ಮಳೆ ಆತಂಕ ಬೇಡ
‘ಎರಡು ವಾರಗಳಿಂದ ಬಿರುಗಾಳಿ ಸಹಿತ ಮಳೆ ಆಗಿದ್ದು, ಆಲಿಕಲ್ಲು ಮಲೆ ಬಿದ್ದಿದೆ. ಆದರೆ, ಮಾವಿನ ಕಾಯಿಗಳು ಈಗಾಗಲೇ ದೊಡ್ಡದಾಗಿದ್ದು, ಬೆಳೆ ಗಟ್ಟಿಯಾಗಿದೆ. ಮಳೆಯಿಂದ ಹೆಚ್ಚಿನ ಬೆಳೆಗೆ ಹಾನಿಯಾಗಿಲ್ಲ. ಏಪ್ರಿಲ್ ಎರಡನೇ ವಾರ ದಶೇರಾ, ಕೊನೆಯ ವಾರ ಕೇಸರ್, ಮೇನಲ್ಲಿ ಮಲ್ಲಿಕಾ ಕಟಾವಿಗೆ ಬರಲಿದೆ. ಹಾಗಾಗಿ, ಬೆಳೆಗಾರರು ಆತಂಕ ಪಡಬೇಕಿಲ್ಲ’ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಜಿ.ಎಸ್.ರಾಜು ಹೇಳಿದರು.