ಮಲ್ಲೆ ಗಿಡಕ್ಕೆ ಹೆಡೆಮಟ್ಟೆ ಆಸರೆ

ಮಂಗಳವಾರ, ಏಪ್ರಿಲ್ 23, 2019
32 °C

ಮಲ್ಲೆ ಗಿಡಕ್ಕೆ ಹೆಡೆಮಟ್ಟೆ ಆಸರೆ

Published:
Updated:
Prajavani

ತುಮಕೂರು ಜಿಲ್ಲೆ ತೋವಿನಕೆರೆ, ಮಧುಗಿರಿ ಭಾಗದಲ್ಲಿ ಹೆಚ್ಚಾಗಿ ಮಲ್ಲೆ, ಮಲ್ಲಿಗೆ, ಕಾಕಡ ಹೂವಿನ ಕೃಷಿ ಮಾಡುವ ರೈತರಿದ್ದಾರೆ. ಅದರಲ್ಲೂ ತೋವಿನಕೆರೆ ಭಾಗದಲ್ಲಿ ಸಣ್ಣ ಹಿಡುವಳಿಯಲ್ಲಿ ಮಲ್ಲೆ ಹೂವು ಬೆಳೆಯುವವರ ಸಂಖ್ಯೆ ಹೆಚ್ಚು.

ಮಲ್ಲಿಗೆ ಹೂವಿನ ಬಳ್ಳಿಗೆ ಚಪ್ಪರ ಹಾಕಿ, ಹಬ್ಬಿಸುವುದು ವಾಡಿಕೆ. ಇದರಿಂದ ನಡುವೆ ಬಡ್ಡೆ (ಬುಡ) ದಪ್ಪ ಹಾಗೂ ಗಟ್ಟಿಯಾಗಿದ್ದು, ರೆಂಬೆಗಳು ಚಪ್ಪರದ ಮೇಲೆ ಹರಡಿಕೊಳ್ಳುತ್ತವೆ.


ಲ್ಲೆ ಗಿಡಗಳಲ್ಲಿ ಹೂವು ಬಿಡಿಸುತ್ತಿರುವುದು (ಚಿತ್ರ: ಪದ್ಮರಾಜು, ತೋವಿನಕರೆರೆ)

ತೋವಿನಕೆರೆ ಭಾಗದಲ್ಲಿ ಮಲ್ಲೆ ಹೂವಿನ ಗಿಡ ಬೆಳೆಸುವ ರೈತರು, ಸುತ್ತಲೂ ಗಿಡಗಳಿಗೆ ತೆಂಗಿನ ಹೆಡೆಮಟ್ಟೆಗಳನ್ನು ಆಧಾರವಾಗಿ ನೀಡುತ್ತಾರೆ. ಗಿಡ ಚಿಕ್ಕದಿದ್ದರೆ ನಾಲ್ಕು, ವಿಶಾಲವಾಗಿ ಹರಡಿಕೊಂಡಿದ್ದರೆ ನಾಲ್ಕಕ್ಕಿಂತ ಹೆಚ್ಚು ಹೆಡೆಮಟ್ಟೆಗಳನ್ನು ಗಿಡಗಳಿಗೆ ಆಸರೆಯಾಗಿ ನೀಡುತ್ತಾರೆ.

ಈ ಪಟ್ಟಣದ ಹೊರವಲಯದಲ್ಲಿ ಗೌರಮ್ಮ ಎಂಬುವವರು ನಾಲ್ಕು ಗುಂಟೆಯಲ್ಲಿ 35 ಮಲ್ಲೆಗಿಡಗಳನ್ನು ಬೆಳೆದಿದ್ದಾರೆ. ಪ್ರತಿ ಗಿಡಕ್ಕೆ ನಾಲ್ಕು ಹೆಡೆಮಟ್ಟೆಗಳನ್ನು ಆಧಾರವಾಗಿ ಕೊಟ್ಟಿದ್ದಾರೆ.

‘ಹೀಗೆ ಮಾಡುವುದರಿಂದ ಹೂವಿನ ಗಿಡದ ಕೊಂಬೆಗಳು ನೆಲಕ್ಕೆ ತಾಕುವುದಿಲ್ಲ. ಮಳೆಗಾಲದಲ್ಲಿ ರೆಂಬೆಗಳು ನೆಲಕ್ಕೆ ತಾಕಿ ಹೂವು ಹಾಳಾಗುವುದನ್ನ ತಪ್ಪುತ್ತದೆ. ಹೂವಿಗೆ ಮಣ್ಣು ಅಂಟು ಕೊಳ್ಳುವುದಿಲ್ಲ. ಗಿಡಗಳಿಗೆ ನೀರು ಹಾಯಿಸುವುದು, ಗೊಬ್ಬರ, ಗೋಡು ಕೊಡುವುದಕ್ಕೂ ಸುಲಭವಾಗುತ್ತದೆ’ ಎನ್ನುತ್ತಾರೆ ಈ ಭಾಗದ ಹೂವಿನ ಕೃಷಿಕರು.

ಚಿಕ್ಕ ಹಿಡುವಳಿಯಲ್ಲಿ ಹೂವಿನ ಗಿಡಗಳನ್ನು ಬೆಳೆಸುವ ಈ ಭಾಗದ ರೈತರು ವಾರ್ಷಿಕವಾಗಿ ಲಕ್ಷ ರೂಪಾಯಿಗೂ ಹೆಚ್ಚು ವಹಿವಾಟು ನಡೆಸುತ್ತಾರೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !