ಸಾಗರ: ‘ಮಾವಿನ ವೈವಿಧ್ಯಮಯ ತಳಿಗಳ ಅಧ್ಯಯನದತ್ತ ಮಲೆನಾಡಿನ ಕೃಷಿಕರು ಆಸಕ್ತಿ ತೋರಬೇಕಿದೆ’ ಎಂದು ಕೃಷಿ ತಜ್ಞ ಅನಂತಮೂರ್ತಿ ಜವಳಿ ಹೇಳಿದರು.

ತಾಲ್ಲೂಕಿನ ಹೆಗ್ಗೋಡಿನ ಸಮೀಪದ ಕೋಣನಕಟ್ಟೆ ಗ್ರಾಮದ ನಟೇಶ್ ಅವರ ಮಾವಿನ ತೋಟದಲ್ಲಿ ತಾಲ್ಲೂಕು ಕೃಷಿಕ ಸಮಾಜ ಸೋಮವಾರ ಏರ್ಪಡಿಸಿದ್ದ ‘ಮಾವಿನ ಮಿಡಿ ಕೃಷಿ’ ಕುರಿತ ಮಾಹಿತಿ ಶಿಬಿರದಲ್ಲಿ ಮಾತನಾಡಿದರು.

‘ಮಲೆನಾಡಿನ ವಾತಾವರಣಕ್ಕೆ ಯಾವ ತಳಿಯ ಮಾವು ಸೂಕ್ತ ಎಂಬುದರ ಮಾಹಿತಿ ಪಡೆದು ಅಂತಹ ತಳಿಗಳ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ಈ ಸಂಬಂಧ ಅಧ್ಯಯನವಿಲ್ಲದೆ ಬೆಳೆ ಬೆಳೆಯಲು ಮುಂದಾದರೆ ವೈಫಲ್ಯ ಅನುಭವಿಸಬೇಕಾಗುತ್ತದೆ’ ಎಂದು ಕಿವಿಮಾತು ಹೇಳಿದರು.

‘ಮಾವು ಬೆಳೆದ ನಂತರ ಮಾವಿನ ಮಿಡಿ ಅಥವಾ ಹಣ್ಣುಗಳ ಮಾರುಕಟ್ಟೆ ಕುರಿತು ಕೃಷಿಕರು ದೂರಗಾಮಿ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಬೆಳೆದ ಉತ್ಪನ್ನಗಳ ಮೌಲ್ಯವರ್ಧನೆ ಕುರಿತು ಚಿಂತಿಸುವ ಅಗತ್ಯವಿದೆ’ ಎಂದು ಸಲಹೆ ನೀಡಿದರು.

‘ಮಲೆನಾಡಿನ ಪಾರಂಪರಿಕ ಕೃಷಿ ಪದ್ಧತಿಯನ್ನು ಉಳಿಸಿಕೊಳ್ಳುವ ಮೂಲಕ ಕಾಡು ಹಣ್ಣಿನ ಗಿಡಗಳನ್ನು ನಾವು ನಶಿಸದಂತೆ ನೋಡಿಕೊಳ್ಳಬೇಕಿದೆ. ಈ ಭಾಗದಲ್ಲಿ ವೈವಿಧ್ಯಮಯ ಅಪ್ಪೆಮಿಡಿಗಳನ್ನು ಗುರುತಿಸಲಾಗಿದ್ದು, ರೈತರು ಸೂಕ್ತ ಮಾಹಿತಿಯೊಂದಿಗೆ ಇವುಗಳನ್ನು ಬೆಳೆಯಲು ಮುಂದಾಗಬೇಕು’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಎಸ್. ಮಹಾಬಲೇಶ್ವರ ಹೇಳಿದರು.

ಕೃಷಿಕ ಸಮಾಜದ ಅಧ್ಯಕ್ಷ ವಿ.ಜಿ. ಶ್ರೀಧರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗಣಪತಿ ಹೆನಗೆರೆ, ಖಜಾಂಚಿ ಲಿಂಗಪ್ಪ ಗೌಡ, ಕೃಷಿಕರಾದ ನಟೇಶ್, ಮಾಧವಿ, ಕೃಷಿ ಇಲಾಖೆಯ ಆತ್ಮ ಯೋಜನೆಯ ತಾಂತ್ರಿಕ ವ್ಯವಸ್ಥಾಪಕ ವಿನಾಯಕ ರಾವ್ ಬೇಳೂರು, ಕೃಷಿ ಅಧಿಕಾರಿ ಕೆ.ಆರ್. ರಮೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-42-1445738892

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.