ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ಕಸ ಕೊಟ್ಟರೆ, ಗೊಬ್ಬರ ಕೊಡ್ತಾರೆ

Last Updated 14 ಜನವರಿ 2019, 19:30 IST
ಅಕ್ಷರ ಗಾತ್ರ

‘ಇಲ್ಲಿ ಸೃಷ್ಟಿಯಾದ ಕಸ, ಇಲ್ಲೇ ಗೊಬ್ಬರವಾಗಬೇಕು. ಗಿಡಗಳಿಗೆ ಬಳಸಬೇಕು. ಈ ಬಡಾವಣೆಯಲ್ಲಿ ತ್ಯಾಜ್ಯ ಎನ್ನುವುದು ಶೂನ್ಯವಾಗಬೇಕು..’ – ಇದು ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್ ಸಿಟಿಜನ್ ಫೋರಂನ ಧ್ಯೇಯ. ಈ ಉದ್ದೇಶದೊಂದಿಗೆ ಆರಂಭವಾಗಿರುವ ‘ಕಸ ವಿಲೇವಾರಿ ಅಭಿಯಾನ’ ಈಗ ಗೊಬ್ಬರ ತಯಾರಿಕೆ ಮತ್ತು ತರಬೇತಿ ಕೇಂದ್ರ ಆರಂಭಿಸುವ ಹಂತ ತಲುಪಿದೆ. ಮಾತ್ರವಲ್ಲ, ಅದೇ ಗೊಬ್ಬರ ಬಳಸಿ ಸಾವಯವ ತರಕಾ

‘ಇಲ್ಲಿ ಸೃಷ್ಟಿಯಾದ ಕಸ, ಇಲ್ಲೇ ಗೊಬ್ಬರವಾಗಬೇಕು. ಗಿಡಗಳಿಗೆ ಬಳಸಬೇಕು. ಈ ಬಡಾವಣೆಯಲ್ಲಿ ತ್ಯಾಜ್ಯ ಎನ್ನುವುದು ಶೂನ್ಯವಾಗಬೇಕು..’ – ಇದು ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್ ಸಿಟಿಜನ್ ಫೋರಂನ ಧ್ಯೇಯ. ಈ ಉದ್ದೇಶದೊಂದಿಗೆ ಆರಂಭವಾಗಿರುವ ‘ಕಸ ವಿಲೇವಾರಿ ಅಭಿಯಾನ’ ಈಗ ಗೊಬ್ಬರ ತಯಾರಿಕೆ ಮತ್ತು ತರಬೇತಿ ಕೇಂದ್ರ ಆರಂಭಿಸುವ ಹಂತ ತಲುಪಿದೆ. ಮಾತ್ರವಲ್ಲ, ಅದೇ ಗೊಬ್ಬರ ಬಳಸಿ ಸಾವಯವ ತರಕಾರಿಗಳನ್ನು ಉತ್ಪಾದಿಸುವತ್ತ ಫೋರಂ ಸದಸ್ಯರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಈಗ ಈ ಸಮುದಾಯದವರ ಚಿತ್ತ ಬಡಾವಣೆಯಲ್ಲಿ ತಾಜ್ಯವನ್ನು ಶೂನ್ಯವಾಗಿಸುವುತ್ತ.

