ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮೇಳ ಕುರಿತು ಜನರ ಅನಿಸಿಕೆ: ಯಾರು ಏನೆಂದರು?

Last Updated 16 ನವೆಂಬರ್ 2018, 19:49 IST
ಅಕ್ಷರ ಗಾತ್ರ

ಬೆಂಗಳೂರು: ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಕೆಲವರು ತಮ್ಮ ಅನಿಸಿಕೆಯನ್ನು ಪ್ರಜಾವಾಣಿ ಜತೆ ಹಂಚಿಕೊಂಡಿದ್ದಾರೆ.

ತುಂಬಾ ವೈವಿಧ್ಯಮಯ ಸ್ಟಾಲ್‍ಗಳನ್ನು ನೋಡಿದ್ದೇವೆ. ಹೊರಗಿನ ಜನರೂ ಬಂದಿರುವುದರಿಂದ ಅವರ ಪ್ರಯೋಗಗಳನ್ನೂ ಗಮನಿಸಲು ಈ ಮೇಳ ಅವಕಾಶ ಕೊಟ್ಟಿದೆ. ಬೇರೆ ವಿಭಾಗಗಳವರ ಚಟುವಟಿಕೆಗಳನ್ನೂ ನೋಡಲು ಅವಕಾಶ ಸಿಕ್ಕಿದೆ. ಮೇಳ ಖುಷಿಕೊಟ್ಟಿದೆ.
- ಬಿ.ಪ್ರಿಯಾಂಕಾ, ಎಂಎಸ್ಸಿ ವಿದ್ಯಾರ್ಥಿನಿ

**
ಈ ಮೇಳದಿಂದ ನಮಗೆ ಪ್ರಾಯೋಗಿಕ ಅನುಭವ ಸಿಕ್ಕಿದೆ. ರೈತರ ಜತೆ ನೇರವಾಗಿ ಚರ್ಚಿಸುತ್ತೇವೆ. ಕೃಷಿ ಎಂಜಿನಿಯರಿಂಗ್‍ನಲ್ಲಿ ಬಂದಿರುವ ಹೊಸ ತಂತ್ರಜ್ಞಾನಗಳು, ಹೊಸ ಪ್ರಯೋಗಗಳನ್ನು ನೋಡಲು ನಮಗೆ ಅವಕಾಶ ಸಿಕ್ಕಿದೆ.
- ನಿತ್ಯಶ್ರೀ, ಎಂಎಸ್ಸಿ ವಿದ್ಯಾರ್ಥಿನಿ

**
ಸೂರ್ಯಕಾಂತಿ ಸೇರಿದಂತೆ ಹಲವು ಎಣ್ಣೆಕಾಳು ಬೀಜಗಳ ತಳಿ ವೈವಿಧ್ಯವನ್ನು ಗಮನಿಸಿದ್ದೇವೆ. ಮೇಳ ಆಯೋಜನೆ ಅಚ್ಚುಕಟ್ಟಾಗಿದೆ, ಖುಷಿಕೊಟ್ಟಿದೆ.
- ಮಂಜು, ದೇಸಿ ತಂಡ ಬೆಂಗಳೂರು

**
ನಮ್ಮ ವಿಭಾಗದ ಸ್ಟಾಲ್‍ಗಳಲ್ಲಿ ಪ್ರತಿ ಬೆಳೆ ವೈವಿಧ್ಯದ ಬಗ್ಗೆ ಗಮನಿಸಿದ್ದೇನೆ. ರೈತರನ್ನೂ ಮಾತನಾಡಿಸಿದ್ದೇನೆ. ಒಂದಿಷ್ಟು ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಅವಕಾಶ ಸಿಕ್ಕಿದೆ.
- ಪ್ರಾಂಜಲಿ, ಬೆಂಗಳೂರು

**
ಕೃಷಿ ಬಗ್ಗೆ ಏನೂ ಐಡಿಯಾ ಇರಲಿಲ್ಲ. ರಸಗೊಬ್ಬರ ಮತ್ತು ಕೀಟನಾಶಕ ಅಂಗಡಿ ಹಾಕಬೇಕೆಂದಿದ್ದೇನೆ. ಇಲ್ಲಿ ಒಂದಿಷ್ಟು ಮಾಹಿತಿ ಸಿಕ್ಕಿದೆ. ಒಳ್ಳೆಯ ಕಾರ್ಯಕ್ರಮ.
-ಶಶಾಂಕ್, ಬೆಂಗಳೂರು

**
ನಾವು ಬಂದದ್ದು ವ್ಯರ್ಥ ಆಗಬಾರದು. ಇಲ್ಲಿ ಕಂಡ ಹೊಸ ಮಾಹಿತಿಗಳನ್ನು ನಮ್ಮ ಕೃಷಿ ಪದ್ಧತಿಯಲ್ಲಿ ಅಳವಡಿಸಿಕೊಳ್ಳುತ್ತೇವೆ. ಹಲವು ಹೊಸ ವಿಷಯಗಳನ್ನು ಇಲ್ಲಿ ಕಂಡಿದ್ದೇವೆ.
- ಮಹೇಶ್, ರೈತ, ಗುಂಡ್ಲುಪೇಟೆ

**
ನಾವು ಈಗಾಗಲೇ ಮಾಡುತ್ತಿರುವ ಕೃಷಿ ಪದ್ಧತಿಯನ್ನು ಸುಧಾರಿಸಬೇಕು. ಇಲ್ಲಿ ಹೊಸ ವಿಷಯಗಳನ್ನು ಕಂಡಿದ್ದೇವೆ. ಕೃಷಿ ಇಲಾಖೆ ನೆರವಿನಿಂದ ನಮ್ಮ ಬೇಸಾಯ ಪದ್ಧತಿಯಲ್ಲಿ ಅಳವಡಿಸಿಕೊಳ್ಳುತ್ತೇವೆ.
-ಚಂದ್ರು, ರೈತ, ಗುಂಡ್ಲುಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT