ಸೆಪ್ಟೆಂಬರ್ 11, 1978! ಲಂಡನ್ನ ವಾಟೆರ್ಲೋ ಬ್ರಿಡ್ಜ್ ಮೇಲಿನ ಬಸ್ ನಿಲ್ದಾಣದ ಬಳಿ ನಿಂತಿದ್ದ 49 ವರ್ಷದ ಜಾರ್ಜಿ ಮಾರ್ಕೊವ್ ಎಂಬಾತನನ್ನು ರಿಸಿನ್ ವಿಷ ಗುಳಿಗೆ ಬಳಸಿ ಹತ್ಯೆ ಮಾಡಲಾಯಿತು. ಹತ್ಯೆಯಾದ ವ್ಯಕ್ತಿಯೊಬ್ಬ ಪತ್ರಕರ್ತ, ಬರಹಗಾರ, ರಷ್ಯಾದ ಗೂಢಚಾರಿ, ಗಡಿಪಾರಾದ ಬಲ್ಗೇರಿಯಾದ ಬಂಡಾಯಗಾರನೂ ಹೌದು. ಅವನನ್ನು ಹತ್ಯೆ ಮಾಡಲು ಆಯ್ದುಕೊಂಡ ವಿಧಾನವು ಆಗಿನ ಕಾಲಕ್ಕೆ ಎಂಥವರನ್ನೂ ಬೆಚ್ಚಿಬೀಳಿಸುವಂತಿತ್ತು.

ಕೊಲೆಗೆ ಬಳಸಿದ್ದು ಕೊಡೆಯೊಂದನ್ನು. ಅದು ಕೇವಲ ಕೊಡೆ ಆಗಿರಲಿಲ್ಲ. ತುಪಾಕಿ ಅಳವಡಿಸಿದ ಕೊಡೆಯಾಗಿತ್ತು. ಯಾರಿಗೂ ಸಂಶಯ ಬಾರದಂತೆ ಮಾರ್ಪಡಿಸಿದ್ದ ಕೊಡೆ. ಅದನ್ನು ಅಂಬ್ರೆಲ್ಲಾ ಗನ್ (Umbrella Gun) ಎಂದೇ ಕರೆಯಲಾಗುತ್ತಿತ್ತು. ಕೊಡೆಯ ಕೆಳ ತುದಿಗೆ 1.7 ಎಂ.ಎಂ. ಗಾತ್ರದ ವಿಷಕಾರಿ ಸೂಕ್ಷ್ಮ ರಿಸಿನ್ ಗುಳಿಗೆ ಸಿಕ್ಕಿಸಿ ಜಾರ್ಜಿ ಮಾರ್ಕೊವ್ನ ಬಲ ತೊಡೆಯ ಹಿಂಭಾಗಕ್ಕೆ ಗುರಿ ಇಟ್ಟು ಗುಟ್ಟಾಗಿ ಟ್ರಿಗರ್ ಮಾಡಿ ಕೊಲೆ ಮಾಡಲಾಗಿತ್ತು. ಆ ಬಳಿಕ ಅದೊಂದು ಐತಿಹಾಸಿಕ ಘಟನೆಯಾಯಿತು. ಅಂಬ್ರೆಲ್ಲಾ ಗನ್ ಪ್ರಕರಣ ಅಂತಲೇ ಜಗತ್ತಿನಲ್ಲೆಡೆ ಹರಡಿತು. ಆದರೆ ಆ ಕೊಲೆ ಮಾಡಿದ್ದು ಯಾರು ಅನ್ನೋದು ಇದುವರೆಗೆ ಪತ್ತೆಯಾಗಿಲ್ಲ.

ಏನಿದು ರಿಸಿನ್?

ರಿಸಿನ್ ಅತ್ಯಂತ ಪ್ರಬಲ ವಿಷಕಾರಿ ವಸ್ತು. ಸೈನೈಡ್ಗಿಂತಲೂ 6000 ಪಟ್ಟು ಅಧಿಕ ವಿಷಕಾರಿ. ರಿಸಿನ್ನ 70 ಮೈಕ್ರೊ ಗ್ರಾಂ ಸಾಕು, ಒಬ್ಬ ವ್ಯಕ್ತಿಯನ್ನು ಕೊಲ್ಲಲು.

ರಿಸಿನ್ ವಿಷಪುಡಿಯನ್ನು ಬಾಯಿಯ ಮೂಲಕ ದೇಹ ತೂಕದ ಕೆ.ಜಿ.ಗೆ ತಕ್ಕಂತೆ 1ರಿಂದ 20 ಎಂ.ಜಿ. ಪ್ರಮಾಣದಲ್ಲಿ ತೆಗೆದುಕೊಂಡರೆ ಮಾರಕ. ಒಂದರಿಂದ 30 ಹರಳೆ ಬೀಜಗಳನ್ನು ತಿಂದರೆ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹರಳೆ ಬೀಜಗಳ ಬಗ್ಗೆ ನಮ್ಮ ರೈತರಿಗೆ ತಿಳಿವಳಿಕೆ ಇದೆ. ಅಪ್ಪಿತಪ್ಪಿಯೂ ತಾವು ಸಾಕುವ ದನ–ಕರು, ಮೇಕೆ, ಕುರಿಗಳಿಗೆ ಹರಳೆ ಬೀಜಗಳನ್ನೂ, ಹರಳೆ ರೊಟ್ಟಿಗಳನ್ನೂ ತಿನ್ನಲು ಕೊಡುವುದಿಲ್ಲ. ಹಾಗೇನಾದರೂ ಅವುಗಳು ಹರಳೆ ಬೀಜಗಳನ್ನು ತಿಂದುಬಿಟ್ಟರೆ, ಅವುಗಳಲ್ಲಿ ಐದಾರು ಗಂಟೆಗಳಲ್ಲೇ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ರೆಸಿನ್ ಒಂದು ಗ್ಲೈಕೋ ಪ್ರೊಟೀನ್, ಅರ್ಥಾತ್ ಸಕ್ಕರೆ ಪ್ರೊಟೀನ್ ಸಂಯುಕ್ತ. ಹಾಗೆ ಸಣ್ಣ ಸಣ್ಣ ಪ್ರೊಟೀನ್ ಘಟಕಾಂಶಗಳ ಸರಪಳಿ, ಪಾಲಿಮರ್. ಹರಳೆ ಬೀಜ ಇದರ ಮೂಲ. ಹರಳೆ ಬೀಜಗಳಿಂದ ಹರಳೆಣ್ಣೆ ತೆಗೆದ ನಂತರ ಉಳಿದ ತ್ಯಾಜ್ಯ ಹಿಸುಕಿನಿಂದ ರಿಸಿನ್ ಎಕ್ಸ್ಟ್ರ್ಯಾಕ್ಟ್ ಮಾಡಲಾಗುತ್ತದೆ. ತ್ಯಾಜ್ಯ ಹಿಸುಕಿನಲ್ಲಿ ಅದರ ತೂಕದ ಶೇಕಡ 5ರಷ್ಟು ರಿಸಿನ್ ಸಿಗುತ್ತದೆ.

ಹರಳೆಣ್ಣೆ ಉಪಯುಕ್ತ ಕಚ್ಚಾ ವಸ್ತು, ಬಹುಪಯೋಗಿ. ಆದರೆ ಸಂಸ್ಕರಿಸಿದ ರಿಸಿನ್ ಭಯಂಕರ ವಿಷಕಾರಿ. ಇದೊಂದು ಪ್ರಬಲ ಜೈವಿಕ ಭಯೋತ್ಪಾದಕ ವಿಷಕಾರಿ ಅಸ್ತ್ರವೂ ಹೌದು. ಅಮೆರಿಕದ ರೋಗನಿಯಂತ್ರಣ ಮತ್ತು ರೋಗನಿವಾರಣಾ ಸಂಸ್ಥೆ (CDC) ರಿಸಿನ್ ವಿಷವಸ್ತುವನ್ನು ‘ಜೈವಿಕ ಭಯೋತ್ಪಾದನೆ ವರ್ಗ ಬಿ’ ಎಂದು ವರ್ಗೀಕರಿಸಿದೆ.