ಬೆಂಗಳೂರಿನ ಕಸದ ಸಮಸ್ಯೆ ಜಾಗತಿಕಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾಗ, ಈ ಬಡಾವಣೆಯ ನಾಗರಿಕರು ಸಿಟಿಜನ್ ಫೋರಂ ಮಾಡಿಕೊಂಡು, ತ್ಯಾಜ್ಯ ವಿಲೇವಾರಿಗೆ ಪರಿಹಾರ ಹುಡುಕುತ್ತಿದ್ದರು. ಆಗ ರೂಪುಗೊಂಡಿದ್ದೇ ಸಮುದಾಯದ ಸಹಭಾಗಿತ್ವದ ಗೊಬ್ಬರ ತಯಾರಿಕಾ ಘಟಕಗಳು. ಅಂದು ಆರಂಭವಾದ ಕಸದಿಂದ ಗೊಬ್ಬರ ತಯಾರಿಸುವ ಪ್ರಕ್ರಿಯೆ, ಈಗ ಬಡಾವಣೆಯಲ್ಲಿರುವ ಒಂದೂವರೆ ಎಕರೆಯ ಉದ್ಯಾನವನ್ನು ಗೊಬ್ಬರ ತಯಾರಿಕೆ ಪ್ರಾತ್ಯಕ್ಷಿಕೆ ಕೇಂದ್ರವಾಗಿ ರೂಪಾಂತರಗೊಳಿಸುವ ಹಂತಕ್ಕೆ ತಲುಪಿದೆ. ಅಲ್ಲೀಗ 20ಕ್ಕೂ ಹೆಚ್ಚು ಗೊಬ್ಬರ ತಯಾರಿಕಾ ಘಟಕಗಳಿವೆ. ಇಲ್ಲಿ ಆಸಕ್ತರಿಗೆ ಗೊಬ್ಬರ ತಯಾರಿಕೆಯ ತರಬೇತಿ ಕೇಂದ್ರವಾಗಿ ಪರಿವರ್ತಿಸಿ ಅದಕ್ಕೆ ‘ಸ್ವಚ್ಛ ಗೃಹ ಕಲಿಕಾ ಕೇಂದ್ರ’ ಎಂದು ಹೆಸರಿಡಲಾಗಿದೆ.

ಈ ಘಟಕಗಳಲ್ಲಿ ಅಡುಗೆ ಮನೆಯಲ್ಲಿ ಬಳಸಿ ಉಳಿಯುವ ತರಕಾರಿ, ಹಣ್ಣುಗಳ ಸಿಪ್ಪೆ, ಅನ್ನ ಪದಾರ್ಥ, ಚಿಕನ್‌, ಮೀನು, ಮಾಂಸದ ಮೂಳೆಗಳು, ಕೊಳೆತ ಹಣ್ಣುಗಳು, ಬಾಳೆಎಲೆ, ದೊನ್ನೆಯಂತಹ ಹಸಿಕಸ ಹಾಗೂ ದಿನಪತ್ರಿಕೆ, ರಟ್ಟಿನ ಡಬ್ಬಿಗಳು, ಟೆಟ್ರಾಪ್ಯಾಕ್‌, ಪೇಪರ್ ಬಟ್ಟಲು, ತಗಡಿನ ಕ್ಯಾನ್‌, ತೆಂಗಿನ ಚಿಪ್ಪು, ತೋಟ ಹಾಗೂ ಮನೆ ಉದ್ಯಾನದಲ್ಲಿ ಬಿದ್ದ ಎಲೆಗಳು, ಕೊಂಬೆಗಳು, ಹೂವು ಸೇರಿದಂತೆ ಒಣ ಕಸವನ್ನು ಕೇಂದ್ರದಲ್ಲಿ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತಿದೆ.

ಕಸ ಕೊಡಿ, ಗೊಬ್ಬರ ತಗೊಳ್ಳಿ

ಬಡಾವಣೆಯಲ್ಲಿರುವ ಯಾವುದೇ ನಾಗರಿಕರು, ತಮ್ಮ ಮನೆಯ ಹಸಿ ಅಥವಾ ಹಣ ಕಸವನ್ನು ಈ ಸ್ವಚ್ಛ ಗೃಹ ಕಲಿಕಾ ಕೇಂದ್ರಕ್ಕೆ ಕೊಟ್ಟರೆ, ಅದನ್ನು ಕರಗಿಸಿ, ಸಾವಯವ ಗೊಬ್ಬರವಾಗಿ ಪರಿವರ್ತಿಸಿಕೊಡುತ್ತಾರೆ. ಆ ಗೊಬ್ಬರವನ್ನು ಅವರು ಕೈತೋಟಕ್ಕೆ ಬಳಸಬಹುದು. ಕಸ ಕೊಡುವವರು ಆಸಕ್ತಿ ತೋರಿದರೆ, ಅವರಿಗೆ ಮನೆಯಲ್ಲೇ ಹೇಗೆ ಗೊಬ್ಬರ ತಯಾರಿಸಿಕೊಳ್ಳಬಹುದು ಎಂಬುದರ ಬಗ್ಗೆ ತರಬೇತಿ ನೀಡಲಾಗುತ್ತದೆ. ಅದಕ್ಕೆ ಬೇಕಾದ ಉಪಕರಣಗಳನ್ನು ಪೂರೈಸಲು ಸಿಟಿಜನ್‌ ಫೋರಂ ನೆರವಾಗುತ್ತದೆ.

