ಸೋಮವಾರಪೇಟೆ: ಬಿಸಿಲಿನ ಹೆಚ್ಚಳ ಮತ್ತು ಮಳೆಯ ವಿಳಂಬದಿಂದಾಗಿ ಕಾಫಿ ಮತ್ತು ಕಾಳು ಮೆಣಸಿನ ಫಸಲಿಗೆ ತೀವ್ರ ಹಾನಿಯಾಗುತ್ತಿದೆ.

ಈ ಬಾರಿ ಕೆಲವೆಡೆ ಮಾತ್ರ ಮಳೆಯಾಗಿದೆ. ಹೆಚ್ಚಿನ ಪ್ರದೇಶಕ್ಕೆ ಅಲ್ಪ ಸ್ವಲ್ಪವಷ್ಟೇ ಮಳೆಯಾಗಿದೆ. ಇದರಿಂದ ಕಾಫಿ ಬೆಳೆಗೆ ‘ಬ್ಯಾಕಿಂಗ್’ ಕೊಡಲಾಗಲಿಲ್ಲ. ಅಲ್ಲದೆ, ತೀವ್ರ ಬಿಸಿಲಿನಿಂದಾಗಿ ಕಾಫಿ ತೋಟಗಳಲ್ಲಿ ಕಾಫಿ ಗಿಡಗಳು ಮತ್ತು ಫಸಲು ಹಾಗೂ ಕಾಳು ಮೆಣಸಿನ ಬಳ್ಳಿ ಒಣಗುತ್ತಿವೆ. ಹಳ್ಳ ಕೊಳ್ಳಗಳು ಒಣಗಿ, ಕೆರೆ ಕಟ್ಟೆಗಳಲ್ಲಿ ನೀರಿನ ಪ್ರಮಾಣ ತೀವ್ರವಾಗಿ ಕುಸಿದಿವೆ. ಕೊಳವೆ ಬಾವಿಗಳಲ್ಲಿ ನಿರೀಕ್ಷಿಸಿದ ಪ್ರಮಾಣದಲ್ಲಿ ನೀರು ದೊರೆಯದೆ, ಕಾಫಿ ತೋಟವನ್ನು ಉಳಿಸಿಕೊಳ್ಳಲು ರೈತರು ಅಕ್ಷರಶಃ ಪರದಾಡುತ್ತಿದ್ದಾರೆ.

ಹವಾಮಾನ ವೈಪ್ಯರೀತ್ಯ ಹಾಗೂ ಮಳೆ ಕೊರತೆಯಿಂದ ಈಗಾಗಲೇ ಕಾಳು ಮೆಣಸಿನ ಬಳ್ಳಿ ರೋಗ ಪೀಡಿತವಾಗಿದು. ಬಿಸಿಲು ಹೆಚ್ಚಾದಂತೆ ಬಳ್ಳಿಗಳು ಒಣಗಲು ಪ್ರಾರಂಭಿಸಿದೆ.

ಕಾಡಿನಲ್ಲಿ ಕುಡಿಯುವ ನೀರು ಮತ್ತು ಆಹಾರ ಸಿಗದ ಪರಿಣಾಮ ಕಾಡಾನೆ, ಕಾಡೆಮ್ಮೆ ಸೇರಿದಂತೆ ಸಾಕಷ್ಟು ಕಾಡುಪ್ರಾಣಿಗಳು ಊರಿನತ್ತ ಮುಖಮಾಡಿವೆ. ಇದರಿಂದ ಅಳಿದುಳಿದ ತೋಟವನ್ನು ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ರೈತರಿಗಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

ಗೋಣಿಮರೂರು, ಅಬ್ಬೂರುಕಟ್ಟೆ, ಬಾಣಾವಾರ, ಮಾಲಂಬಿ, ಗೌಡಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮೆಣಸಿನ ಬಳ್ಳಿಗಳು ಹೆಚ್ಚಿನ ಪ್ರಮಾಣದಲ್ಲಿ ಒಣಗಿವೆ. ನೀರಿನ ಸೌಲಭ್ಯ ಇದ್ದವರು ಮಾತ್ರ ಹಗಲ ರಾತ್ರಿ ನೀರನ್ನು ಹಾಯಿಸುವ ಮೂಲಕ ತೋಟವನ್ನು ಉಳಿಸಿಕೊಳ್ಳಲು ಸಫಲರಾಗಿದ್ದಾರೆ.

ಕಾಳು ಮೆಣಸಿಗೆ ಶೀಘ್ರ ಸೊರಗು ರೋಗ, ನಿಧಾನ ಸೊರಗು ರೋಗ, ಬೇರಿನ ಮಿಲಿಬಗ್ಸ್, ಬಳ್ಳಿಗೆ ತೇವಾಂಶದ ಕೊರತೆ, ಶಲ್ಯ ಕೀಟದ ಸಮಸ್ಯೆ ಹೀಗೆ ಅನೇಕ ರೋಗಗಳು ಕಾಳುಮೆಣಸಿಗೆ ವ್ಯಾಪಿಸಿವೆ. ಈಗ ರೋಗ ಹತೋಟಿ ಸಾಧ್ಯವಾಗದೆ ಸಂಕಷ್ಟದಲ್ಲಿದ್ದಾರೆ.

ಶನಿವಾರಸಂತೆ, ಕೊಡ್ಲಿಪೇಟೆ, ಶಾಂತಳ್ಳಿ, ಸೋಮವಾರಪೇಟೆ ಕಸಬ ಮತ್ತು ಸುಂಟಿಕೊಪ್ಪ ಹೋಬಳಿಗಳಲ್ಲಿ ಕೆರೆ, ಕೊಳವೆಬಾವಿ ಸೌಲಭ್ಯವಿಲ್ಲದೆ ಕಾಳುಮೆಣಸು ಕೃಷಿ ಮಾಡಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಣಗೂರು, ನೇರುಗಳಲೆ, ಆಲೂರು, ಬೇಳೂರು, ಐಗೂರು, ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಬಳ್ಳಿಗಳಲ್ಲಿ ಚಿಗುರು ಮೂಡುತ್ತಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-51-1944758843

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.