ಭಯೋತ್ಪಾದಕ ಅಸ್ತ್ರ

ಜರ್ಮನ್ ವಿಜ್ಞಾನಿ ಪೀಟರ್ ಹರ್ಮನ್ ಸ್ಟಿಲ್ ಮಾರ್ಕ್, 1888ರಲ್ಲಿ ಹರಳೆಣ್ಣೆ ಬೀಜಗಳಿಂದ ಪ್ರಥಮ ಬಾರಿಗೆ ರಿಸಿನ್ ತಯಾರಿಸಿದ. ಜೈವಿಕ ಅಸ್ತ್ರವಾಗಿ ಬಳಸಲು ರಿಸಿನ್ ಬಗ್ಗೆ ಸರಿಸುಮಾರು ಒಂದು ಶತಮಾನ ಕಾಲ ಅಧ್ಯಯನ ನಡೆಯಿತು. ಅಮೆರಿಕ, ಫ್ರಾನ್ಸ್, ಬ್ರಿಟನ್ ಅಧಿಕಾರಿಗಳು ರಿಸಿನ್ ಅನ್ನು ಜೈವಿಕ ಸಮರಾಸ್ತ್ರವಾಗಿ ಬಳಸಲು ಬುದ್ಧಿ ಓಡಿಸಿದರು. ಅಮೆರಿಕ ಮೊದಲನೆಯ ವಿಶ್ವ ಮಹಾಸಮರ ಸಮಯದಲ್ಲಿ ರಿಸಿನ್ ಜೈವಿಕ ಅಸ್ತ್ರದ ಬಗ್ಗೆ ಅಧ್ಯಯನ ನಡೆಸಿತು. ಬ್ರಿಟಿಷ್ ಹಾಗೂ ಅಮೆರಿಕ ವಿಜ್ಞಾನಿಗಳು ಎರಡನೆಯ ವಿಶ್ವಯುದ್ಧದ ಸಮಯದಲ್ಲಿ ‘ರಿಸಿನ್ ಬಾಂಬ್’ ಅಭಿವೃದ್ಧಿಪಡಿಸಿದ್ದರು. ಇರಾಕ್ ಕೂಡ ರಿಸಿನ್ ಜೈವಿಕ ಅಸ್ತ್ರ ಹೊಂದಿತ್ತು ಎಂಬ ಗುಮಾನಿ ಇದೆ. ಆಗಿನಿಂದ ವಿಶ್ವದಾದ್ಯಂತ ಅಲ್ಲಲ್ಲಿ ಸಣ್ಣ ಪುಟ್ಟ ರಿಸಿನ್ ದಾಳಿಗಳ ದಾಖಲೆ ಸಿಗುತ್ತದೆ. ದೊಡ್ಡ ಪ್ರಮಾಣದಲ್ಲಿ ಸಾಮೂಹಿಕ ಹತ್ಯೆಗೆ ಇದುವರೆವಿಗೆ ರಿಸಿನ್ ದಾಳಿಗಳಾಗಿಲ್ಲ.

ಅಮೆರಿಕದ ಮಿನಿಸೋಟ ರಾಜ್ಯದ ವಾಯವ್ಯ ಭಾಗದಲ್ಲಿ ಪೊಲೀಸರ ಮೇಲೆ, ಕಾನೂನು ಪಾಲಕರ ಮೇಲೆ ರಿಸಿನ್ ಜೈವಿಕ ಅಸ್ತ್ರ ಬಳಸಲು ಭಯೋತ್ಪಾದಕರು 1990ರ ಅವಧಿಯಲ್ಲಿ ಸಂಚು ರೂಪಿಸಿದ್ದರು. ಅಮೆರಿಕದ ಸರ್ಕಾರಿ ಅಧಿಕಾರಿಗಳನ್ನೂ, ಅಂಚೆ ಇಲಾಖೆ ಸಿಬ್ಬಂದಿಯನ್ನೂ ಹತ್ಯೆ ಮಾಡಲು 2000 ಹಾಗೂ 2010ರಲ್ಲಿ ಅಂಚೆ ಮೂಲಕ ರಿಸಿನ್ ಪುಡಿಯನ್ನು ಕಳುಹಿಸಿದ್ದು ವರದಿಯಾಗಿತ್ತು. ಬ್ರಿಟನ್ ಹಾಗೂ ಅಮೆರಿಕದಲ್ಲಿ ರಿಸಿನ್ ಹೊಂದಿದ್ದ, ಅದನ್ನು ತಯಾರಿಸಲು ಹರಳೆ

