ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಹಾಕಿ ತರಕಾರಿ ಬೀಜ ತಗೊಳ್ಳಿ

Last Updated 11 ಫೆಬ್ರುವರಿ 2019, 19:31 IST
ಅಕ್ಷರ ಗಾತ್ರ

ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯಲ್ಲಿ (ಐಐಎಚ್‌ಆರ್‌) ಲಭ್ಯವಿರುವ ತರಕಾರಿ ಬೀಜಗಳನ್ನು ಕೊಂಡು ಕೊಳ್ಳಲು ರೈತರು ಇನ್ನು ಮುಂದೆ ಹೆಸರಘಟ್ಟದಲ್ಲಿರುವ ಸಂಸ್ಥೆಗೇ ಬರಬೇಕಿಲ್ಲ. ಆ ತರಕಾರಿ ಬೀಜಗಳು ನಿಮ್ಮೂರಿನ ಬಸ್‌ ನಿಲ್ದಾಣಗಳಲ್ಲಿಯೂ ಸಿಗಬಹುದು!

ಹೇಗೆ ಎಂದು ಅಚ್ಚರಿಯಾಯಿತೆ? ಹೌದು, ತರಕಾರಿ ಬೀಜಗಳನ್ನು ರೈತರ ಬಳಿಗೆ ಕೊಂಡೊಯ್ಯಲೆಂದೇ, ಐಐಎಚ್‌ಆರ್ ಸಂಸ್ಥೆ ಸ್ವಯಂ ಚಾಲಿತ ತರಕಾರಿ ಬೀಜ ವಿತರಣಾ ಯಂತ್ರವನ್ನು ಸಿದ್ಧಪಡಿಸಿದೆ. ಯಂತ್ರದ ಬಲಬದಿಯಲ್ಲಿ ನೋಟು ತೂರಿಸಲು ಒಂದು ಕಿಂಡಿ ಇದೆ. ಅದರಲ್ಲಿ ₹20 ರೂಪಾಯಿ ನೋಟು ತೂರಿಸಿದರೆ ಸಾಕು, ಎದುರುಗಡೆ ಇರುವ ಪರದೆಯಲ್ಲಿ ಲಭ್ಯವಿರುವ ತರಕಾರಿ ಬೀಜಗಳ ಚಿತ್ರ ಬರುತ್ತದೆ. ಯಾವ ಬೀಜ ಬೇಕೋ, ಆ ಚಿತ್ರದ ಮೇಲೆ ಒತ್ತಿದರೆ, ಯಂತ್ರದ ತಳಭಾಗದಲ್ಲಿರುವ ಟ್ರೇನಲ್ಲಿ ನೀವು ಆಯ್ಕೆ ಮಾಡಿದ ಬೀಜದ ಪೊಟ್ಟಣ ಬೀಳುತ್ತದೆ. ಅಂದ ಹಾಗೆ, ಈ ಯಂತ್ರದಲ್ಲಿ ಆರು ಟ್ರೇಗಳಿವೆ. ಅದರಲ್ಲಿ 18 ವಿವಿಧ ಬಗೆಯ ತರಕಾರಿ ಬೀಜಗಳ ಪೊಟ್ಟಣ ಇರಿಸಲಾಗಿದೆ.

ಸದ್ಯಕ್ಕೆ ಈ ಯಂತ್ರವನ್ನು ಪ್ರಾಯೋಗಿಕವಾಗಿ ಇತ್ತೀಚೆಗೆ ನಡೆದ ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಪ್ರಾತ್ಯಕ್ಷಿಕೆ ನೀಡಲಾಗಿತ್ತು. ‘ಮುಂದಿನ ದಿನಗಳಲ್ಲಿ ರಾಜ್ಯ ತೋಟಗಾರಿಕಾ ಇಲಾಖೆ ಸಹಯೋಗದಲ್ಲಿ ರಾಜ್ಯದ ಎಲ್ಲ ಬಸ್‌ ನಿಲ್ದಾಣಗಳಲ್ಲಿ ಈ ಯಂತ್ರವನ್ನು ಅಳವಡಿಸುವ ಚಿಂತನೆ ಇದೆ’ ಎಂದು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಎಂ.ಆರ್. ದಿನೇಶ ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT