ರಾಗಿ, ಹುರಳಿ, ಸಿರಿಧಾನ್ಯಗಳಿಂದ 30ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ವಿವಿಧ ಬಗೆಯ ಶಾವಿಗೆ, ರೊಟ್ಟಿ, ಪ್ರೋಟೀನ್ ಶೇಕ್, ಮಲ್ಟಿಗ್ರೇನ್ ಅಟ್ಟಾ, ರಾಗಿ ಮಾಲ್ಟ್–ಇವುಗಳಿಗೆ ಉತ್ತಮ ಮಾರುಕಟ್ಟೆ ಸಿಕ್ಕಿದೆ.

ಕೃಷಿ ಮೇಳಗಳು ಎಲ್ಲೇ ನಡೆದರೂ, ಈ ತಂಡ ಅಲ್ಲಿಗೆ ತೆರಳಿ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಆಹಾರಗಳನ್ನು ತಯಾರಿಸಿ ಜನರಿಗೆ ಪರಿಚಯಿಸುತ್ತದೆ. ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಎಣ್ಣೆಗಾಯಿ ಪಲ್ಯಗಳ ರುಚಿ ಈಗ ರಾಜ್ಯದ ಗಡಿಗಳನ್ನು ದಾಟಿದೆ.

ಈ ಒಗ್ಗಟ್ಟಿನ ಪ್ರಯತ್ನಕ್ಕೆ 2025ರಲ್ಲಿ ಅಂತರರಾಷ್ಟ್ರೀಯ ಮಾನ್ಯತೆ ದೊರಕಿತು. ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುಎನ್ಡಿಪಿ ನೀಡುವ ‘ಇಕ್ವೇಟರ್ ಇನಿಶಿಯೇಟಿವ್’ ಪ್ರಶಸ್ತಿಯನ್ನು ಈ ಸಂಘ ಮುಡಿಗೇರಿಸಿಕೊಂಡಿತು. 103 ದೇಶಗಳ ನಡುವೆ ಸ್ಪರ್ಧಿಸಿ ಈ ಪ್ರಶಸ್ತಿ ‘ತೀರ್ಥ’ ಗ್ರಾಮದ ಮಹಿಳೆಯರನ್ನು ಆರಿಸಿಕೊಂಡದ್ದು, ಅವರ ಪರಿಶ್ರಮಕ್ಕೆ ದೊರೆತ ಅತ್ಯಂತ ದೊಡ್ಡ ಗೌರವ.

‘ಈ ಮಹಿಳೆಯರ ಛಲ, ಧೈರ್ಯ, ಬದ್ಧತೆ ಕೇವಲ ಅವರ ಬದುಕನ್ನಷ್ಟೇ ಅಲ್ಲ, ಜತೆಗೆ ರೈತರ ಬದುಕು, ದೇಶದ ಹೆಸರನ್ನೂ ಬೆಳಗಿದೆ’ ಎಂದು ಸಹಜ ಸಮೃದ್ಧ ಸಂಘದ ಕಾರ್ಯದರ್ಶಿ ಆನಂದತೀರ್ಥ ಪ್ಯಾಟಿ ಹೆಮ್ಮೆಯಿಂದ ಹೇಳುತ್ತಾರೆ.

ಇಂದು ಧಾರವಾಡದಾಚೆಗೆ, ಬಳ್ಳಾರಿ, ಬೆಳಗಾವಿ, ಸಿಂಧನೂರು, ಗಂಗಾವತಿ, ವಿಜಯಪುರ, ಕಲಬುರಗಿ ಸೇರಿದಂತೆ ಹಲವೆಡೆಗಳಿಂದ ರೈತರು ಇಲ್ಲಿಗೆ ಬಂದು ಬೀಜಗಳನ್ನು ಪಡೆಯುತ್ತಿದ್ದಾರೆ. ವಿದೇಶಗಳಿಂದಲೂ ಸಂಶೋಧಕರು ಈ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಾರೆ.

ಈ ಸಂಘದಲ್ಲಿ ಹದಿನಾಲ್ಕು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಕೆಲವರು ಅಲ್ಪಸ್ವಲ್ಪ ಜಮೀನು ಹೊಂದಿದ್ದಾರೆ. ಕೆಲವರು ಟೇಲರಿಂಗ್ ಮಾಡುತ್ತಾರೆ. ಮನೆಯ ಕೆಲಸ ನಿರ್ವಹಿಸುತ್ತಲೇ ಸಂಘದ ಮೂಲಕ ಜೀವವೈವಿಧ್ಯ ಸಂರಕ್ಷಣೆಗೆ ಮುಂದಾಗಿದ್ದಾರೆ. ಧರ್ಮ, ಜಾತಿ, ವರ್ಗಗಳ ಗಡಿ ಮೀರಿ ಒಗ್ಗಟ್ಟಿನ ಶಕ್ತಿಯನ್ನು ತೋರಿಸಿದ್ದಾರೆ. ಬಹುತೇಕರು ಅನಕ್ಷರಸ್ಥರಾಗಿದ್ದರೂ, ಅವರ ಕಾರ್ಯದಕ್ಷತೆ ಮತ್ತು ಬದ್ಧತೆ ಅಸಾಧಾರಣ.

‘ಇನ್ನೂ ಹೆಚ್ಚು ಓದಿದ ಮಹಿಳೆಯರು ನಮ್ಮ ಜೊತೆ ಸೇರಿದರೆ, ನಮ್ಮ ಕೆಲಸ ಇನ್ನಷ್ಟು ವಿಸ್ತರಿಸಬಹುದು’ ಎಂದು ಬೀಬಿ ಜಾನ್ ಆಶಿಸುತ್ತಾರೆ.

ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಬೀಜ ಬ್ಯಾಂಕ್ಗಳನ್ನು ಸ್ಥಾಪಿಸುವ ಕನಸು ಇವರದ್ದು. ಈ ದಿಸೆಯಲ್ಲಿ ರಾಜ್ಯ ಸರ್ಕಾರವೂ ಗಮನ ಹರಿಸಿರುವುದು, ಈ ಪ್ರಯತ್ನದ ಮಹತ್ವವನ್ನು ಮತ್ತೊಮ್ಮೆ ದೃಢಪಡಿಸುತ್ತದೆ.

‘ತೀರ್ಥ’ ಗ್ರಾಮದ ಈ ಕಥೆ, ಕೇವಲ ಒಂದು ಹಳ್ಳಿಯ ಕಥೆಯಲ್ಲ. ಇದು ಸಂಕಷ್ಟವನ್ನು ಅವಕಾಶವನ್ನಾಗಿ ಪರಿವರ್ತಿಸಿದ ಮಹಿಳೆಯರ ಕಥೆ. ಒಗ್ಗಟ್ಟಿನ ಬಲ, ಧೈರ್ಯ ಮತ್ತು ನಂಬಿಕೆ ಇದ್ದರೆ, ಯಾವುದೇ ಅಡಚಣೆಗಳನ್ನು ಮೀರಿ ಸಾಧನೆ ಸಾಧ್ಯ ಎಂಬುದಕ್ಕೆ ಇದು ಜೀವಂತ ಸಾಕ್ಷಿ. ಮಣ್ಣಿನ ಮಡಿಲಿನಲ್ಲಿ ಮೊಳೆತ ಈ ಸಣ್ಣ ಬೀಜ, ಇಂದು ವಿಶ್ವ ವೇದಿಕೆಯಲ್ಲಿ ಅರಳಿದೆ. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-51-1097175213

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.