ವಡಗೇರಾ: ಇಂದಿನ ಆಧುನಿಕ ಯುಗದ ಜೀವನ ಶೈಲಿಗೆ ರೈತರು ಸಹ ಮಾರು ಹೋಗುತ್ತಿದ್ದು, ಆರ್ಥಿಕ ಬೆಳೆಗಳತ್ತ ಹೆಚ್ಚಿನ ಒಲುವು ತೋರುತ್ತಿದ್ದಾರೆ. ಹೀಗಾಗಿ ಹಳೆಯ ಕಾಲದ ಬಹು ಪದ್ಧತಿ ಬೆಳೆಗಳ ಕೃಷಿ ಮಾಯವಾಗುತ್ತಿದೆ.

ಈ ಹಿಂದೆ ತೀವ್ರವಾದ ಆಹಾರ ಸಮಸ್ಯೆ ಇರುತ್ತಿತ್ತು. ಹೀಗಾಗಿ ರೈತರು ತಮ್ಮ ಆಹಾರಕ್ಕೆ ಬೇಕಾದ ತರಕಾರಿ, ಆಹಾರ ಪದಾರ್ಥಗಳನ್ನು ತಾವೇ ಬೆಳೆದುಕೊಳ್ಳುತ್ತಿದ್ದರು. ಪ್ರಮುಖವಾಗಿ ತೊಗರಿ ಜಮೀನಿನ ಬೆಳೆಯ ನಡುವೆ ಬೆಂಡೆಕಾಯಿ, ಚವಳಿಕಾಯಿ, ಅಲಸಂದಿ ಹಾಗೂ ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದರು. ಜೋಳದ ಬೆಳೆಯಲ್ಲಿ ಬಿಳಿ ಕುಸುಬಿ, ಪುಂಡೆಪಲ್ಯ, ಅಲಸಂದಿ, ಅವರೆಕಾಯಿಗಳನ್ನು ಬೆಳೆಯುತ್ತಿದ್ದರು.

ಹೀಗೆ ಬೆಳೆದ ಆಹಾರ ಪದಾರ್ಥಗಳು ರಾಸಾಯನಿಕ ಮುಕ್ತವಾಗಿರುತ್ತಿದ್ದವು, ಹೀಗಾಗಿ ಇವುಗಳ ಸೇವನೆಯಿಂದ ರೈತರು ದೈಹಿಕವಾಗಿ ಬಲಿಷ್ಠರಾಗಿರುತ್ತಿದ್ದರು.

ಕಳೆದ 15 ರಿಂದ 20 ವರ್ಷಗಳಲ್ಲಿ ಸಾಕಷ್ಟು ಆರ್ಥಿಕವಾಗಿ ಬೆಳವಣಿಗೆಗಳಾಗಿ ಆಹಾರ ಸಮಸ್ಯೆ ಕಡಿಮೆಯಾಗಿದೆ. ಅಲ್ಲದೆ ಜೀವನ ಶೈಲಿಯಲ್ಲಿ ತೀವ್ರಕರವಾದ ಬದಲಾವಣೆಯಾಗಿವೆ. ಹೀಗಾಗಿ ರೈತರು ಸಹಜವಾಗಿ ಆರ್ಥಿಕ ಬೆಳೆಗಳತ್ತ ಒಲವು ಹೊಂದಿದ್ದಾರೆ.

ಈ ಮೊದಲು ಮುಂಗಾರ ಬೆಳೆಗಳಾಗಿ ಜೋಳ, ತೊಗರಿ, ಹೆಸರು, ಕಡ್ಲಿ ಶೇಂಗಾ, ಸೂರ್ಯಪಾನ, ಕುಸುಬಿ, ನವಣಿ ಹಾಗೂ ಇನ್ನಿತರ ಬೆಳೆಗಳನ್ನು ರೈತರು ತಮ್ಮ ಜಮೀನುಗಳಲ್ಲಿ ಬೆಳೆಯುತಿದ್ದರು. ಆದರೆ ಪ್ರಸ್ತುತ ಆರ್ಥಿಕ ಬೆಳೆಗಳಾದ ಭತ್ತ ಮತ್ತು ಹತ್ತಿಯನ್ನು ವ್ಯಾಪಕವಾಗಿ ಬೆಳೆಯುತ್ತಿದ್ದಾರೆ.

ಏಕೆಂದರೆ ಈ ಎರಡು ಬೆಳೆಗಳ ನಿರ್ವಹಣೆ ಮಾಡುವ ವೆಚ್ಚ ಕಡಿಮೆ ಹಾಗೂ ಇಳುವರಿ ಹೆಚ್ಚು ಇದರ ಜತೆಗೆ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ಗೆ ಸಾವಿರಾರು ರೂಪಾಯಿಗಳ ಬೆಲೆ ಇದೆ. ಹೀಗಾಗಿ ಆರ್ಥಿಕವಾಗಿ ಸದೃಢರಾಗುವ ಉದ್ದೇಶದಿಂದ ಬಹು ಪದ್ಧತಿ ಬೆಳೆ ಪದ್ದತಿಗೆ ರೈತರು ತಿಲಾಂಜಲಿ ಇಟ್ಟಿದ್ದಾರೆ.

ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ರೈತರ ಜಮೀನುಗಳಲ್ಲಿ ಏಕ ಪದ್ಧತಿ ಬೆಳೆಗಳ ಸಾಮ್ರಾಜ್ಯವೇ ಇರುತ್ತದೆ ಬಹು ಪದ್ಧತಿ ಬೆಳೆಗಳು ಕಣ್ಣಿಗೆ ಗೋಚರಿಸುವುದು ಅಗೋಚರ ಎಂಬುವದು ಸಾರ್ವಜನಿಕರ ಅನಿಸಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.