ಶಿರಸಿ: ಮುಂಬೈನ ಹವ್ಯಕ ವೆಲ್ಫೇರ್ ಟ್ರಸ್ಟ್ ವತಿಯಿಂದ ನೀಡಲಾಗುವ 2024–25ನೇ ಸಾಲಿನ ಪ್ರತಿಷ್ಠಿತ ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿಯನ್ನು ಇಲ್ಲಿನ ಹಿರಿಯ ಕೃಷಿಕ ಕೆ.ಎಂ. ಹೆಗಡೆ ಭೈರುಂಬೆ ಅವರಿಗೆ ಪ್ರದಾನ ಮಾಡಲಾಯಿತು.

ಘಾಟ್ಕೋಪರ್ನ ಹವ್ಯಕ ಸಭಾಗೃಹದಲ್ಲಿ ನಡೆದ ಸಮಾರಂಭದಲ್ಲಿ ಪುರಸ್ಕೃತರು ಆನ್ಲೈನ್ ಮೂಲಕ ಭಾಗವಹಿಸಿದ್ದು, ಅವರ ಪರವಾಗಿ ಸಹೋದರರಾದ ಮಹಾದೇವ ಹೆಗಡೆ ಹಾಗೂ ನಾರಾಯಣ ಹೆಗಡೆ ಪ್ರಶಸ್ತಿ ಸ್ವೀಕರಿಸಿದರು. ವರ್ಚುವಲ್ ಮೂಲಕ ಮಾತನಾಡಿದ ಕೆ.ಎಂ. ಹೆಗಡೆ ಅವರು ಅಧ್ಯಾತ್ಮ ಹಾಗೂ ವಿಜ್ಞಾನದ ಸಮನ್ವಯದೊಂದಿಗೆ ಸಾಗಿದ ತಮ್ಮ ಬದುಕಿನ ಪಯಣವನ್ನು ಸ್ಮರಿಸಿದರು. ಉತ್ತರ ಕನ್ನಡದ ಸಂಪನ್ಮೂಲ ಹಾಗೂ ಪ್ರಕೃತಿಯೊಂದಿಗೆ ಸಮತೋಲಿತ ಅಭಿವೃದ್ಧಿಯ ಅಗತ್ಯವನ್ನು ಹೇಳಿದರು.

ಚಿಣ್ಣರ ಬಿಂಬದ ಸಂಚಾಲಕಿ ಗೀತಾ ರಘುರಾಮ ಹೆರಳ ಅವರು, ಇಂದಿನ ತಲೆಮಾರಿನ ಮಕ್ಕಳನ್ನು ಪ್ರಕೃತಿ ಹಾಗೂ ಸಾಮಾಜಿಕ ಸಂವಹನದಿಂದ ದೂರ ಮಾಡದಂತೆ ಪೋಷಕರಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ವಿಷ್ಣು ಭಾಗವತ ಅವರು, ಕೆ.ಎಂ. ಹೆಗಡೆಯವರ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಸೇವೆಯನ್ನು ಶ್ಲಾಘಿಸಿದರು. ಸಿ.ಎ. ವಸಂತ ಭಟ್ ಪುರಸ್ಕೃತರ ಪರಿಚಯ ಮಾಡಿದರು. ಶೋಭಾ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಗಣೇಶ ಭಟ್ ನಿಲ್ಕೋಡ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-20-1391914440

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.