‘ಕೇಂದ್ರದಲ್ಲಿ ಸಮುದಾಯಗಳು ಸೇರಿ ಗೊಬ್ಬರ ತಯಾರಿಸಿಕೊಳ್ಳುವುದು ಹೇಗೆ ? ತರಗೆಲೆಗಳನ್ನು ಬಳಸಿ ಕಾಂಪೋಸ್ಟ್‌ ಆಗಿಸುವ ಕ್ರಮ, ಕಿಚನ್ ಗಾರ್ಡನ್‌ ನಿರ್ಮಾಣ, ಜೈವಿಕ ಅನಿಲ ಉತ್ಪಾದನಾ ವಿಧಾನ, ಝೀರೋವೇಸ್ಟ್ ಹೋಮ್ ಹಾಗೂ ತ್ಯಾಜ್ಯ ವಸ್ತುಗಳ ಪುನರ್‌ ಬಳಕೆ ಬಗ್ಗೆಯೂ ಕಲಿಕೆಗೆ ಅವಕಾಶವಿದೆ’ ಎನ್ನುತ್ತಾರೆ ಸಿಟಿಜನ್‌ ಫೋರಂನ ಚಿತ್ರಾ ಪ್ರಣೀತ್.

‘ಹನಿ ಹನಿ ಗೂಡಿದರೆ ಹಳ್ಳ’ ಎಂಬಂತೆ ಜನರ ಸಹಭಾಗಿತ್ವ ಇದ್ದರೆ ಎಂತಹ ಜಟಿಲ ಕೆಲಸವಾದರೂ ಸೂಸೂತ್ರವಾಗಿ ನಡೆಯುತ್ತದೆ. ಇದೇ ರೀತಿ ಈ ಬಡಾವಣೆಯಲ್ಲಿ ಉತ್ಪತ್ತಿಯಾಗುವ ಶೇ 90ರಷ್ಟು ಕಸವನ್ನು ಇಲ್ಲಿ ಜೈವಿಕ ಗೊಬ್ಬರವನ್ನಾಗಿ ಪರಿವರ್ತಿಸಬಹುದಾಗಿದೆ. ಇದಕ್ಕಾಗಿಯೇ ಬಯೋಗ್ಯಾಸ್ ಯೂನಿಟ್ ಕೂಡ ಸ್ಥಾಪಿಸಲಾಗಿದೆ. ‘ಈ ಪ್ರಕ್ರಿಯೆಯೂ ತ್ಯಾಜ್ಯ ವಿಲೇವಾರಿಗೆ ಸಹಕಾರಿಯಾಗಿದೆ’ ಎನ್ನುತ್ತಾರೆ ಫೋರಂನ ಡಾ. ಶಾಂತಿ.

ರಿಗಳನ್ನು ಉತ್ಪಾದಿಸುವತ್ತ ಫೋರಂ ಸದಸ್ಯರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಈಗ ಈ ಸಮುದಾಯದವರ ಚಿತ್ತ ಬಡಾವಣೆಯಲ್ಲಿ ತಾಜ್ಯವನ್ನು ಶೂನ್ಯವಾಗಿಸುವುತ್ತ.

ಬೆಂಗಳೂರಿನ ಕಸದ ಸಮಸ್ಯೆ ಜಾಗತಿಕಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾಗ, ಈ ಬಡಾವಣೆಯ ನಾಗರಿಕರು ಸಿಟಿಜನ್ ಫೋರಂ ಮಾಡಿಕೊಂಡು, ತ್ಯಾಜ್ಯ ವಿಲೇವಾರಿಗೆ ಪರಿಹಾರ ಹುಡುಕುತ್ತಿದ್ದರು. ಆಗ ರೂಪುಗೊಂಡಿದ್ದೇ ಸಮುದಾಯದ ಸಹಭಾಗಿತ್ವದ ಗೊಬ್ಬರ ತಯಾರಿಕಾ ಘಟಕಗಳು. ಅಂದು ಆರಂಭವಾದ ಕಸದಿಂದ ಗೊಬ್ಬರ ತಯಾರಿಸುವ ಪ್ರಕ್ರಿಯೆ, ಈಗ ಬಡಾವಣೆಯಲ್ಲಿರುವ ಒಂದೂವರೆ ಎಕರೆಯ ಉದ್ಯಾನವನ್ನು ಗೊಬ್ಬರ ತಯಾರಿಕೆ ಪ್ರಾತ್ಯಕ್ಷಿಕೆ ಕೇಂದ್ರವಾಗಿ ರೂಪಾಂತರಗೊಳಿಸುವ ಹಂತಕ್ಕೆ ತಲುಪಿದೆ. ಅಲ್ಲೀಗ 20ಕ್ಕೂ ಹೆಚ್ಚು ಗೊಬ್ಬರ ತಯಾರಿಕಾ ಘಟಕಗಳಿವೆ. ಇಲ್ಲಿ ಆಸಕ್ತರಿಗೆ ಗೊಬ್ಬರ ತಯಾರಿಕೆಯ ತರಬೇತಿ ಕೇಂದ್ರವಾಗಿ ಪರಿವರ್ತಿಸಿ ಅದಕ್ಕೆ ‘ಸ್ವಚ್ಛ ಗೃಹ ಕಲಿಕಾ ಕೇಂದ್ರ’ ಎಂದು ಹೆಸರಿಡಲಾಗಿದೆ.

