ಸಿರುಗುಪ್ಪ: ‘ಅತಿ ಹೆಚ್ಚು ಇಳುವರಿ ನೀಡುವ ಮತ್ತು ಕೀಟ ನಿರೋಧಕ ಶಕ್ತಿ ಹೊಂದಿರುವ ಸುಧಾರಿತ ಬಿ.ಟಿ. ಹತ್ತಿ ತಳಿಗಳನ್ನು ರೈತರು ಆಯ್ಕೆ ಮಾಡಿಕೊಳ್ಳಬೇಕು’ ಎಂಧು ರಾಯಚೂರು ವಿಶ್ವವಿದ್ಯಾಲಯದ ಸಂಶೋಧನಾ ಸಹಾಯಕ ನಿರ್ದೇಶಕ ನಿಡಗುಂಡಿ ಜಯಪ್ರಕಾಶ್ ಸಲಹೆ ನೀಡಿದರು.

ತಾಲ್ಲೂಕಿನ ಮಿಟ್ಟೆಸೂಗೂರು ಗ್ರಾಮದಲ್ಲಿ ಕೃಷಿ ಇಲಾಖೆ, ಅಖಿಲ ಭಾರತ ಹತ್ತಿ ಅಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಗುರುವಾರ ನಡೆದ ಹತ್ತಿ ಬೆಳೆಗಾರರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಬಿ.ಟಿ. ಹತ್ತಿಯ ಅಧಿಕ ಇಳುವರಿಗಾಗಿ ಬೇಸಾಯ ತಾಂತ್ರಿಕತೆ, ಭರ್ತಿ ಮಾತಾ ಬಚಾವೋ ಅಭಿಯಾನ, ಸಮತೋಲಿತ ರಸಗೊಬ್ಬರಗಳ ಬಳಕೆ, ಮಣ್ಣಿನ ಪರೀಕ್ಷೆ ಆಧರಿಸಿ ಗೊಬ್ಬರ ಬಳಕೆ, ನೀರಾವರಿ, ಸೂಕ್ತ ಸಮಯದಲ್ಲಿ ಬಿತ್ತನೆ, ಸರಿಯಾದ ಪೋಷಕಾಂಶಗಳ ಬಳಕೆ, ಕೀಟ ಬಾಧೆ ನಿಯಂತ್ರಣ, ಲಾಭ ಹೆಚ್ಚಳ, ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಬೆಳೆ ಪದ್ಧತಿ, ಹೊಸ ತಂತ್ರಜ್ಞಾನಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ರೆಡ್ಡಿ ಅವರು, ಕೃಷಿ ಇಲಾಖೆಯಲ್ಲಿ ರೈತರಿಗೆ ದೊರೆಯುವ ಸೌಲಭ್ಯಗಳು, ಯೋಜನೆಗಳು, ಬೀಜೋಪಚಾರದ ಬಗ್ಗೆ ತಿಳಿಸಿದರು.

ಕೀಟಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಶಿವಾನಂದ ಹಂಚಿನಾಳ, ಕೃಷಿ ಅಧಿಕಾರಿಗಳಾದ ಬಾಲಜಿ ನಾಯಕ್, ಪುರುಷೋತ್ತಮ್, ಪರಮೇಶ್ವರ್ ರೆಡ್ಡಿ, ಆತ್ಮ ಯೋಜನೆ ಅಧಿಕಾರಿಗಳಾದ ಹರೀಶ್ ನಾಯಕ್ ಮತ್ತು ಹುಸೇನ್ ಭಾಷಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-25-838033053

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.