ಹೊಳೆಹೊನ್ನೂರು: ‘ಗಾಳಿ– ಮಳೆಯಿಂದ ತೋಟಗಳನ್ನು ಕಳೆದುಕೊಂಡಿರುವ ಸಂತ್ರಸ್ತ ರೈತರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಕ್ಷಣ ಪರಿಹಾರ ನೀಡಬೇಕು’ ಎಂದು ಭದ್ರಾವತಿಯ ರ್ಯಾಮ್ಕೋಸ್ (ರೈತರ ಅಡಿಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ) ಅಧ್ಯಕ್ಷ ಎಚ್.ಎಲ್.ಷಡಾಕ್ಷರಿ ಹೇಳಿದರು.

ಏಪ್ರಿಲ್ 25ರಂದು ಬಿರುಗಾಳಿ ಸಹಿತ ಸುರಿದ ಆಲಿಕಲ್ಲು ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ರ್ಯಾಮ್ಕೋಸ್ ಸದಸ್ಯರ ತಂಡ ಭೇಟಿ ನೀಡಿದ ವೇಳೆ ಮಾತನಾಡಿದರು.

‘ಫಸಲಿಗೆ ಬಂದಿರುವ ಅಡಿಕೆ ತೋಟ ಕಳೆದುಕೊಂಡಿರುವ ರೈತರ ಬದುಕು ಮೂರಾಬಟ್ಟೆಯಾಗಿದೆ. ಈ ತೋಟವನ್ನೇ ನಂಬಿಕೊಂಡಿದ್ದ ರೈತರು ಮಕ್ಕಳ ಮದುವೆ, ವಿದ್ಯಾಭ್ಯಾಸ, ಮನೆ ನಿರ್ಮಾಣ ಸೇರಿ ಹಲವು ಕಾರಣಗಳಿಗೆ ಸಾಲ ಮಾಡಿಕೊಂಡಿದ್ದಾರೆ. ಬರುವ ವರ್ಷ ಉತ್ತಮ ಫಸಲಿನ ನಿರೀಕ್ಷೆಯಿಂದ ಖೇಣಿದಾರರಿಂದ ಮುಂಗಡವಾಗಿ ಲಕ್ಷಾಂತರ ರೂಪಾಯಿ ಸಾಲ ಪಡೆದಿದ್ದಾರೆ. ಹೀಗಿರುವಾಗ ಪ್ರಕೃತಿಯ ಈ ವಿಪತ್ತು ಎಲ್ಲ ಅಡಿಕೆ ಬೆಳೆಗಾರರ ನಿದ್ದೆಗೆಡಿಸಿದೆ. ಆದ್ದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಹೆಚ್ಚಿನ ಪ್ರಮಾಣದ ಪರಿಹಾರವನ್ನು ಆದಷ್ಟು ಬೇಗ ವಿತರಿಸಬೇಕು’ ಎಂದು ಒತ್ತಾಯಿಸಿದರು.

‘ಸಂಘವು ರೈತರೊಂದಿಗೆ ನಿರಂತರ ಒಡನಾಟ ಹೊಂದಿದೆ. ರೈತರ ಕಷ್ಟ– ಸುಖದಲ್ಲಿ ಜೊತೆಗೆ ನಿಲ್ಲುತ್ತದೆ. ಸಂಕಷ್ಟದ ಸಮಯದಲ್ಲಿ ನೊಂದ ರೈತರಿಗೆ ಸಾಂತ್ವನ ಹೇಳುವುದರ ಜೊತೆಗೆ ಅವರ ಬೆನ್ನಿಗೆ ನಿಲ್ಲಲಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ರೈತರು ಅಡಿಕೆಯನ್ನು ಸಹಕಾರ ಸಂಘದಲ್ಲಿಯೇ ಮಾರಾಟ ಮಾಡಬೇಕು’ ಎಂದು ಮನವಿ ಮಾಡಿದರು.

ರ್ಯಾಮ್ಕೋಸ್ ತಂಡವು ಅರಹತೊಳಲು, ಹನುಮಂತಾಪುರ, ಮೈದೊಳಲು, ಮಲ್ಲಿಗೇನಹಳ್ಳಿ, ಮಲ್ಲಾಪುರ ಗ್ರಾಮಗಳಲ್ಲಿ ಮಳೆಯಿಂದ ಹಾನಿಗೀಡಾದ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿತು.

ಸಂಘದ ಉಪಾಧ್ಯಕ್ಷ ನೂರ್ಬೇಗ್, ನಿರ್ದೇಶಕರಾದ ಎಚ್.ಎಸ್.ಮಂಜುನಾಥೇಶ್ವರ, ಎಸ್.ಎಂ.ಹಾಲೇಶಪ್ಪ, ಎ.ಎಂ.ಹರ್ಷ, ಎಂ.ಎಸ್.ಬಸವರಾಜಪ್ಪ, ಎಚ್.ಎಸ್.ಸಂಜೀವ್ ಕುಮಾರ್, ಆರ್.ಶ್ರೀನಿವಾಸ್, ಸಿ.ಹನುಮಂತು, ಟಿ.ಅಣ್ಣಪ್ಪ, ಸಿಇಒ ಎಂ.ವಿರೂಪಾಕ್ಷಪ್ಪ, ಜಗದೀಶ, ಚರಣ್, ಎಲ್.ಎಸ್. ರವಿಕುಮಾರ್, ಸಿ.ಪಿ.ಚಂದ್ರಶೇಖರ್, ಚಂದ್ರಪ್ಪ ಪುರಲೆ, ಮಂಜು, ಅಶೋಕ್, ಶಶಿ ಸೇರಿ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-42-1297333138

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.