ಶಿರಹಟ್ಟಿ: ಕೆಲವು ದಿನಗಳ ಹಿಂದೆ ತಾಲ್ಲೂಕಿನಲ್ಲಿ ಸುರಿದ ಆಲಿಕಲ್ಲು ಮಳೆಯಿಂದಾಗಿ ಮಾಗಡಿ, ಹೊಳಲಾಪುರ, ಕಡಕೋಳ, ಮಾಚೇನಹಳ್ಳಿ, ಪರಸಾಪುರ ಸೇರಿದಂತೆ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ರೈತರು ಬೆಳೆದ ಕಲ್ಲಂಗಡಿ ಹಾಗೂ ಪಪ್ಪಾಯಿ ಬೆಳೆ ಸಂಪೂರ್ಣ ಹಾಳಾಗಿದೆ.

ಕೆಲಸ ಅರಸಿ ನಗರಗಳತ್ತ ಮುಖ ಮಾಡುವ ಬದಲು ಮಣ್ಣನ್ನು ನಂಬಿ ಬಂಡವಾಳ ಹಾಕಿದರೆ ಭೂತಾಯಿ ಕೈಬಿಡುವುದಿಲ್ಲ ಎಂಬ ನಂಬಿಕೆಯಿಂದ ಯುವ ರೈತರು ಕಲ್ಲಂಗಡಿ ಹಾಗೂ ಪಪ್ಪಾಯಿ ಕೃಷಿಯತ್ತ ಮುಖ ಮಾಡಿದ್ದರು. ಇಸ್ರೇಲ್ ಮಾದರಿಯ ಕೃಷಿಯನ್ನೇ ಅನುಸರಿಸಿ ಪ್ರತಿ ಎಕರೆಗೆ ಸುಮಾರು ₹1.20 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದ್ದರು. ಸಸಿಯಿಂದ ಸಸಿಗೆ ಅಂತರ ಕಾಯ್ದುಕೊಂಡು ಅಚ್ಚುಕಟ್ಟಾಗಿ ಪಪ್ಪಾಯ ಹಾಗೂ ಕಲ್ಲಂಗಡಿ ಸಸಿ ನಾಟಿ ಮಾಡಿ, ಸಮಯಕ್ಕನುಗುಣವಾಗಿ ಗೊಬ್ಬರ ನೀಡುತ್ತಾ ಉತ್ತಮವಾಗಿ ನಿರ್ವಹಣೆ ಮಾಡಿದ್ದರು.

ಆದರೆ, ಅಕಾಲಿಕವಾಗಿ ಸುರಿದ ಆಲಿಕಲ್ಲು ಮಳೆಯಿಂದಾಗಿ ಕಟಾವಿಗೆ ಬಂದ ಸುಮಾರು 150 ಎಕರೆ ಕಲ್ಲಂಗಡಿ ಹಾಗೂ 30 ಎಕರೆ ಪಪ್ಪಾಯ ನಾಶವಾಗಿದೆ. ಕಲ್ಲಂಗಡಿ ಸಾಲುಗಳಲ್ಲಿ ಸಂಪೂರ್ಣ ನೀರು ತುಂಬಿದ್ದಲ್ಲದೆ, ಆಲಿಕಲ್ಲುಗಳ ಹೊಡೆತಕ್ಕೆ ಕಟಾವಿಗೆ ಬಂದ ಕಲ್ಲಂಗಡಿ ಹಣ್ಣುಗಳು ತೂತು ಬಿದ್ದು, ಕೊಳೆತು ಹೋಗಿವೆ. ಇನ್ನೂ ಪಪ್ಪಾಯ ಗಿಡಗಳು ರಭಸದ ಗಾಳಿಗೆ ಮುರಿದು ನೆಲಕ್ಕೆ ಬಿದ್ದು, ಹಣ್ಣುಗಳು ಒಡೆದು ಹೋಗಿವೆ. ಇದರಿಂದಾಗಿ ಕಟಾವು ಮಾಡಿ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಅಳಿದುಳಿದ ಹಣ್ಣುಗಳನ್ನು ಮಾರುಕಟ್ಟೆಗೆ ಸಾಗಿಸಿದರೆ ಕೊಳೆತು ಹೋಗುತ್ತಿದ್ದು, ಬೇಕಾಬಿಟ್ಟಿ ದರ ಕೇಳುತ್ತಿದ್ದಾರೆ. ಒಂದು ಟನ್ ಕಲ್ಲಂಗಡಿ ಹಣ್ಣಿಗೆ ಕೇವಲ ₹2000- ₹4000 ಕೇಳುತ್ತಿದ್ದಾರೆ. ಅಲ್ಲದೇ ಅದು ಸಹ 2 ಅಥವಾ 3 ತಿಂಗಳರ ನಂತರ ಹಣ ನೀಡುವುದಾಗಿ ಹೇಳುತ್ತಿದ್ದಾರೆ. ಎಕರೆಗೆ ಲಕ್ಷಾಂತರ ಹಣ ಖರ್ಚು ಮಾಡಿದ ರೈತರಿಗೆ ಹಾಕಿದ ಬಂಡವಾಳ ಸಹ ಕೈಗೆಟುಕದ ಪರಿಸ್ಥಿತಿ ನಿರ್ಮಾಣವಾಗಿದೆ. ಕಡಿಮೆ ದರದಲ್ಲಿ ಖರೀದಿ ಮಾಡಿದ್ದಲ್ಲದೆ ತಡವಾಗಿ ನೀಡುವ ಹಣದಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ.

ಆಲಿಕಲ್ಲಿನ ಮಳೆ ಸುರಿದು ಕಲ್ಲಂಗಡಿ, ಪಪ್ಪಾಯ, ಮಾವು ಸೇರಿದಂತೆ ತೋಟಗಾರಿಕೆ ಬೆಳೆ ಸಂಪೂರ್ಣ ಹಾಳಾದರೂ ಯಾರೊಬ್ಬ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ಈಗ ಕಲ್ಲಂಗಡಿ ಬೆಳೆಗಾರರು ನೀಡಿದ ಮನವಿಗೆ ಎಚ್ಚೆತ್ತು ಕಂದಾಯ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸದ್ಯ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ರೈತರು ಕಿಡಿಕಾರಿದ್ದಾರೆ.

ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದು, ಬೆಳೆ ಹಾಳಾಗಿರುವುದು ಮನಗಂಡಿದ್ದಾರೆ. ಸೂಕ್ತ ಪರಿಹಾರ ನೀಡುವ ಭರವಸೆ ಇದೆ
ಈರಣ್ಣ ಬಡ್ನಿ ಕಲ್ಲಂಗಡಿ ಬೆಳೆದ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.