ಧರ್ಮಪುರ: ‘ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಔಷಧಿಗಳ ಬಳಕೆಯಿಂದ ಭೂಮಿ ಬಂಜೆಯಾಗುತ್ತಿದ್ದು, ರೈತರು ಸಮತೋಲನ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು’ ಎಂದು ಕೃಷಿ ಸಹಾಯಕ ನಿರ್ದೇಶಕ ಜೆ. ಅಶೋಕ್ ತಿಳಿಸಿದರು.

ಇಲ್ಲಿನ ಗ್ರಾಮ ಪಂಚಾಯಿತಿ ಆವರಣದಲ್ಲಿ ರೈತ ಸಂಪರ್ಕ ಕೇಂದ್ರದಿಂದ ಬುಧವಾರ ಹಮ್ಮಿಕೊಂಡಿದ್ದ ಸಮತೋಲನ ರಾಸಾಯನಿಕ ಗೊಬ್ಬರ ಬಳಕೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಕೈಗಾರೀಕರಣ ತ್ಯಾಜ್ಯದಿಂದ ಮಣ್ಣು ಕಲುಷಿತವಾಗಿದೆ. ಕೊಟ್ಟಿಗೆ, ಸಾವಯವ ಗೊಬ್ಬರ ಶೇಖರಣೆ ಮಾಡಿಕೊಂಡು ಭೂಮಿಗೆ ಹಾಕಬೇಕು. ಇದರಿಂದ ಇಳುವರಿ ಹೆಚ್ಚುತ್ತದೆ. ಈ ಮಧ್ಯೆ ಭೂಮಿಗೆ ಬೇಕಾದ ಪೋಷಕಾಂಶಗಳ ಅಭಿವೃದ್ಧಿಗೆ ಸಮತೋಲನ ರಾಸಾಯನಿಕ ಗೊಬ್ಬರವನ್ನೂ ಹಾಕಬೇಕು. ರೈತರು ನ್ಯಾನೊ ದ್ರವರೂಪದ ಗೊಬ್ಬರ ಬಳಕೆ ಮಾಡಿ, ಯೂರಿಯಾ ಕೊರತೆ ಹೋಗಲಾಡಿಸಿ’ ಎಂದರು.

‘ರಾಸಾಯನಿಕ ಗೊಬ್ಬರ ಮತ್ತು ಔಷಧಿ ಮಾರಾಟಗಾರರು ಕೃಷಿ ಪದವೀಧರರಾಗಿರಬೇಕು. ರೈತರು ಯಾವ ಬೆಳೆ ಬೆಳೆದಿದ್ದಾರೆ. ಎಷ್ಟು ಪ್ರಮಾಣದ ಗೊಬ್ಬರ ಕೊಡಬೇಕೆಂಬುದನ್ನು ಅರಿತು ನಿರ್ದೇಶನ ನೀಡಬೇಕು. ಅಂಗಡಿಗಳಲ್ಲಿ ಗೊಬ್ಬರ, ಔಷಧಿ ಕೊಂಡುಕೊಳ್ಳುವ ರೈತರು ತಪ್ಪದೇ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಕೊಂಡೊಯ್ಯಬೇಕು. ಮಣ್ಣು ಮತ್ತು ನೀರು ಪರೀಕ್ಷೆ ಮಾಡಿಸಿ ಕೃಷಿ ಚಟುವಟಿಕೆ ಆರಂಭಿಸಿ’ ಎಂದು ಸಲಹೆ ನೀಡಿದರು.

ಕೃಷಿ ಅಧಿಕಾರಿ ಕಿರಣ್ಕುಮಾರ್, ಪಿಡಿಒ ವಿವೇಕ್ ತೇಜಸ್ವಿ ಮಾತನಾಡಿದರು.

ಕೃಷಿ ಇಲಾಖೆಯ ಗೋಪಾಲ್, ನಾರಾಯಣಪ್ಪ, ಕೆ.ಎಚ್. ಮೂರ್ತಿ, ಶಿವಣ್ಣ, ಪ್ರಹ್ಲಾದ್ ಶ್ರೇಷ್ಠಿ, ಆದರ್ಶ್, ಮಲ್ಲೇಶ್, ಯಶವಂತ್, ಪರಮೇಶ್, ಕುಮಾರ್, ನಾಗರಾಜ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-44-1528928140

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.