ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಲಪಾಡ್ ಜಾಮೀನು ಅರ್ಜಿ ವಿಚಾರಣೆ

ಸಿಕ್ಕೀತೇ ಜಾಮೀನು?
Last Updated 29 ಮೇ 2018, 6:58 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ವತ್  ಮೇಲೆ ಹಲ್ಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಲಪಾಡ್ ಹ್ಯಾರಿಸ್‌ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯು ಇಂದು ಸೆಷನ್ಸ್‌ ಕೋರ್ಟ್‌ನಲ್ಲಿ ನಡೆಯುತ್ತಿದೆ.

ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ್ದ ಸೆಷನ್ಸ್‌ ಕೋರ್ಟ್ ಅರ್ಜಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದ್ದು. ಇಂದು ಮತ್ತೆ ವಿಚಾರಣೆ ಆರಂಭವಾಗಿದೆ. ಈಗ ಸೆಷನ್ಸ್ ಕೋರ್ಟ್‌‌ನಲ್ಲಿ ನಲಪಾಡ್ ಹ್ಯಾರಿಸ್ ಪರ ವಕೀಲ ಉಸ್ಮಾನ್  ಹಾಗೂ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿರುವ ವಿದ್ವತ್ ಪರ ವಕೀಲ ಶ್ಯಾಮ್ ಸುಂದರ್  ವಾದ – ಪ್ರತಿವಾದ ಮಂಡಿಸುತ್ತಿದ್ದಾರೆ.

ಪ್ರಕರಣ ಸಂಬಂಧ ತನಿಖೆ ನಡೆಸಿರುವ ಸಿಸಿಬಿ ಪೊಲೀಸರು ಈಗಾಗಲೇ ಚಾರ್ಜ್‌ಶೀಟ್ ದಾಖಲಿಸಿದ್ದಾರೆ. ಈ ಮೊದಲು ಸಾಕ್ಷ್ಯ ನಾಶದ ಕಾರಣ ಮುಂದಿಟ್ಟುಕೊಂಡು ಜಾಮೀನು ನೀಡಿರಲಿಲ್ಲ. ಈಗ ತನಿಖೆ ಮುಗಿದಿರುವುದರಿಂದ ಜಾಮೀನು ನೀಡಬೇಕು ಎಂದು ಉಸ್ಮಾನ್ ವಾದಿಸುತ್ತಿದ್ದಾರೆ.

ಸಾಕ್ಷಿಗಳ ಮೇಲೆ ನಲಪಾಡ್ ಹ್ಯಾರಿಸ್ ಒತ್ತಡ ಹೇರುವ ಸಾಧ್ಯತೆ ಇದೆ‌. ಜಾಮೀನು ನೀಡಬಾರದು ಎಂದು ಶ್ಯಾಮ್ ಸುಂದರ್ ವಾದಿಸುತ್ತಿದ್ದಾರೆ.

ನಲಪಾಡ್ ಪ್ರಕರಣದ ವಿವರ

ದಿನಾಂಕ ವಿವರ
ಫೆ.17 ರಾತ್ರಿ 10.30ಕ್ಕೆ ಬೆಂಗಳೂರಿನ ಯುಬಿ ಸಿಟಿಯ ಕೆಫೆಯಲ್ಲಿ ನಲಪಾಡ್ ಮತ್ತು ಸಹಚರರಿಂದ ವಿದ್ವತ್ ಮೇಲೆ ಹಲ್ಲೆ
ಫೆ.18 ಪೊಲೀಸರಿಂದ 6 ಮಂದಿಯ ಬಂಧನ. ನಲಪಾಡ್ ಬಂಧನಕ್ಕೆ ಹುಡುಕಾಟ
ಫೆ.19 ನಲಪಾಡ್ ಶರಣಾಗತಿ, ನ್ಯಾಯಾಂಗ ಬಂಧನ
ಫೆ.21 ಜಾಮೀನಿಗೆ ಅರ್ಜಿ ಸಲ್ಲಿಸಿದ ನಲಪಾಡ್. ನ್ಯಾಯಾಲಯದಿಂದ ಜಾಮೀನು ನಿರಾಕರಣೆ
ಮಾರ್ಚ್ 14 ಜಾಮೀನಿಗಾಗಿ ಹೈಕೋರ್ಟ್‌ ಮೊರೆ ಹೋದ ನಲಪಾಡ್. ಹೈಕೋರ್ಟ್‌ನಿಂದಲೂ ಜಾಮೀನು ನಿರಾಕರಣೆ
ಮಾರ್ಚ್ 17 ಅಭಿಷೇಕ್ ಸೇರಿ 7 ಆರೋಪಿಗಳಿಗೆ ಹೈಕೋರ್ಟ್ ಜಾಮೀನು
ಮೇ 29 ಸೆಷನ್ಸ್‌ ಕೋರ್ಟ್‌ನಲ್ಲಿ ನಲಪಾಡ್ ಜಾಮೀನು ಅರ್ಜಿ ವಿಚಾರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT