ಹಕ್ಕಿಗಳನ್ನು ಬೆದರಿಸಲು ದೇಸಿ ತಂತ್ರ

7

ಹಕ್ಕಿಗಳನ್ನು ಬೆದರಿಸಲು ದೇಸಿ ತಂತ್ರ

Published:
Updated:
ಬಾಟಲಿಗಳ ಠಣ್‌ ಠಣ್‌ ನಾದದಿಂದ ಹಕ್ಕಿಗಳನ್ನು ಬೆದರಿಸುವ ತಂತ್ರ

ಪ್ರಾಣಿ ಪಕ್ಷಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ರೈತರು ಹಲವು ವಿಧಾನಗಳನ್ನು ಅನುಸರಿಸುತ್ತಾರೆ. ಬೆದರು ಬೊಂಬೆ ನಿಲ್ಲಿಸುವುದು, ಸೀರೆ ಕಟ್ಟುವುದು, ಬಣ್ಣಬಣ್ಣದ ಪ್ಲಾಸ್ಟಿಕ್‌ಗಳನ್ನು ಟೇಪು ರೀತಿಯಲ್ಲಿ ಜಮೀನಿನ ಸುತ್ತಾ ಸುತ್ತುವುದು, ಬಣ್ಣದ ಬಟ್ಟೆಗಳನ್ನು ಗುಜ್ಜುಗಳಿಗೆ ನೇತು ಹಾಕುವುದು.. ಹೀಗೆ ಪ್ರಾಣಿಗಳನ್ನು ಗದರಿಸುವಂತಹ ಎಲ್ಲ ತರಹದ ಪದ್ಧತಿಗಳನ್ನು ಅಳವಡಿಸುತ್ತಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ವ್ಯಾಪ್ತಿಯ ದ್ರಾಕ್ಷಿ ಬೆಳೆಗಾರರು ಇವೆಲ್ಲವುಗಳಿಗಿಂತ ಭಿನ್ನವಾದ ‘ಬೆಳೆ ರಕ್ಷಣೆ’ ಪ್ರಯೋಗಗಳನ್ನು ತಮ್ಮ ಜಮೀನುಗಳಲ್ಲಿ ಅಳವಡಿಸುತ್ತಿದ್ದಾರೆ. ಅದೇ ಕತ್ತಾಳೆ ದಿಂಡಿಗೆ ಬಣ್ಣದ ಬಟ್ಟೆಗಳನ್ನು ಕಟ್ಟಿ ಹಕ್ಕಿಗಳನ್ನು ಬೆದರಿಸುವ ಪ್ರಯೋಗ. ವರದನಾಯನಹಳ್ಳಿ– ಚಿಕ್ಕಬಳ್ಳಾಪುರದ ದಾರಿಯ ದ್ರಾಕ್ಷಿ ತೋಟದಲ್ಲಿ ಇಂಥ ಪ್ರಯೋಗಗಳು ಕಾಣುತ್ತವೆ.

ದ್ರಾಕ್ಷಿ ತೋಟದಲ್ಲಿ ಹಕ್ಕಿಗಳ ಹಾವಳಿ ಅಧಿಕ. ಹಕ್ಕಿಗಳ ನಿಯಂತ್ರಣಕ್ಕಾಗಿ ರೈತರು ಡ್ರಮ್ ಬಾರಿಸಿ ನೋಡಿದರು. ಕ್ಯಾಟರ್ ಬಿಲ್ ಬಳಕೆ ಮಾಡಿದರು. ಯಾವುದಕ್ಕೂ ಜಗ್ಗದಿದ್ದಾಗ, ಕತ್ತಾಳೆಯ ದಿಂಡಿಗೆ ಬಣ್ಣದ ಬಟ್ಟೆಗಳನ್ನು ಕಲಾತ್ಮಕವಾಗಿ ಕಟ್ಟಿ ನಿಲ್ಲಿಸಿ, ಹಕ್ಕಿಗಳನ್ನು ಓಡಿಸುವ ಪ್ರಯತ್ನ ಮಾಡಿದರು. ಅದು ಯಶಸ್ವಿಯಾಯಿತು. ಈಗ ಅದರ ಜತೆಗೆ, ದ್ರಾಕ್ಷಿ ತೋಟದ ನಡುವೆ ಖಾಲಿ ಬಾಟಲಿಗಳನ್ನು ಒಂದರ ಪಕ್ಕ ಒಂದು ತೂಗಾಡುವಂತೆ ನೇತು ಹಾಕಿದ್ದಾರೆ. ಗಾಳಿ ಬಂದಾಗ, ಆ ಶೀಶೆಗಳು ಒಂದಕ್ಕೊಂದಕ್ಕೆ ತಾಗಿ ಶಬ್ಧ ಬರುತ್ತದೆ. ಇದರಿಂದ ಹಕ್ಕಿಗಳು, ದ್ರಾಕ್ಷಿ ಬಳ್ಳಿ ಬಳಿ ಸುಳಿಯುವುದಿಲ್ಲ ಎಂಬುದು ಅವರ ಅನುಭವದ ನುಡಿ. 

ದ್ರಾಕ್ಷಿ ಕಾಯಿ ಕಚ್ಚಿದಾಗ ಗಿಣಿಗಳು ದಾಳಿ ಮಾಡುತ್ತವೆ. ಅವು ಕಾಯಿ ಕತ್ತರಿಸಿ ಬೀಜ ತಿನ್ನುತ್ತವೆ. ಗೊರವಂಕ, ಕಾಗೆ, ಬಾವಲಿಗಳು ದ್ರಾಕ್ಷಿ ಹಣ್ಣಾದ ಮೇಲೆ ದಾಳಿ ಮಾಡುತ್ತವೆ. ಕೆಲವು ಚೂಪು ಕೊಕ್ಕಿನ ಸಣ್ಣ ಹಕ್ಕಿಗಳು ಹಣ್ಣಿನ ರಸವನ್ನು ಹೀರುತ್ತವೆ.ಇಂಥ ಸಂದರ್ಭದಲ್ಲಿ ಹಕ್ಕಿ ರಕ್ಷಣೆಗಾಗಿ ದ್ರಾಕ್ಷಿ ತೋಟಕ್ಕೆ ಬಲೆ ಹಾಕುವ ಸಂಪ್ರದಾಯವಿದೆ. ಆದರೆ, ಅದು ದುಬಾರಿಯಾಗುತ್ತದೆ. ಮಾತ್ರವಲ್ಲ, ಬಲೆ ಹಾಕಿದರೆ, ಹಕ್ಕಿಗಳು ಹಣ್ಣು ತಿನ್ನಲು ಬಂದಾಗ ಬಲೆಗೆ ಕಾಲು ಸಿಕ್ಕಿ ಹಾಕಿಕೊಂಡು ಪ್ರಾಣ ಕಳೆದುಕೊಳ್ಳುವ ಸಾಧ್ಯವಿದೆ. ಹಾಗಾಗಿ ಈ ದೇಸಿ ತಂತ್ರಗಳನ್ನು ಅನುಸರಿಸುತ್ತಿದ್ದೇವೆ’ ಎನ್ನುತ್ತಾರೆ ರೈತ ಮುನಿಯಪ್ಪ. 

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !