ಯಾದಗಿರಿ: ತೋಟಗಾರಿಕೆ ಇಲಾಖೆಯ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿಯಲ್ಲಿ ಸಹಾಯಧನ ಪಡೆದು ಉತ್ತಮವಾಗಿ ಮಾವು ಬೆಳೆದ ತಾಲ್ಲೂಕಿನ ಮುಂಡರಗಿ ಗ್ರಾಮದ ರೈತ ದುರ್ಗಣ್ಣ ಹಪ್ಪಳ ಅವರ ತೋಟಕ್ಕೆ ಇಲಾಖೆಯ ಅಧಿಕಾರಿಗಳ ತಂಡ ಈಚೆಗೆ ಭೇಟಿ ನೀಡಿದರು.

ತೋಟಗಾರಿಕೆ ಇಲಾಖೆಯ ಜಿಲ್ಲಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ದತ್ತಾತ್ರೇಯ ಪಾಟೀಲ, ವಿಸ್ತೀರ್ಣ ಘಟಕದ ಮುಖ್ಯಸ್ಥೆ ಶಶಿಕಲಾ, ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಜಯಪ್ರಕಾಶ ನಾರಾಯಣ ಅವರು ಭೇಟಿ ನೀಡಿದರು. ಬೆಳೆಯ ಬಗ್ಗೆ ತಾಂತ್ರಿಕ ಮಾಹಿತಿ ಹಾಗೂ ನೈಸರ್ಗಿಕವಾಗಿ ಮಾವಿನ ಹಣ್ಣು ಮಾಗಿಸುವ ವಿಧಾನಗಳ ಬಗ್ಗೆ ಮಾಹಿತಿಯೂ ನೀಡಿದರು.

ದುರ್ಗಣ್ಣ ಅವರು ತಮ್ಮ 3.11 ಎಕರೆ ಜಮೀನಿನಲ್ಲಿ ಬೆನಿಶಾನ್, ಕೇಸರ್, ಮಲ್ಲಿಕಾ, ಹಿಮಾಯತ್, ಖಾದರ್, ತೋತಾಪುರಿ ಹಾಗೂ ರಸಪುರಿ ತಳಿಯ ಮಾವುಗಳನ್ನು ಬೆಳೆದಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಮಾರಾಟ ಮಾಡದೆ ನೈಸರ್ಗಿಕವಾಗಿ ಮಾಗಿಸಿ ತಾವೇ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-30-1567528681

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.