ಹಿಸುಕು ಮತ್ತು ಪರಿಕರಗಳನ್ನು ಹೊಂದಿದ್ದ ಕೆಲವು ಭಯೋತ್ಪಾದಕರನ್ನು ಬಂಧಿಸಲಾಗಿತ್ತು. ನಮ್ಮ ದೇಶದಲ್ಲೂ ಇತ್ತೀಚಿಗೆ, ಅಂದರೆ ನವೆಂಬರ್ 9, 2025ರಂದು ಗುಜರಾತಿನ ಅಹಮದಾಬಾದ್ ಬಳಿ ಮೂವರನ್ನು ಸೆರೆಹಿಡಿದು ಅವರಿಂದ ರಿಸಿನ್ ಹಾಗೂ ರಿಸಿನ್ ತಯಾರಿಕಾ ವಸ್ತುಗಳನ್ನೂ ವಶಕ್ಕೆ ಪಡೆಯಲಾಯಿತು.

ಬಿಟ್ಟಿ, ಅಗ್ಗ, ಸುಲಭ ಲಭ್ಯತೆ, ತಯಾರಿಕೆಯೂ ಸರಳ ಮತ್ತು ಹೆಚ್ಚು ವಿಷಕಾರಿ ಎಂಬ ಕಾರಣಕ್ಕೆ ಭಯೋತ್ಪಾದಕರು ರಿಸಿನ್ ಬಳಸುವ ಹಾದಿ ತುಳಿದಿದ್ದಾರೆ. ಈ ದಾಳಿ ನಡೆಸಲು ದೊಡ್ಡ ದೊಡ್ಡ ಜಟಿಲ ಶಸ್ತ್ರಾಸ್ತ್ರಗಳ ಅವಶ್ಯಕತೆ ಇಲ್ಲ ಎಂಬುದೂ ಒಂದು ಕಾರಣವಾಗಿದೆ.

ಹರಳೆ ಬೀಜದ ಉತ್ಪಾದನೆ

ಹರಳೆ ಬೀಜ ಮತ್ತು ಹರಳೆಣ್ಣೆ ಉತ್ಪಾದನೆಯಲ್ಲಿ ನಮ್ಮ ದೇಶ ಅಗ್ರಸ್ಥಾನದಲ್ಲಿದೆ. ವಿಶ್ವದ ಶೇಕಡ 86ರಿಂದ 90ರಷ್ಟು ಹರಳೆಣ್ಣೆ ಬೀಜಗಳನ್ನು ನಮ್ಮ ದೇಶವೇ ಉತ್ಪಾದಿಸುತ್ತದೆ. ನಮ್ಮ ದೇಶವಲ್ಲದೆ ಚೀನಾ, ಬ್ರೆಜಿಲ್, ಮೊಜಾಂಬಿಕ್, ಇಥಿಯೋಪಿಯ, ಮ್ಯಾನ್ಮಾರ್, ಪಾಕಿಸ್ತಾನ, ಥಾಯ್ಲೆಂಡ್ ದೇಶಗಳಲ್ಲೂ ಹರಳೆಣ್ಣೆ ಬೀಜ ಬೆಳೆಯುತ್ತಾರೆ.

