ಶಿಡ್ಲಘಟ್ಟ: ಒಂದು ಕಾಲದಲ್ಲಿ ಗ್ರಾಮೀಣ ಜನರ ಅವಿಭಾಜ್ಯ ಅಂಗವಾಗಿದ್ದ ಎಲೆ, ಅಡಿಕೆಯ ಚೀಲ ಇಂದು ಕಣ್ಮರೆಯಾಗುತ್ತಿದೆ. ಬಾಯಿ ಮತ್ತು ಹಲ್ಲನ್ನು ಕೆಂಪಾಗಿಸಿದ್ದರೂ, ಗ್ರಾಮೀಣ ಜನರು ಮಾತ್ರ ಎಲೆ, ಅಡಿಕೆ ಹಾಕುವುದನ್ನು ಮಾತ್ರ ಬಿಡುತ್ತಲೇ ಇರಲಿಲ್ಲ.

ಕೇವಲ ಜಗಿಯುವುದಕ್ಕಷ್ಟೇ ಅಲ್ಲದೆ, ಹುಟ್ಟು ಮತ್ತು ಸಾವಿನ ನಡುವಿನ ಅನೇಕ ಕಾರ್ಯಕ್ರಮಗಳಲ್ಲಿ ಎಲೆ, ಅಡಿಕೆಗೆ ಹೆಚ್ಚಿನ ಮಹತ್ವವಿತ್ತು. ಎಲೆ ಮತ್ತು ಅಡಿಕೆಯನ್ನು ಇಟ್ಟುಕೊಳ್ಳಲೆಂದೇ ಎಲೆ, ಅಡಿಕೆ ಚೀಲ ಇಟ್ಟುಕೊಳ್ಳುತ್ತಿದ್ದರು. ಇದಕ್ಕೆ ತಿತ್ತಿ ಅಥವಾ ಸಂಚಿ ಎಂದೆಲ್ಲಾ ಕರೆಯುತ್ತಿದ್ದರು. ತಾವು ಎಲ್ಲಿಗೇ ಹೋಗಲಿ, ಅವರೊಂದಿಗೆ ಈ ಎಲೆ, ಅಡಿಕೆ ಚೀಲ ಸದಾ ಜೊತೆಗಿರುತ್ತಿತ್ತು.

ಕನ್ನಡದ ಕವಿಯತ್ರಿ ಹೊನ್ನಮ್ಮ ಅವರಿಗೆ ಈ ಎಲೆ ಅಡಿಕೆ ಚೀಲದಿಂದಲೇ ಸಂಚಿ ಹೊನ್ನಮ್ಮ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ಈ ಸಂಚಿ ಅಥವಾ ತಿತ್ತಿಯಲ್ಲಿ ಬಹೂಪಯೋಗಿ ವಿಭಾಗಗಳಿವೆ. ಸುಣ್ಣದ ಡಬ್ಬಿಗೊಂದು ಜಾಗ, ಹಲ್ಲುಕಡ್ಡಿಗೊಂದು ಜಾಗ, ಪಕ್ಕದಲ್ಲಿ ಎಲೆ ಇಡುವ ಅರೆ, ಅಡಿಕೆ ಇಡಲು ಒಂದು ಪದರವಿರುತ್ತದೆ. ಒಂದು ಅಡಿ ಪದರ ಉದವಿದ್ದು ಸೊಂಟಕ್ಕೆ ಸಿಕ್ಕಿಸಿಕೊಳ್ಳಲು ಅನುಕೂಲಕರವಾಗಿರುತ್ತದೆ. ಇದರಲ್ಲಿ ಕಡ್ಡಿಪುಡಿ(ತಂಬಾಕು ಪುಡಿ) ಇಡಲೂ ಸ್ಥಳವುಂಟು. ಹಲ್ಲಿಲ್ಲದವರು ಕಟ್ಟಾಣಿಯನ್ನೂ ಇದರಲ್ಲಿಟ್ಟುಕೊಳ್ಳುತ್ತಾರೆ.

ಕೆಲವು ತಿತ್ತಿಗಳಿಗೆ ಉದ್ದನೆಯ ಪದರದ ತುದಿಗೆ ಪೊರಕೆ ಕಡ್ಡಿ ಗಾತ್ರದ ದಾರ ಹಾಕಿರುತ್ತಾರೆ. ತಿತ್ತಿಯನ್ನು ಗುಂಡಗೆ ಸುತ್ತಿ ಆ ದಾರದಿಂದ ಸುತ್ತಿ ಅದನ್ನು ಮಹಿಳೆಯರು ಸೊಂಟದ ಬಳಿ ಬಟ್ಟೆಗೆ ಸಿಕ್ಕಿಸಿ ಇಟ್ಟುಕೊಳ್ಳುತ್ತಿದ್ದರು. ಇದು ಗ್ರಾಮೀಣ ಜನರ ಹಣದ ಚೀಲವೂ ಹೌದು. ಸೂಜಿದಾರ ಸೇರಿದಂತೆ ಅನೇಕ ಸಣ್ಣ ಪುಟ್ಟ ಪರಿಕರಗಳನ್ನೂ ಇದರಲ್ಲಿ ಇಟ್ಟಿರುತ್ತಾರೆ.

ಹಳ್ಳಿಗಳಲ್ಲಿ ಅಲ್ಲಲ್ಲಿ ಈ ತಿತ್ತಿಗಳು ಕಂಡು ಬರುತ್ತಿವೆ. ಇನ್ನೂ ಸಂಪೂರ್ಣವಾಗಿ ಕಣ್ಮರೆಯಾಗಿಲ್ಲ. ಸಂತೆಗಳಲ್ಲಿ, ವೃದ್ಧರ ಬಳಿ ಕಾಣಸಿಗುತ್ತದೆ. ಒಂದು ತಿತ್ತಿಯಲ್ಲಿನ ಎಲೆ ಅಡಿಕೆ ತನ್ನ ಆಯುಷ್ಯದಲ್ಲಿ ನೂರಾರು ಬಾಯಿಗಳನ್ನು ಸೇರುತ್ತದೆ. ಹೆಂಗಸರು ಮೊದಲು ಒಂದೆಡೆ ಸೇರಿದಾಗ ಈ ತಿತ್ತಿಯು ಅವರ ಸ್ನೇಹದ ದ್ಯೋತಕವಾಗಿರುತ್ತಿತ್ತು. ಎಲೆ ಅಡಿಕೆ ಹಂಚಿಕೊಂಡು ನಂತರ ಮಾತಿಗೆ ತೊಡಗುತ್ತಿದ್ದರು.

ನನಗೆ ಮೊದಲಿನಿಂದಲೂ ಎಲೆ ಅಡಿಕೆ ಅಭ್ಯಾಸವಾಗಿದ್ದು, ಎಲೆ, ಅಡಿಕೆ ಇಲ್ಲದಿದ್ದರೆ, ಇರಲಾರೆ. ಜಗಿಯಲು ಹಲ್ಲು ಇಲ್ಲ. ಹೀಗಾಗಿ, ಕುಟ್ಟಾಣಿಯಲ್ಲಿ ಎಲೆ, ಅಡಿಕೆ, ಸುಣ್ಣ ಸೇರಿ ಕುಂಟಿ ನಂತರ ಬಾಯಿಗೆ ಹಾಕಿಕೊಳ್ಳುತ್ತೇನೆ ಎನ್ನುತ್ತಾರೆ ಅಪ್ಪೇಗೌಡನಹಳ್ಳಿಯ 88 ವರ್ಷದ ವೃದ್ಧೆ ಗಂಗಮ್ಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.