ಶಿರಹಟ್ಟಿ: ‘ಇಂದು ಭೂಮಿ ಸತ್ವವಿಲ್ಲದಂತಾಗಿದೆ. ಅದರ ಸ್ವಾಭಾವಿಕ ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗಿದ್ದು, ಅತಿಯಾದ ಲಾಭದ ಉದ್ದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಬಳಕೆಯಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಹೀಗಾಗಿ ಎಲ್ಲ ಸಮಸ್ಯೆಗಳಿಗೆ ಸಾವಯವ ಮತ್ತು ನೈಸರ್ಗಿಕ ಕೃಷಿಯೇ ಪರಿಹಾರ ಎಂದು ಸಾವಯವ ಕೃಷಿ ತಜ್ಞ ಬಸವರಾಜ ನಾವಿ ಹೇಳಿದರು.

ತಾಲ್ಲೂಕಿನ ರಣತೂರು ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಹಮ್ಮಿಕೊಳ್ಳಲಾದ ಭೂಮಿ ತಾಯಿ ರಕ್ಷಣಾ ಕಣ್ಗಾವಲು ಸಮಿತಿ ಸಭೆಯಲ್ಲಿ ನೈಸರ್ಗಿಕ ಹಾಗೂ ಸಾವಯವ ಕೃಷಿ ಪದ್ಧತಿ ಕುರಿತು ಮಾತನಾಡಿದರು.

‘ಸಸ್ಯಲೋಕದ ಜೀವ ತಂತುಗಳಿಗೆ ಆಸರೆಯಾಗಿರುವ ಮಣ್ಣು ಅತಿಯಾದ ರಾಸಾಯನಿಕ, ಕೀಟನಾಶಕಗಳ ಬಳಕೆಯಿಂದ ಸಾರ ಕಳೆದುಕೊಳ್ಳುತ್ತಿದೆ. ತಾಲ್ಲೂಕಿನ ಶೇ 90ಕ್ಕೂ ಹೆಚ್ಚಿನ ಭಾಗದ ಕೃಷಿ ಭೂಮಿಯು ಸಮಸ್ಯೆಯಲ್ಲಿದ್ದು, ಬೆರಳೆಣಿಕೆ ರೈತರು ಮಾತ್ರ ಮಣ್ಣಿನ ಫಲವತ್ತತೆಗೆ ಪೂರಕವಾದ ಸಾವಯವ ಕೃಷಿ ಮಾಡುತ್ತಿದ್ದಾರೆ. ಸಾವಯವ ಕೃಷಿ ಅಳವಡಿಸಿಕೊಂಡರೆ ಚಿನ್ನದಂತಹ ಬೆಳೆ ತೆಗೆಯಬಹುದಾಗಿದ್ದು, ನೈಸರ್ಗಿಕ ಕೃಷಿ ಪದ್ಧತಿಯಿಂದ ಮಲೆನಾಡ ಸೊಬಗನ್ನೂ ಮೀರಿಸಬಹುದು. ಶೂನ್ಯ ಬಂಡವಾಳದಲ್ಲಿ ಉತ್ತಮ ಇಳುವರಿ ತೆಗೆದು ಆರ್ಥಿಕವಾಗಿ ಅಭಿವೃದ್ಧಿ ಕಾಣಬಹುದು’ ಎಂದು ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡರು.

ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ‘ರೈತರು ಗೊಬ್ಬರವನ್ನು ಸಮತೋಲನ ರೀತಿಯಲ್ಲಿ ಬಳಸಬೇಕು. ಸಾವಯವ ಗೊಬ್ಬರಗಳು (ಹಸುವಿನ ಸಗಣಿ, ಕಾಂಪೋಸ್ಟ್, ಎರೆಹುಳು ಗೊಬ್ಬರ) ಮತ್ತು ರಾಸಾಯನಿಕ ಗೊಬ್ಬರಗಳನ್ನು ಸಮತೋಲನದಲ್ಲಿ ಬಳಸಿ ಮಣ್ಣಿನ ಫಲವತ್ತತೆ ಹೆಚ್ಚಿಸಿ ಆರೋಗ್ಯಯುತ ಬೆಳೆದು ಉತ್ತಮ ಇಳುವರಿ ಪಡೆದುಕೊಳ್ಳಬೇಕೆಂದು ಹೇಳಿದರು.

ಕೃಷಿ ಉಪ ನಿರ್ದೇಶಕಿ ಸ್ಫೂರ್ತಿ ಅವರು ಪ್ರಾತ್ಯಕ್ಷಿಕೆ ಮುಖಾಂತರ ಬೀಜೋಪಚಾರ ಮಾಡುವ ವಿಧಾನ ಮತ್ತು ಬೀಜೋಪಚಾರ ಮಾಡುವುದರಿಂದ ಹೆಸರು, ಕಡಲೆ, ತೊಗರಿ ಬೆಳೆಗಳಲ್ಲಿ ಬೇರು ಕೊಳೆಯುವ ರೋಗವನ್ನು ತಡೆಗಟ್ಟಬಹುದಾದ ವಿಷಯ ಕುರಿತು ಮಾತನಾಡಿದರು. ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರ ಭೂಮಿ ತಾಯಿ ರಕ್ಷಣೆ ಕಣ್ಣಾವಲು ಸಮಿತಿ ಸಭೆಯ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು.

ಕೃಷಿ ಅಧಿಕಾರಿ ಆರ್.ಸಿ.ಚಾಕಲಬ್ಬಿ, ಇಲಾಖೆಯ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮದ ಎಲ್ಲ ರೈತರು, ರೈತಮಹಿಳೆಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-23-1844562084

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.