ಶಿವಮೊಗ್ಗ: ‘2024ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ‘ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ’ ಅಡಿ ಮೆಕ್ಕೆಜೋಳಕ್ಕೆ ವಿಮೆ ಮಾಡಿಸಿ, ತಾಂತ್ರಿಕ ಕಾರಣಗಳಿಂದ ಪರಿಹಾರ ಲಭಿಸದ ರೈತರಿಗೆ ಆಕ್ಷೇಪಣೆ ಸಲ್ಲಿಸಲು ಕೃಷಿ ಇಲಾಖೆ ಅವಕಾಶ ನೀಡಿದೆ.

ಬೆಳೆ ಸಮೀಕ್ಷೆಯ ಫೋಟೋ ಮತ್ತು ವಿಮೆ ಮಾಡಿಸಿದ ಬೆಳೆಗಳ ನಡುವೆ ವ್ಯತ್ಯಾಸ ಕಂಡುಬಂದ ಕಾರಣ ಕೆಲವು ಅರ್ಜಿಗಳನ್ನು ವಿಮಾ ಸಂಸ್ಥೆಯು ತಿರಸ್ಕರಿಸಿದೆ. ಇಂತಹ ಅರ್ಜಿಗಳ ಪಟ್ಟಿ ಆಯಾ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ.

ಯಾವ ರೈತರಿಗೆ ಇನ್ನೂ ವಿಮೆ ಪರಿಹಾರ ಬಂದಿಲ್ಲವೋ ಅವರು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪಟ್ಟಿ ಪರಿಶೀಲಿಸಬೇಕು. ತಮ್ಮ ಹೆಸರು ತಿರಸ್ಕೃತ ಪಟ್ಟಿಯಲ್ಲಿದ್ದರೆ, 2024ರ ಮುಂಗಾರು ಹಂಗಾಮಿನ ಪಹಣಿ (ಇದರಲ್ಲಿ ವಿಮೆ ಮಾಡಿಸಿದ ಬೆಳೆ ನಮೂದಾಗಿರಬೇಕು), ಬೆಂಬಲ ಬೆಲೆ ಯೋಜನೆಯಲ್ಲಿ ಪ್ರಯೋಜನೆ ಪಡೆದಿರುವ ಬಗ್ಗೆ ರಸೀದಿ, ಪಶು ಆಹಾರ ಘಟಕಕ್ಕೆ ನೀಡಿದ ಬಗ್ಗೆ ಅಥವಾ ಎಪಿಎಂಸಿ ಮಾರುಕಟ್ಟೆಗೆ ಉತ್ಪನ್ನಗಳ ಮಾರಾಟ ಮಾಡಿದ ರಸೀದಿಗಳೊಂದಿಗೆ ಲಿಖಿತ ಮನವಿ ಸಲ್ಲಿಸಬಹುದು.

ಆಕ್ಷೇಪಣೆ ಸಲ್ಲಿಸಲು ಏ. 25 ಕೊನೆಯ ದಿನ. ಸಲ್ಲಿಕೆ ಆದ ಮನವಿಗಳ ಬಗ್ಗೆ ಆಯಾ ತಹಶೀಲ್ದಾರರ ಅಧ್ಯಕ್ಷತೆಯ ಸಮಿತಿಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಶಿವಮೊಗ್ಗ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-42-79571384

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.