ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮೇಳ: ಆ್ಯಪ್‌ನಲ್ಲಿ ಮಾಹಿತಿ ಕೊರತೆ

Last Updated 16 ನವೆಂಬರ್ 2018, 19:01 IST
ಅಕ್ಷರ ಗಾತ್ರ

ಬೆಂಗಳೂರು: ಕೃಷಿ ಮೇಳಕ್ಕೆ ಸಂಬಂಧಿಸಿದಂತೆ ಬಿಡುಗಡೆಮಾಡಲಾದ ಮೊಬೈಲ್‌ ಆ್ಯಪ್‌ನಲ್ಲಿ ನಿರೀಕ್ಷಿತ ಮಾಹಿತಿ ಇಲ್ಲ ಎಂದು, ಅಲ್ಲಿಗೆ ಭೇಟಿ ನೀಡಿದ್ದ ಜನರು ಬೇಸರ ವ್ಯಕ್ತಪಡಿಸಿದರು.

ವಿ.ವಿ.ಯ ಮುಖ್ಯದ್ವಾರದಿಂದ ಮೇಳ ಆಯೋಜನೆಗೊಂಡಿರುವ ಸ್ಥಳಕ್ಕೆ ಮೂರರಿಂದ ನಾಲ್ಕು ಕಿ.ಮೀ ದೂರವಿದೆ. ಶಟಲ್‌ ಸರ್ವಿಸ್‌ ಬಸ್‌ಗಳು ಯಾವಾಗ ಮುಖ್ಯ ದ್ವಾರಕ್ಕೆ ಬರುತ್ತವೆ ಎಂಬ ಲೈವ್‌ ಅಪ್‌ಡೇಟ್‌ ಮಾಹಿತಿ ಕಾಣುತ್ತಿಲ್ಲ ಎಂದು ಶಾಲಾ ಶಿಕ್ಷಕಿ ಶಾಂತಾ ಹೆಬ್ಬಾರ್‌ ತಿಳಿಸಿದರು.

ಮೇಳದಲ್ಲಿ ಯಾವ ಸ್ಥಳದಲ್ಲಿ ಯಾವ ಮಳಿಗೆಗಳು ಇವೆ ಎಂಬ ಮಾಹಿತಿ ಆ್ಯಪ್‌ನಲ್ಲಿಲ್ಲ. ಪ್ರಮುಖ ಆಕರ್ಷಣೆಗಳು ಎಂಬ ಪಟ್ಟಿಯನ್ನು ಮಾತ್ರ ಆ್ಯಪ್‌ನಲ್ಲಿ ನೀಡಲಾಗಿದ್ದು, ವಿಷಯಾಧಾರಿತ ಮಾಹಿತಿ ಪಡೆಯಲು ಎಲ್ಲಿಗೆ ಹೋಗಬೇಕು ಎಂಬುದೇ ತಿಳಿಯುತ್ತಿಲ್ಲ ಎಂದರು.

ಮೇಳ ಪ್ರಾರಂಭವಾಗಿ ಎರಡು ದಿನ ಕಳೆದರೂ ಪ್ರದರ್ಶನದ ಮಾಹಿತಿ ಇನ್ನೂ ಅಪ್‌ಡೇಟ್‌ ಆಗುತ್ತೆ ಎಂದೇ ತೋರಿಸುತ್ತಿದೆ ಎಂದು ಶಿಡ್ಲಘಟ್ಟದ ರವಿ ಮೊಬೈಲ್‌ ತೋರಿಸಿ ನಕ್ಕರು.

‘ನಾನು ಮೀನುಗಾರಿಕೆ ಮತ್ತು ಜೇನು ಕೃಷಿ ಕುರಿತು ಮಾಹಿತಿ ಪಡೆಯಲು ಮೇಳಕ್ಕೆ ಬಂದಿದ್ದೇನೆ. ಅದಕ್ಕೆ ಸಂಬಂಧಿಸಿದ ಸ್ಟಾಲ್‌ ಹುಡುಕಲು 2 ಗಂಟೆ ಸಮಯವಾಯ್ತು. ಈ ಕುರಿತು ಆ್ಯಪ್‌ನಲ್ಲಿಯೇ ಮಾಹಿತಿ ಇದ್ದರೆ ನೇರವಾಗಿ ಇಲ್ಲಿಗೇ ಬರಬಹುದಿತ್ತು’ ಎಂದರು ವಿಜಯಪುರದ ಭರತ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT