ಹೂವಿನಹಡಗಲಿ: ಸಿಂಗಟಾಲೂರು ಏತ ನೀರಾವರಿ ಯೋಜನೆಯ ಎಲ್ಲ ಕಾಲುವೆಗಳ ಹೂಳು ತೆಗೆಯಿಸಿ, ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿದ ರೈತ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಕೆ.ಎಂ. ಗುರುಬಸವರಾಜ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ನೀರಾವರಿ ಯೋಜನೆ ಜಾರಿಯಾಗಿ 13 ವರ್ಷ ಕಳೆದರೂ ಕೊನೇ ಭಾಗದ ರೈತರಿಗೆ ಇನ್ನೂ ನೀರು ಸಿಗುತ್ತಿಲ್ಲ. ನೀರು ಹರಿಯದ ಕಾಲುವೆಗಳು ಹೂಳು ತುಂಬಿ ಮುಚ್ಚಿವೆ. ಮುಂಗಾರು ಆರಂಭಕ್ಕೂ ಮುನ್ನ ಎಲ್ಲ ಕಾಲುವೆಗಳ ಹೂಳು ತೆಗೆಯಿಸಿ ಸರಾಗವಾಗಿ ನೀರು ಹರಿಯುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಕೃಷಿ ಪಂಪ್ಸೆಟ್ ವಿದ್ಯುತ್ ಸಂಪರ್ಕಕ್ಕೆ ರೈತರು ₹1.50 ಲಕ್ಷ ಶುಲ್ಕ ತುಂಬಿ ಸಕ್ರಮಗೊಳಿಸಿಕೊಳ್ಳಲು ಸರ್ಕಾರ ಮೂರು ತಿಂಗಳ ಗಡುವು ನೀಡಿದ್ದು, ಬಡ ರೈತರು ದೊಡ್ಡ ಮೊತ್ತದ ಹಣ ಕಟ್ಟಲು ಸಾಧ್ಯವಿಲ್ಲ. ಸರ್ಕಾರವೇ ಈ ಹಣ ಪಾವತಿಸಿ ಸಕ್ರಮಗೊಳಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಅಧ್ಯಕ್ಷ ಎಚ್. ಸಿದ್ದಪ್ಪ, ಕಾರ್ಯದರ್ಶೀ ಎಂ. ಶಿವರಾಜ, ಪದಾಧಿಕಾರಿಗಳಾದ ವಿಠಲ ನಾಯ್ಕ, ಡಿ.ಗಿರೀಶ, ಬಿ.ಎಚ್.ಎಂ.ವಿಜಯಲಕ್ಷ್ಮಿ, ಕೆ.ಮಂಜುನಾಥ, ಗಣಿಸಾಬ್, ಗುರು ಬಸವರಾಜ, ಪಕ್ಕೀರಪ್ಪ, ಯಂಕಾನಾಯ್ಕ, ದೇವಪ್ಪ ಇಟಿಗಿ, ಮಡ್ಡಿ ನಿಂಗಪ್ಪ, ಭೋಜನಾಯ್ಕ ಸುರೇಶ ನಾಯ್ಕ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-25-2041583672

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.