ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮಾವು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ತೋಟಗಾರಿಕೆ ರೈತರು ಈ ಬೆಳೆಯಲ್ಲಿ ಹೆಚ್ಚಿನ ಆರ್ಥಿಕ ಪ್ರಗತಿ ಸಾಧಿಸಬೇಕು. ಪೂರಕವಾಗಿ ಹವಾಮಾನ ಆಧಾರಿತ ಮಾವು ಬೆಳೆ ವಿಮಾ ಯೋಜನೆಯ ಲಾಭ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಹೇಳಿದರು.

ತೋಟಗಾರಿಕೆ ಇಲಾಖೆಯಅಧಿಕಾರಿಗಳು, ವಿಜ್ಞಾನಿಗಳು ಹಾಗೂ ತಾಂತ್ರಿಕ ಸಮಿತಿಯ ಸದಸ್ಯರ ಜೊತೆ ಇತ್ತೀಚೆಗೆ ಜಿಲ್ಲಾ ತಾಂತ್ರಿಕ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ಮಾವು ಬೆಳೆಗಾರರಿಗೆ ವಿಮೆ ಪ್ರಯೋಜನವು ಹೆಚ್ಚಾಗಿ ಸಿಗಬೇಕು. ಅದಕ್ಕಾಗಿ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು. ಆ ಮೂಲಕ ನಷ್ಟದಿಂದ ಪಾರಾಗುವಂತೆ ಮಾಡಬೇಕು ಎಂದರು.

ಸಭೆಯಲ್ಲಿ 2023-24, 2024-25 ಹಾಗೂ 2025-26ನೇ ಸಾಲಿನಲ್ಲಿ ಬೆಳೆ ವಿಮೆ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದ ರೈತರಿಗೆ ಜಾರಿಯಲ್ಲಿದ್ದ ಹವಾಮಾನ ಆಧಾರಿತ ಮಾವು ಬೆಳೆ ವಿಮೆಗೆ ಸಂಬಂಧಿಸಿದಂತೆ ವಿಪತ್ತು ವಿಶ್ಲೇಷಣೆ ಮತ್ತು ನಿರ್ಧರಣ ಅಂಶಗಳ ಕುರಿತು ಚರ್ಚಿಸಿದರು. ವಿಜ್ಞಾನಿಗಳಿಂದಲೂ ಅಭಿಪ್ರಾಯ ಪಡೆದ ಅವರು, ಬೆಳೆ ಹಾನಿಯಿಂದಾಗಿ ರೈತರಿಗೆ ದೊರೆತಿರುವ ಪರಿಹಾರ ಮೊತ್ತದ ವಿವರದ ಮಾಹಿತಿ ಪಡೆದರು.

ಮುಂದಿನ 2026-27, 2027-28 ಹಾಗೂ 2028-29ನೇ ಅವಧಿಗೆ ಟರ್ಮ್ಸ್ ಶೀಟ್ ಸಿದ್ದಪಡಿಸುವ ಪೂರ್ವದಲ್ಲಿ 2024-25ನೇ ಸಾಲಿನಲ್ಲಿ 127 ಗ್ರಾಮ ಪಂಚಾಯಿತಿ ಮತ್ತು 2 ಸ್ಥಳೀಯ ಸಂಸ್ಥೆಗಳ ವಿಮಾ ಘಟಕಗಳಲ್ಲಿ ಇಂಡೆಕ್ಸ್ ಮತ್ತು ಫೇಸ್ವಾರು, ವಿಮಾ ಘಟಕವಾರು ಹೊಂದಿರುವ ಪರಿಹಾರದ ಮೊತ್ತವನ್ನು ತುಲನೆ ಮಾಡಿದರು. ತುಲನಾತ್ಮಕ ಪಟ್ಟಿಯೊಂದಿಗೆ ರೈತ ಮುಖಂಡರು, ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರನ್ನೊಳಗೊಂಡಂತೆ ಜಿಲ್ಲಾಧಿಕಾರಿ ವಿಸೃತವಾಗಿ ಚರ್ಚಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಅದರಂತೆ ಅಗತ್ಯ ಮಾರ್ಪಾಡುಗಳನ್ನು ಮಾಡಿ ಕಳೆದ ಅವಧಿಗಿಂತ ಮುಂಬರುವ ವರ್ಷಗಳಲ್ಲಿ ರೈತರಿಗೆ ಮತ್ತಷ್ಟು ಹೆಚ್ಚಿನ ಪರಿಹಾರ ಬರುವ ಅಥವಾ ಲಾಭದಾಯಕವಾಗುವ ರೀತಿಯಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಮಾವು ಬೆಳೆ ವಿಮೆ ಯೋಜನೆಯಡಿ, ಟರ್ಮ್ ಶೀಟ್ ಸಿದ್ದಪಡಿಸುವಂತೆ ತೋಟಗಾರಿಕೆ ಜಂಟಿ ನಿರ್ದೇಶಕರಿಗೆ ಸೂಚಿಸಿದರು.

ಅಗತ್ಯ ಮಾರ್ಪಾಡುಗಳೊಂದಿಗೆ, ಸಿದ್ದಪಡಿಸಲಾದ ಟರ್ಮ್ ಶೀಟ್ಗಳನ್ನು ಜಿಲ್ಲಾಧಿಕಾರಿಯವರಿಂದ ದೃಢೀಕರಿಸಿ, ಮುಂದಿನ ಕ್ರಮಕ್ಕಾಗಿ ತೋಟಗಾರಿಕೆ ಇಲಾಖೆಯ ಹಾರ್ಟಿಕಲ್ಚರ್ ಇ-ಗವೆರ್ನನ್ಸ್ ವಿಭಾಗಕ್ಕೆ ಸಲ್ಲಿಸುವಂತೆ ತೋಟಗಾರಿಕೆ ಜಂಟಿ ನಿರ್ದೇಶಕರಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-14-146066647

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.