ಶುಕ್ರವಾರ, ಡಿಸೆಂಬರ್ 13, 2019
18 °C

ತೇವಾಂಶ ಹೆಚ್ಚಳದಿಂದ ಈರುಳ್ಳಿ ನಾಶ

ಲಕ್ಷ್ಮಣ ಎಚ್ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ಡಂಬಳ: ಕೆರೆಗೆ ಸಮೀಪದ ತಮ್ಮ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದ ರೈತರೊಬ್ಬರು, ಈಗ ತೇವಾಂಶ ಹೆಚ್ಚಳದಿಂದ ಇಡೀ ಬೆಳೆಯನ್ನು ಕಳೆದುಕೊಂಡು ತೀವ್ರ ಆರ್ಥಿಕ ಹಾನಿ ಅನುಭವಿಸಿದ್ದಾರೆ.

ಡಂಬಳದ ರೈತ ಅಬ್ದುಲ್‍ ಅಜೀಜ ಬಿ. ತಾಂಬೋಟಿ ಅವರ ಜಮೀನಿಗೆ ಹೊಂದಿಕೊಂಡಂತೆ ಹಳ್ಳ ಇದೆ.
ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಸುರಿದ ಧಾರಾಕಾರ ಮಳೆಯಿಂದ ಹಳ್ಳ ತುಂಬಿ ಹರಿಯುತ್ತಿದೆ. ಹಳ್ಳದಲ್ಲಿ ನೀರು ಬಂದಿದ್ದರಿಂದ ಇವರ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿ ಸಂಪೂರ್ಣ ಕೊಳೆತು ಹೋಗಿದೆ. 

ಡಂಬಳದ ವಿಕ್ಟೋರಿಯಾ ಕೆರೆ ದಂಡೆಯ ಮೇಲ್ಭಾಗದಲ್ಲಿ ಹಲವು ರೈತರ ಜಮೀನುಗಳಿವೆ. ಆದರೆ, ಕಳೆದ ಎರಡು ತಿಂಗಳಿನಿಂದ ಡೋಣಿ,ಕಪ್ಪತ್ತಗುಡ್ಡ ಸೇರಿದಂತೆ ವಿವಿಧ ಪ್ರದೇಶಗಳಿಂದ ನೀರು ಹರಿದು ಕೆರೆಗೆ ಬರುತ್ತಿರುವುದರಿಂದ, ಕೆರೆಗೆ ಹೊಂದಿಕೊಂಡ ಜಮೀನುಗಳಲ್ಲಿ ತೇವಾಂಶ ಹೆಚ್ಚಳಗೊಂಡು ಈರುಳ್ಳಿ, ಮೆಕ್ಕೆಜೋಳ ಬೆಳೆ ನಾಶವಾಗಿದೆ.

ಬೀಜ,ಗೊಬ್ಬರ,ಕೂಲಿ ಸೇರಿ ಪ್ರತಿ ಎಕರೆಗೆ ₹25 ಸಾವಿರ ಖರ್ಚಾಗಿದೆ. ಈರುಳ್ಳಿಗೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹60 ದರ ಇದ್ದರೂ, ತೇವಾಂಶ ಹೆಚ್ಚಳದಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ರೈತ ಅಬ್ದುಲ್‍ಅಜೀಜ ಬಿ
ತಾಂಬೋಟಿ, ಸಿದ್ದಪ್ಪ ಮಠದ, ಮುಸ್ತಿಸಾಬ್ ಹಳ್ಳಿಕೇರಿ ಹೇಳಿದರು. ಸರ್ಕಾರ ಈರುಳ್ಳಿ ಬೆಳೆ ಹಾನಿಯಾದ ರೈತರಿಗೆ ಪ್ರತಿ ಎಕರೆಗೆ ₹50 ಸಾವಿರದಂತೆ ಪರಿಹಾರ  ನೀಡಬೇಕು ಎಂದು ಒತ್ತಾಯಿಸಿದರು.

***

ಜಮೀನಿನ ಕೊಳವೆಬಾವಿಯಲ್ಲಿ ನೀರು ಚಿಮ್ಮುತ್ತಿದೆ. ಬೆಳೆ ನಾಶವಾಗಿ ಜೀವನ ಸಂಕಷ್ಟದಲ್ಲಿದೆ. ಅಧಿಕಾರಿಯೂ ಬೆಳೆ ಪರಿಶೀಲಿಸಿ ಬೆಳೆಹಾನಿಗೆ ಪರಿಹಾರ ನೀಡಬೇಕು

–ಮಳ್ಳಪ್ಪ ಮಠದ, ರೈತ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು