ಚಿತ್ರದಲ್ಲಿ ಯುವಕನಿಗೆ ಸಿನಿಮಾ ನಾಯಕನಾಗುವ ಕನಸು. ನಾಯಕಿ ಮಾಡೆಲ್. ಇಬ್ಬರು ಪ್ರೀತಿಸುತ್ತಿದ್ದು ಲಿವ್ ಇನ್ ರಿಲೇಷನ್ನಲ್ಲಿ ಇರುತ್ತಾರೆ. ಇದು ಒಂದು ಹಂತದಲ್ಲಿ ತಾರಕಕ್ಕೆ ಹೋದಾಗ ಇವನನ್ನು ಅಸಡ್ಡೆಯಿಂದ ಕಾಣುತ್ತಾಳೆ. ಅದೇ ಮನೆಗೆ ಮತ್ತೊಬ್ಬಳ ಪ್ರವೇಶವಾಗುತ್ತದೆ. ಆಕೆಯು ಈತನ ಪ್ರತಿಭೆ, ಬುದ್ಧಿವಂತಿಕೆ ಕಂಡು ಅವನ ಸಾಧನೆಗೆ ಸಲಹೆ, ಮಾರ್ಗದರ್ಶನ ನೀಡುತ್ತಾಳೆ. ಮುಂದೆ ತನ್ನ ತಪ್ಪಿನ ಅರಿವಾಗಿ ಹಳೆಯ ಪ್ರೇಯಸಿ ವಾಪಸ್ ಬರುತ್ತಾಳೆ. ಆತ ಹಳೇ ಕ್ಲೈಮ್ಯಾಕ್ಸ್ ಮರೆತಿದ್ದು, ಜೀವನದಲ್ಲಿ ಹೊಸ ಕ್ಲೈಮ್ಯಾಕ್ಸ್ನಿಂದ ನೆಮ್ಮದಿಯಾಗಿರುತ್ತಾನೆ ಎನ್ನುವುದೇ ಚಿತ್ರದ ತಿರುಳು.