ರಿಸಿನ್ ವಿಷವಸ್ತುವನ್ನು ಪುಡಿ, ಇಬ್ಬನಿ, ಗುಳಿಗೆ, ನೀರು, ಆಹಾರ, ಇಂಜೆಕ್ಷನ್ - ಹೀಗೆ ಹಲವು ರೂಪದಲ್ಲಿ ಪ್ರಯೋಗಿಸಬಹುದು. ಮೈ ಕೈ ಕಾಲುಗಳಲ್ಲಿ ಗಾಯಗಳಿದ್ದರೆ ಮಾತ್ರ ಕೆಲಸ ಮಾಡುತ್ತದೆ. ರಿಸಿನ್ ವಿಷಕ್ಕೆ ಮರುಮದ್ದು (Antidote) ಇಲ್ಲ. ಔಷಧಿ ಇಲ್ಲ, ವ್ಯಾಕ್ಸಿನ್ ಇಲ್ಲ. ರೋಗಿಗಳಿಗೆ ರಕ್ತದ ಮೂಲಕ ಪೌಷ್ಟಿಕ ದ್ರವ, ಉಸಿರಾಟ ಪೂರಕ ವ್ಯವಸ್ಥೆ ಸೇರಿದಂತೆ ಕೆಲವೊಂದು ಪೂರಕ ಚಿಕಿತ್ಸೆಯನ್ನಷ್ಟೇ ನೀಡಬಹುದು.

ವಿಷ ಲಕ್ಷಣಗಳು

ರಿಸಿನ್ ಅಂಶವು ಶರೀರದಲ್ಲಿನ ಜೀವಕೋಶಗಳ ಒಳಗೆ ಪ್ರವೇಶಿಸಿ ಪ್ರೊಟೀನ್

ಸಂಯೋಜಿಸುವ ರೈಬೋಸೋಮ್ಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಹೀಗಾಗಿ ಜೀವಕೋಶಗಳ ಸಾವಾಗಿ ಅಂಗಾಂಗ ಕಾರ್ಯವೈಫಲ್ಯವಾಗಿ ದೇಹವು ಉಸಿರು ಚೆಲ್ಲುತ್ತದೆ.

ದ್ರವ ರೂಪದ ಆಹಾರದಲ್ಲಿ ರಿಸಿನ್ ಹೊಟ್ಟೆ ಸೇರಿದಾಗ ಫುಡ್ ಪಾಯ್ಸನ್ ಆಗಿ ವಾಂತಿ, ರಕ್ತಭೇದಿ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಲಿವರ್, ಕಿಡ್ನಿ ಹಾಳಾಗುತ್ತದೆ. ಒಂದು ವೇಳೆ ರಿಸಿನ್ ಪುಡಿಯನ್ನು ಶ್ವಾಸದ ಮೂಲಕ ಎಳೆದುಕೊಂಡರೆ ಮೂರೇ ಗಂಟೆಗಳಲ್ಲಿ ಕೆಮ್ಮು, 24 ಗಂಟೆಗಳಲ್ಲಿ ವಾಕರಿಕೆ, ಭೇದಿ ಮೈಕೈ ನೋವು ಕಾಣಿಸಿಕೊಳ್ಳುತ್ತದೆ. ವಿಷ ಹೆಚ್ಚಿನ ಪ್ರಮಾಣದಲ್ಲಿದ್ದರೆ ಹೃದಯ ರಕ್ತನಾಳಗಳಿಗೆ ಹಾನಿಯಾಗಿ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ಸಾವಾಗಬಹುದು. ರಿಸಿನ್ ವಿಷವು ಸೂಜಿ ಚುಚ್ಚಿನ ಮೂಲಕ ಶರೀರ ಪ್ರವೇಶಿಸಿದರೆ ಅಂಗಾಂಗ ಕಾರ್ಯವೈಫಲ್ಯ ಉಂಟಾಗಿ ಶೀಘ್ರವೇ ಸಾವಾಗಬಹುದು. ಆದರೆ, ರಿಸಿನ್ ಪುಡಿ ಮೈಮೇಲೆ ಬಿದ್ದರೆ ದುಷ್ಪರಿಣಾಮ ಸಾಧ್ಯತೆ ತೀರಾ ಕಡಿಮೆ.