ಈ ಘಟಕಗಳಲ್ಲಿ ಅಡುಗೆ ಮನೆಯಲ್ಲಿ ಬಳಸಿ ಉಳಿಯುವ ತರಕಾರಿ, ಹಣ್ಣುಗಳ ಸಿಪ್ಪೆ, ಅನ್ನ ಪದಾರ್ಥ, ಚಿಕನ್‌, ಮೀನು, ಮಾಂಸದ ಮೂಳೆಗಳು, ಕೊಳೆತ ಹಣ್ಣುಗಳು, ಬಾಳೆಎಲೆ, ದೊನ್ನೆಯಂತಹ ಹಸಿಕಸ ಹಾಗೂ ದಿನಪತ್ರಿಕೆ, ರಟ್ಟಿನ ಡಬ್ಬಿಗಳು, ಟೆಟ್ರಾಪ್ಯಾಕ್‌, ಪೇಪರ್ ಬಟ್ಟಲು, ತಗಡಿನ ಕ್ಯಾನ್‌, ತೆಂಗಿನ ಚಿಪ್ಪು, ತೋಟ ಹಾಗೂ ಮನೆ ಉದ್ಯಾನದಲ್ಲಿ ಬಿದ್ದ ಎಲೆಗಳು, ಕೊಂಬೆಗಳು, ಹೂವು ಸೇರಿದಂತೆ ಒಣ ಕಸವನ್ನು ಕೇಂದ್ರದಲ್ಲಿ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತಿದೆ.

ಗೊಬ್ಬರದಿಂದ ಕೈತೋಟದವರೆಗೆ

ಗೊಬ್ಬರ ತಯಾರಿಕಾ ಘಟಕಗಳಿರುವ ಒಂದೂವರೆ ಎಕರೆಯ ಉದ್ಯಾನದ ಒಂದು ಭಾಗದಲ್ಲಿ ಕೈತೋಟ ಮಾಡಲು ವ್ಯವಸ್ಥೆ ಮಾಡಿದ್ದಾರೆ. ಕೈತೋಟ ಮಾಡಲು ಆಸಕ್ತಿ ತೋರುವವರಿಗೆ, ಗೊಬ್ಬರ, ಬೀಜ, ನೀರಿನ ವ್ಯವಸ್ಥೆಯನ್ನೂ ಫೋರಂನವರು ಮಾಡಿಕೊಡುತ್ತಿದ್ದಾರೆ. ಸೊ‍‍ಪ್ಪು, ಬದನೆ, ಬೆಂಡೆಕಾಯಿ, ಟೊಮಟೊ, ಬೀನ್ಸ್‌, ಆಲೂಗಡ್ಡೆ, ಮೂಲಂಗಿ, ಕ್ಯಾರೆಟ್, ಸೋರೆಕಾಯಿ, ಕುಂಬಳ, ಎಲೆಕೋಸು, ಹೂಕೋಸು, ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿಯಂತಹ ತರಕಾರಿಗಳನ್ನು ಇಲ್ಲಿ ಬೆಳೆಯಬಹುದು. ಇದನ್ನು ಸ್ವಂತಕ್ಕೆ ಬಳಸಿಕೊಳ್ಳಬಹುದು. ಕೈತೋಟ, ತಾರಸಿ ತೋಟ ಮಾಡುವವರಿಗೆ ತರಬೇತಿ ನೀಡುವ ವ್ಯವಸ್ಥೆಯೂ ಕೇಂದ್ರದಲ್ಲಿದೆ.

