ಸೋಲಾಪುರ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಧ್ಯ ರೈಲ್ವೆಯ ಸೊಲಾಪುರ ವಿಭಾಗವು ‘ಹವಾಮಾನ ಬದಲಾವಣೆ’ ಎಂಬ ವಿಷಯದಡಿ ಮೇ 15ರಿಂದ ಜೂನ್ 5ರವರೆಗೆ ಸಮಗ್ರ ಅಭಿಯಾನವನ್ನು ಆರಂಭಿಸಿದೆ.

ರೈಲ್ವೆ ಸಿಬ್ಬಂದಿ, ಪ್ರಯಾಣಿಕರು ಹಾಗೂ ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆ, ಹವಾಮಾನ ಜಾಗೃತಿ ಮತ್ತು ಪರಿಸರ ಸ್ನೇಹಿ ಅಭ್ಯಾಸಗಳ ಕುರಿತು ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಈ ವಿಭಾಗಮಟ್ಟದ ಅಭಿಯಾನದಲ್ಲಿ ಜಾಗೃತಿ ಕಾರ್ಯಕ್ರಮಗಳು, ರ್ಯಾಲಿಗಳು, ಸ್ವಚ್ಛತಾ ಅಭಿಯಾನಗಳು, ವೃಕ್ಷಾರೋಪಣಾ ಕಾರ್ಯಕ್ರಮಗಳು, ಸಮ್ಮೇಳನಗಳು ಹಾಗೂ ಸಮುದಾಯ ಪಾಲ್ಗೊಳ್ಳುವಿಕೆ ಕಾರ್ಯಕ್ರಮಗಳನ್ನು ಸೊಲಾಪುರ ವಿಭಾಗದ ಪ್ರಮುಖ ನಿಲ್ದಾಣಗಳು ಮತ್ತು ರೈಲ್ವೆ ಕಾಲೊನಿಗಳಲ್ಲಿ ಆಯೋಜಿಸಲಾಗಿದೆ. ಸೊಲಾಪುರ, ಕಲಬುರಗಿ, ವಾಡಿ, ಶಹಾಬಾದ್, ಪಂಡರಪುರ, ಕುರ್ಡುವಾಡಿ, ಲಾತೂರ್ ಸೇರಿದಂತೆ ವಿಭಾಗದ ವಿವಿಧ ನಿಲ್ದಾಣಗಳಲ್ಲಿ ಈ ಕಾರ್ಯಕ್ರಮಗಳು ನಡೆಯುತ್ತಿದ್ದು, ವಿವಿಧ ಇಲಾಖೆಗಳ ಸಿಬ್ಬಂದಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.

ಪರಿಸರ ಮತ್ತು ಹೌಸ್ಕೀಪಿಂಗ್ ನಿರ್ವಹಣಾ ತಂಡ ಹಾಗೂ ಸೊಲಾಪುರ ವಿಭಾಗದ ಸಿವಿಲ್ ಡಿಫೆನ್ಸ್ ತಂಡದ ವತಿಯಿಂದ ಡಿಆರ್ಎಂ ಕಚೇರಿಯಿಂದ ಸೊಲಾಪುರ ರೈಲ್ವೆ ನಿಲ್ದಾಣದವರೆಗೆ ವಾಕ್ಥಾನ್ ನಡೆಸಲಾಯಿತು. ಸೊಲಾಪುರ ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಂಶುಮಾಲಿ ಕುಮಾರ ಪರಿಸರ ಪ್ರತಿಜ್ಞೆ ಬೋಧಿಸಿ, ವಾಕ್ಥಾನ್ಗೆ ಚಾಲನೆ ನೀಡಿದರು.

ಈ ಅಭಿಯಾನದ ಅಂಗವಾಗಿ ಏಕಬಳಕೆ ಪ್ಲಾಸ್ಟಿಕ್ ವಿರೋಧಿ ಜಾಗೃತಿ, ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯನ್ನು ಉತ್ತೇಜಿಸುವ ಬೀದಿ ನಾಟಕ ಪ್ರದರ್ಶನ, ತ್ಯಾಜ್ಯ ವಿಂಗಡಣೆ ಹಾಗೂ ನಿಲ್ದಾಣ ಸ್ವಚ್ಛತಾ ವಿಶೇಷ ಅಭಿಯಾನಗಳು, ಪರಿಸರ ಸ್ನೇಹಿ ಮತ್ತು ಪ್ಲಾಸ್ಟಿಕ್ ರಹಿತ ಪರ್ಯಾಯಗಳ ಪ್ರಚಾರ ರ್ಯಾಲಿಗಳು, ಪ್ಲಾಸ್ಟಿಕ್ ಮಾಲಿನ್ಯ ಕುರಿತು ಸಾರ್ವಜನಿಕ ಜಾಗೃತಿ ಘೋಷಣೆಗಳು, ನೀರು ತುಂಬುವ ಕೇಂದ್ರಗಳು ಹಾಗೂ ಜಲಾಶಯಗಳ ಪರಿಶೀಲನೆ ಮತ್ತು ಸಂರಕ್ಷಣಾ ಕಾರ್ಯಕ್ರಮಗಳು, ಇ– ತ್ಯಾಜ್ಯ ಸಂಗ್ರಹ ಅಭಿಯಾನಗಳು ಮತ್ತು ಇಂಧನ ಸಂರಕ್ಷಣಾ ಚಟುವಟಿಕೆಗಳು, ಸಿಬ್ಬಂದಿ ಮತ್ತು ಮಕ್ಕಳಿಗಾಗಿ ರಸಪ್ರಶ್ನೆ ಹಾಗೂ ಚಿತ್ರಕಲೆ ಸ್ಪರ್ಧೆಗಳು, ಪ್ಲಾಸ್ಟಿಕ್ ಚೀಲಗಳ ಬದಲಿಗೆ ಹತ್ತಿ ಮತ್ತು ಜೂಟ್ ಚೀಲಗಳ ಬಳಕೆಗೆ ಪ್ರೋತ್ಸಾಹ ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಜೂನ್ 5ರ ವಿಶ್ವ ಪರಿಸರ ದಿನಾಚರಣೆಯಂದು ಸಮಾರೋಪಗೊಳ್ಳಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-26-1697494114

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.