1980ದಿಂದೀಚೆಗೆ ವಿಶ್ವದಾದ್ಯಂತ 50 ರಿಸಿನ್ ವಿಷ ಪ್ರಯೋಗ ಪ್ರಕರಣಗಳು ದಾಖಲೆಯಾಗಿವೆ. ಅದರಲ್ಲಿ ಆರು ಮಂದಿಯ ಸಾವು ಸಂಭವಿಸಿದೆ. ಶೇಕಡ 74ರಷ್ಟು ಪ್ರಕರಣಗಳು ಆಕಸ್ಮಿಕ. ಅರಿವಿಲ್ಲದೆ ಸ್ವಯಂ ಪ್ರಯೋಗ, ಇಲ್ಲವೇ ತಿಳಿವಳಿಕೆ ಇಲ್ಲದೆ ಇತರ ಬೀಜಗಳೆಂದು ತಪ್ಪಾಗಿ ತಿಳಿದು ಹರಳೆ ಬೀಜಗಳನ್ನು ತಿಂದು ಸಾವಾಗಿರುವ ಸಾಧ್ಯತೆ ಹೆಚ್ಚು. ಇದ್ಯಾವುದೂ ಭಯೋತ್ಪಾದಕ ಕಾರ್ಯಾಚರಣೆ ಅಲ್ಲ.

ಭಯ ಬೇಡ

ರಿಸಿನ್ನಿಂದ ಸಾವು ಸಂಭವಿಸಿರುವ ಪ್ರಕರಣಗಳು ಬೆರಳೆಣಿಕೆಯಷ್ಟು. ಸಾರ್ವಜನಿಕರ ಲೋಕಜ್ಞಾನಕ್ಕಾಗಿ ಈ ಮಾಹಿತಿ. ರಿಸಿನ್ ಬಗ್ಗೆ ಸಂಶೋಧನೆ ನಡೆಯಬೇಕು. ಆ ವಿಷಕ್ಕೆ ಮರುಮದ್ದು ತಯಾರಿಸಬೇಕು. ವಿಜ್ಞಾನಿಗಳಿಗೆ ಇದೊಂದು ಸವಾಲು.

ಬೀಜಗಳಿಂದ ಹರಳೆಣ್ಣೆ ತೆಗೆಯುವವರಿಗೆ ಪರವಾನಗಿ ಕಡ್ಡಾಯ ಮಾಡಬೇಕು. ಹರಳೆಣ್ಣೆ ತೆಗೆದ ನಂತರ ಉಳಿದ ತ್ಯಾಜ್ಯ ಹಿಸುಕನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಅದನ್ನು ಯಾರಿಗಾದರೂ ಮಾರುವುದಾಗಲಿ, ಉಚಿತವಾಗಿ ನೀಡುವುದಾಗಲಿ ಮಾಡಕೂಡದು. ರೈತರಿಗೆ, ಸಾರ್ವಜನಿಕರಿಗೆ ಇದರ ಬಗ್ಗೆ ಅರಿವು ಮೂಡಿಸುವುದು ಅಗತ್ಯ.

ಪ್ರಕೃತಿಯಿಂದ ಒಳ್ಳೆಯದನ್ನು ಪಡೆಯೋಣ, ಬಳಸೋಣ, ಹುಳುಕನ್ನಲ್ಲ. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಇಬ್ಬರು ಮಕ್ಕಳಲ್ಲಿ ಅದೆಷ್ಟು ವ್ಯತ್ಯಾಸ! ಒಂದು ಹರಳೆಣ್ಣೆ ಎಂಬ ಔಷಧಿ, ಮತ್ತೊಂದು ರಿಸಿನ್ ಎಂಬ ವಿಷ.

(ಇನ್ನಷ್ಟು ಆಸಕ್ತಿಕರ ನುಡಿಚಿತ್ರಗಳಿಗಾಗಿ, ಕುತೂಹಲಕರ ಕತೆ–ಕಾದಂಬರಿಗಾಗಿ ಮಾರುಕಟ್ಟೆಯಲ್ಲಿರುವ ಸುಧಾ ಓದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.