ಸುರಪುರ: ರಾಜ್ಯ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಕರೆಗೆ ಬೆಂಬಲಿಸಿ ಸೋಮವಾರ ನಗರದ ರಸಗೊಬ್ಬರ ಹಾಗೂ ಕ್ರಿಮಿನಾಶಕ ಮಾರಾಟಗಾರರ ಸಂಘದವರು ರಸಗೊಬ್ಬರ, ಕ್ರಿಮಿನಾಶಕ ಹಾಗೂ ಬೀಜ ವಿತರಣೆ ಅಂಗಡಿಗಳನ್ನು ಒಂದು ದಿನ ಸಂಪೂರ್ಣ ಬಂದ್ ಮಾಡಿದರು.

ನಂತರ ಕೃಷಿ ಇಲಾಖೆ ಕಚೇರಿಗೆ ತೆರಳಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಾಮನಗೌಡ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ರಾಮರಡ್ಡಿ ಪಾಟೀಲ ಮಾತನಾಡಿ, ‘ಡಿಎಪಿ ಮತ್ತು ಯೂರಿಯಾ ಗೊಬ್ಬರಗಳ ಜೊತೆಗೆ ಬೇರೆ ಉತ್ಪನ್ನಗಳನ್ನು ಲಿಂಕ್ ಮಾಡುವುದನ್ನು ನಿಲ್ಲಿಸಬೇಕು. ಎಲ್ಲಾ ರಸಗೊಬ್ಬರಗಳ ಬೆಲೆಯ ಮೇಲೆ ಡೀಲರ್ಗಳಿಗೆ ಶೇ 8ರಷ್ಟು ಲಾಭಾಂಶ ಇರುವಂತೆ ಕ್ರಮ ಕೈಗೊಳ್ಳಬೇಕು. ರಸಗೊಬ್ಬರ, ಬಿತ್ತನೆ ಬೀಜ ಅಥವಾ ಕೀಟನಾಶಕಗಳ ಸ್ಯಾಂಪಲ್ ಕಳಪೆಯಾಗಿ ಬಂದಲ್ಲಿ, ಕೇವಲ ತಯಾರಿಕಾ ಕಂಪನಿಗಳ ಮೇಲೆ ಮಾತ್ರ ಮೊಕ್ಕದ್ದಮೆ ಹೂಡಬೇಕು’ ಎಂದು ಆಗ್ರಹಿಸಿದರು.

‘ಅಧಿಕಾರಿಗಳು ಅಂಗಡಿಗಳಿಗೆ ಭೇಟಿ ನೀಡಿದಾಗ ದಾಳಿ ಎಂಬ ಪದದ ಬದಲು ತಪಾಸಣೆ ಎಂದು ಬಳಸಬೇಕು ಮತ್ತು ಅಂಗಡಿಗಳ ಫೋಟೊ ಬಳಸಬಾರದು. ಡೀಲರ್ಳಿಂದ ಸ್ಯಾಂಪಲ್ ಪಡೆದಾಗ ಅದರ ಹಣವನ್ನು ಕಡ್ಡಾಯವಾಗಿ ಡೀಲರ್ಗಳಿಗೆ ಪಾವತಿಸಬೇಕು. ಭೂಮಿಯನ್ನು ಲೀಸ್ (ಬಾಡಿಗೆ) ಮೇಲೆ ಪಡೆದು ಕೃಷಿ ಮಾಡುವ ರೈತರಿಗೂ ಎಫ್ಐಡಿ ವ್ಯವಸ್ಥೆಯಡಿ ರಸಗೊಬ್ಬರ ಸುಲಭವಾಗಿ ಸಿಗುವಂತೆ ಸರ್ಕಾರದಿಂದ ಸ್ವಷ್ಟ ಮಾರ್ಗಸೂಚಿಗಳನ್ನು ಹೊರಡಿಸಬೇಕು’ ಎಂದು ಒತ್ತಾಯಿಸಿದರು.

‘ಹಿಂಗಾರು ಬೆಳೆಗಳವರೆಗೆ ಎಫ್ಐಡಿ ಮುಖಾಂತರ ಡಿಎಪಿ ಮತ್ತು ಯೂರಿಯಾ ಮಾರಾಟ ಮಾಡುವುದನ್ನು ಕಡ್ಡಾಗೊಳಿಸಬಾರದು. ಸಾಟ್ (ಎಸ್ಎಟಿಐ) ಪೋರ್ಟಲ್ (ಬೀಜ ಮಾರಾಟ ಆ್ಯಪ್) ಅನ್ನು ಮಾರಾಟದ ಸ್ವಯಂಇಚ್ಛೆಯಾಗಿ ಕೈ ಬಿಡಬೇಕು. ಈ ಎಲ್ಲಾ ಬೇಡಿಕೆಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು’ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಆದಿಶೇಷ ಪಾಟೀಲ, ಮಾರಾಟಗಾರರಾದ ಪವರ್ತರೆಡ್ಡ ಗೋನಾಲ, ಬಾಲಾಜಿ ಭಂಗ, ಕೊಟ್ರೇಶಪ್ಪ, ಬಸವರಾಜ ಅಮ್ಮಾಪುರ, ಅಶೋಕ ಕೊಳ್ಳಿ, ರಮೇಶ ಕುರಿ, ಯಲ್ಲಯ್ಯ, ಬೈಲಪ್ಪ ಗೌಡ, ಮಾಳಪ್ಪ ಕವಡಿಮಟ್ಡಿ, ಶ್ರಾವಣ ನಾಯಕ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-30-953365019

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.