಷಿಗೆ ಏನು ಮುಖ್ಯ ಎಂಬುದನ್ನು ತಿಳಿದಿರಬೇಕು’ ಎಂದು ಸಲಹೆ ನೀಡಿದರು.

ಮಂಡ್ಯದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಜಿ.ಎಂ.ದೇವಗಿರಿ ಮಾತನಾಡಿ, ‘ರೈತರು ತಮ್ಮ ಜಮೀನಿನ ಒಂದು ಭಾಗದಲ್ಲಾದರೂ ಹೊಸ ಪ್ರಯೋಗಗಳನ್ನು ಮಾಡಲು ಮುಂದಾಗಬೇಕು. ಬೆಳೆಯನ್ನು ಹಾಗೆಯೇ ಮಾರುವ ಬದಲು ಮೌಲ್ಯವರ್ಧನೆಗೆ ಒತ್ತು ನೀಡಬೇಕು’ ಎಂದು ಕಿವಿಮಾತು ಹೇಳಿದರು.

ಬೀದರ್ನ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ನಿವೃತ್ತ ವಿಸ್ತರಣ ನಿರ್ದೇಶಕ ಎಸ್.ಎಂ.ಶಿವಪ್ರಕಾಶ್, ಕೃಷಿ ಉತ್ಪನ್ನಗಳ ರಫ್ತುದಾರ ಎಚ್.ನಾಗೇಂದ್ರ ಕುಮಾರ್ ಮಾತನಾಡಿದರು.

ಗಣೇಶ್, ಕಾವೇರಮ್ಮ ಬೈಲೆಮನೆ, ಅನಂತರಾಮಸ್ವಾಮಿ, ಜಗದೀಶ್ ಎಸ್.ಹಿರೇಮಠ್, ಶಿವಕುಮಾರ್, ಬಿ.ಎನ್.ಜ್ಞಾನೇಶ್, ಪೃಥ್ವಿ, ಯು.ಎಂ.ರಕ್ಷಿತ್ ರಾಜ್, ದೀಪಕ್, ವೈ.ಪಿ.ಪ್ರಸಾದ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-38-681723508

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.