ಚೇಳೂರು (ಗುಬ್ಬಿ): ದೇಶದಲ್ಲಿಯೇ ಅತಿ ದೊಡ್ಡ ಹಲಸಿನ ಮಾರುಕಟ್ಟೆಯಾದ ಚೇಳೂರು ಹಲಸಿನ ಮಾರುಕಟ್ಟೆಗೆ ದೇಶದ ಹಲವೆಡೆಯಿಂದ ವ್ಯಾಪಾರಸ್ಥರು ಬರುತ್ತಾರೆ. ಆದರೆ ಹಲಸಿನ ಹಣ್ಣುಗಳನ್ನು ಮರದಿಂದ ಕೊಯ್ಯುವಾಗ ವ್ಯವಸ್ಥಿತ ವಿಧಾನ ಅನುಸರಿಸದೆ ಕಾರಣ ಕೊಳೆತು ಹೋದ ಹಣ್ಣುಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ.

ಅನೇಕ ರೈತರಿಗೆ ಹಲಸು ಕೊಯ್ಲು ಮಾಡುವ ಬಗ್ಗೆ ಇಂದಿಗೂ ಸರಿಯಾದ ಅರಿವು ಇಲ್ಲದಿರುವುದರಿಂದ ರೈತರು ತರುವ ಸಾಕಷ್ಟು ಹಲಸಿನ ಕಾಯಿ ಮತ್ತು ಹಣ್ಣುಗಳು ಕೊಳೆತು ಹೋಗುತ್ತಿವೆ. ವ್ಯಾಪಾರಸ್ಥರು ಹೆಚ್ಚು ಪೆಟ್ಟಾಗಿರುವ ಹಾಗೂ ಕೊಳೆಯುವ ಹಂತದಲ್ಲಿರುವ ಹಣ್ಣನ್ನು ತೆಗೆದುಕೊಂಡು ಹೋಗದೆ ಸ್ಥಳದಲ್ಲಿಯೇ ಬಿಟ್ಟು ಹೋಗುತ್ತಾರೆ. ರೈತರು ಅವುಗಳನ್ನು ಮತ್ತೆ ವಾಪಸ್ ತೆಗೆದುಕೊಂಡು ಹೋಗಲು ಸಾಧ್ಯವಾಗದೆ ಮಾರುಕಟ್ಟೆಯಲ್ಲಿಯೇ ಬಿಟ್ಟು ಹೋಗುವ ಪರಿಸ್ಥಿತಿ ಇದೆ.

ರೈತರು ಹಲಸಿನ ಹಣ್ಣುಗಳಿಂದ ಕಡಿಮೆ ಬಂಡವಾಳದಲ್ಲಿ ಉತ್ತಮ ಆದಾಯ ಪಡೆಯಲು ಸಾಧ್ಯವಿದೆ. ಆದರೆ ಸರಿಯಾದ ಅರಿವು ಇಲ್ಲದೆ ತುಂಬಾ ಎತ್ತರದ ಮರಗಳಿಂದ ಬಲಿತಿರುವ ಕಾಯಿಗಳನ್ನು ದೋಟಿಗಳಿಂದ ಇಲ್ಲವೇ ಮರವನ್ನು ಹತ್ತಿ ಕುಡುಗೋಲಿನಿಂದ ಕತ್ತರಿಸುತ್ತಾರೆ. ಎತ್ತರದಿಂದ ಕಾಯಿಗಳು ಕೆಳಗೆ ಬೀಳುವುದರಿಂದ ಹಣ್ಣಾದಾಗ ಕೊಳೆತು ಹೋಗುತ್ತಿವೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕುವಂತಾಗುತ್ತಿದೆ.

ಮರ ಎಷ್ಟೇ ದೊಡ್ಡದಿರಲಿ ರೈತರು ಹಣ್ಣುಗಳನ್ನು ಹುಷಾರಾಗಿ ಕೆಳಗೆ ಇಳಿಸುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ಇಬ್ಬರಿಗೂ ಅನುಕೂಲ. ಹಣ್ಣು ಕೊಳೆತು ಹೋದಲ್ಲಿ ಯಾರಿಗೂ ಪ್ರಯೋಜನವಾಗುವುದಿಲ್ಲ. ರೈತರು ಜಾಗೃತಿಗೊಳ್ಳಬೇಕಿದೆ ಎನ್ನುತ್ತಾರೆ ಹಲಸಿನ ವ್ಯಾಪಾರಿ ಮಂಜುನಾಥ್.

‘ತುಂಬಾ ಎತ್ತರದ ಮರಗಳಿಂದ ಬಲಿತಿರುವ ಕಾಯಿಗಳನ್ನು ಹೇಗೆ ಮರದಿಂದ ಇಳಿಸಬೇಕು ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಕಾಯಿಗಳನ್ನು ವ್ಯವಸ್ಥಿತವಾಗಿ ಇಳಿಸುವ ಬಗ್ಗೆ ಮಾಹಿತಿ ಹಾಗೂ ಅರಿವು ಮೂಡಿಸಿದಲ್ಲಿ ಅದೇ ರೀತಿಯಲ್ಲಿ ಕೊಯ್ಲು ಮಾಡಿ ಮಾರುಕಟ್ಟೆಗೆ ತಂದು ಮಾರಾಟ ಮಾಡುವೆವು. ಅಧಿಕಾರಿಗಳು ಇದರ ಬಗ್ಗೆ ಮಾಹಿತಿ ನೀಡಿದರೆ ಅನುಕೂಲ’ ಎನ್ನುತ್ತಾರೆ ರೈತ ನಾಗಣ್ಣ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-17-2019472614

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.