ಗೊಬ್ಬರ ಮಾರಾಟಕ್ಕೆ ಚಿಂತನೆ

ಸಮುದಾಯದ ಸಹಭಾಗಿತ್ವದಲ್ಲಿ ತಯಾರಾಗುತ್ತಿರುವ ಸಾವಯವ ಗೊಬ್ಬರವನ್ನು ಮುಂದಿನ ದಿನಗಳಲ್ಲಿ ಕೃಷಿಕರಿಗೆ ನೇರವಾಗಿ ಮಾರಾಟ ಮಾಡುವ ಯೋಜನೆಯನ್ನು ಫೋರಂನವರು ರೂಪಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಗೊಬ್ಬರ ಉತ್ಪಾದನೆಯಾಗುತ್ತಿದೆ. ಕಸವನ್ನು ರಸವನ್ನಾಗಿಸಲು ಅನೇಕರು ಮುಂದೆ ಬಂದಿದ್ದಾರೆ. ಹೀಗಾಗಿ ಗೊಬ್ಬರ ಉತ್ಪಾದನೆ ಕ್ರಮೇಣ ಹೆಚ್ಚಾಗುತ್ತದೆ. ಅದನ್ನು ಕೃಷಿಕರಿಗೆ ಮಾರಾಟ ಮಾಡಬಹುದು ಎಂಬ ಚಿಂತನೆಯೂ ನಡೆಯುತ್ತಿದೆ.

‘ಬಿಬಿಎಂಪಿ ಅನುದಾನದಲ್ಲಿ ಈ ಉದ್ಯಾನವನ್ನು ಗೊಬ್ಬರ ತಯಾರಿಕೆ, ತರಕಾರಿ ಬೆಳೆಯುವ ಜಾಗವಾಗಿ ಪರಿವರ್ತಿಸಲಾಗಿದೆ. ಅಲ್ಲದೆ, ವಾಯುವಿಹಾರ ನಡೆಸಲು ಸುಂದರ ಪರಿಸರವನ್ನೂ ನಿರ್ಮಿಸಲಾಗಿದೆ. ದೇಶದ ಗಮನ ಸೆಳೆಯುವಂತಹ ಕಾರ್ಯ ಇದಾಗಿದೆ’ ಎಂದು ಈ ಕ್ಷೇತ್ರದ ಶಾಸಕ ಎಂ.ಸತೀಶ್ ರೆಡ್ಡಿ ಅಭಿಪ್ರಾಯಪಡುತ್ತಾರೆ.

ಸಮುದಾಯದ ಇಚ್ಛಾಶಕ್ತಿ ಮುಖ್ಯ

‘ಬಡಾವಣೆಯಲ್ಲಿ ತ್ಯಾಜ್ಯ ನಿರ್ವಹಣೆಗೆ ಇಂಥ ಸರಳ ವಿಧಾನಗಳನ್ನು ಅನುಸರಿಸಿದರೆ ಯಾವ ನಗರ, ಪಟ್ಟಣಗಳಲ್ಲೂ ಕಸ ಎನ್ನುವುದು ದೊಡ್ಡ ಸಮಸ್ಯೆಯೇ ಆಗುವುದಿಲ್ಲ. ಇದಕ್ಕೆ ಜವಾಬ್ದಾರಿ ಮತ್ತು ಸಮುದಾಯದ ಇಚ್ಛಾಶಕ್ತಿ ಅವಶ್ಯ’ ಎಂಬುದು ಸ್ಥಳೀಯರಾದ ಭವ್ಯ ಮತ್ತು ಲೋಕೇಶ್ ಅಭಿಪ್ರಾಯ‍. ‘ಬೆಂಗಳೂರು ನಗರದ ಪ್ರತಿ ಬಡಾವಣೆಯಲ್ಲೂ ಕಸ ನಿರ್ವಹಣೆಗೆ ಇಂತಹದೊಂದು ಕಾರ್ಯ ಆಗಬೇಕಿದೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ’ ಎನುತ್ತಾರೆ ವಾರ್ಡ್‌ ಸದಸ್ಯ ಗುರುಮೂರ್ತಿರೆಡ್ಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT